ETV Bharat / sports

ಟೆಸ್ಟ್​​ನಲ್ಲಿ ಟಿ -20 ಶೈಲಿ ಬ್ಯಾಟಿಂಗ್​ ಮಾಡುವ ಬ್ರೂಕ್​​ಗೆ ಐಪಿಎಲ್​ ಅತ್ಯಂತ ಕಠಿಣವಂತೆ..! ಇಂಗ್ಲೆಂಡ್​​ ಬ್ಯಾಟರ್​​ ಹೀಗೆ ಹೇಳಲು ಕಾರಣ ಇಲ್ಲಿದೆ..!!

Harry Brook:ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಟೆಸ್ಟ್‌ನಲ್ಲಿ ಟಿ 20ಯಂತೆ ಬ್ಯಾಟಿಂಗ್ ಮಾಡುತ್ತಿರುವ ಹ್ಯಾರಿ ಬ್ರೂಕ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ.

ಹ್ಯಾರಿ ಬ್ರೂಕ್
Harry Brook
author img

By

Published : Jul 28, 2023, 9:26 PM IST

ನವದೆಹಲಿ: ಇಂಗ್ಲೆಂಡ್​ನ ಬಲಗೈ ಬ್ಯಾಟ್ಸ್​​ಮನ್ ಹ್ಯಾರಿ ಬ್ರೂಕ್ ವಿಶ್ವ ಕ್ರಿಕೆಟ್​​ನ ಉದಯೋನ್ಮುಖ ತಾರೆ. ಕ್ರಿಕೆಟ್ ತಜ್ಞರು ಬ್ರೂಕ್ ಅವರನ್ನು ಭವಿಷ್ಯದ ದೊಡ್ಡ ಆಟಗಾರ ಎಂದು ಪರಿಗಣಿಸಿದ್ದಾರೆ. ಈ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಟೆಸ್ಟ್​ನಲ್ಲೂ ಟಿ20ಯಂತಹ ಬಿರುಸಿನ ಬ್ಯಾಟಿಂಗ್ ಮಾಡುತ್ತಾರೆ. ನಡೆಯುತ್ತಿರುವ ಅಂತಿಮ ಆ್ಯಶಸ್​​​ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​​ನಲ್ಲಿ 91 ಬಾಲ್​ನಲ್ಲಿ 11 ಬೌಂಡರಿ ಮತ್ತು 2 ಸಿಕ್ಸ್​​ನಿಂದ 85 ರನ್​ ಗಳಿಸಿ ತಂಡದ ಪರ ಅತಿ ಹೆಚ್ಚು ರನ್​​ ಗಳಿಸಿದ ಬ್ಯಾಟರ್​​ ಎನಿಸಿಕೊಂಡಿದ್ದಾರೆ.

ಇದುವರೆಗಿನ ಟೆಸ್ಟ್‌ಗಳಲ್ಲಿ ಅವರ ಅಂಕಿ - ಅಂಶಗಳು ಸಹ ಆಕರ್ಷಕವಾಗಿವೆ. ಬ್ರೂಕ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸುಲಭವಾಗಿ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಆದರೆ, ಈ ಇಂಗ್ಲೆಂಡ್ ಬ್ಯಾಟ್ಸ್​​ಮನ್​ಗೆ ಐಪಿಎಲ್​ನ ಭಯ ಕಾಡುತ್ತಿದೆ. ಆ್ಯಶಸ್ 2023ರಲ್ಲಿ ಆಡುತ್ತಿರುವ ಬ್ರೂಕ್ ಪತ್ರಿಕಾಗೋಷ್ಠಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅತ್ಯಂತ ಕಠಿಣ ಸ್ಪರ್ಧೆಯಾಗಿದೆ ಎಂದು ಹೇಳಿದ್ದಾರೆ.

ಐಪಿಎಲ್ ಅತ್ಯಂತ ಕಠಿಣ ಟೂರ್ನಿ: 5 ನೇ ಆ್ಯಶಸ್ ಟೆಸ್ಟ್ ಸಮಯದಲ್ಲಿ, ಬ್ರೂಕ್ ಅವರನ್ನು ಆ್ಯಶಸ್ ನಿಮ್ಮ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿಕೆಯ ಅನುಭವವಾಗಿದೆಯೇ? ಎಂದು ಕೇಳಿದ ಪ್ರಶ್ನೆಗೆ, ಪ್ರತಿಕ್ರಿಯೆಯಾಗಿ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್, "ಬಹುಶಃ ಆ್ಯಶಸ್​​​ನಲ್ಲಿ ಮಾನಸಿಕ ಬಳಲಿಕೆ ನೀಡಬಹುದು, ಆದರೆ, ಐಪಿಎಲ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯಂತ ಕಷ್ಟಕರವಾಗಿದೆ. ಐಪಿಎಲ್ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಎದುರಿಸಿದ ಅತ್ಯಂತ ಕಠಿಣ ಸ್ಪರ್ಧೆಯಾಗಿದೆ" ಎಂದು ಬ್ರೂಕ್ ಹೇಳಿದ್ದಾರೆ.

  • •Question:- Is Ashes the most exhausting experience you've had physically and mentally?.

    •Harry Brook:- "Probably second. IPL is the most and pretty tough in both". pic.twitter.com/mEO4aoBTti

    — CricketMAN2 (@ImTanujSingh) July 28, 2023 " class="align-text-top noRightClick twitterSection" data=" ">

ಬ್ರೂಕ್ ಅವರನ್ನು ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ 13.25 ಕೋಟಿ ರೂಪಾಯಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಐಪಿಎಲ್ 2023ರಲ್ಲಿ ಬ್ರೂಕ್ ಮೇಲೆ ಹೆಚ್ಚಿನ ನಿರೀಕ್ಷೆ ಇರಿಸಲಾಗಿತ್ತು. ಆದರೆ, ಅವರ ಬ್ಯಾಟ್​​ನಿಂದ ನಿರೀಕ್ಷಿತ ಪ್ರದರ್ಶನ ಬಾರದಿದ್ದದ್ದು, ಸನ್​ ರೈಸರ್ಸ್​ ಈ ಬಾರಿ ಹೀನಾಯವಾದ ಹಿನ್ನಡೆಗೂ ಕಾರಣವಾಗಿತ್ತು. ಸನ್​ ರೈಸರ್ಸ್​ ತಂಡ ಈ ಬಾರಿ ಲೀಗ್​ ಅಂತ್ಯಕ್ಕೆ ಅಂಕ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಅಲಂಕರಿಸಿತ್ತು.

ಐಪಿಎಲ್ 2023 ರಲ್ಲಿ ಬ್ರೂಕ್ ಅವರ ಪ್ರದರ್ಶನ: ಹ್ಯಾರಿ ಬ್ರೂಕ್ 2023 ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಅವರ ಅಂತಾರಾಷ್ಟ್ರೀಯ ಅಂಕಿ ಅಂಶದಿಂದ ಬಿಡ್​​ನಲ್ಲಿ ಹೆಚ್ಚು ಪೈಪೋಟಿ ಪಡೆದು ದೊಡ್ಡ ಮೊತ್ತ ಪಡೆದುಕೊಂಡರು. ಬ್ರೂಕ್ ಐಪಿಎಲ್ 2023 ರ 11 ಪಂದ್ಯಗಳಲ್ಲಿ 21.11 ರ ಸಾಧಾರಣ ಸರಾಸರಿಯೊಂದಿಗೆ ಒಟ್ಟು 154 ರನ್ ಗಳಿಸಿದರು. ಅವರ ಬ್ಯಾಟ್​ನಿಂದ ಪದಾರ್ಪಣೆ ವರ್ಷವೇ ಆಕರ್ಷಕ ಅಜೇಯ ಶತಕ ದಾಖಲಾಗಿದ್ದು, ವಿಶೇಷವಾಗಿದೆ. ಅವರ ಶತಕವನ್ನು ತೆಗೆದುಹಾಕಿದರೆ, 10 ಪಂದ್ಯಗಳಲ್ಲಿ ಅವರ ರನ್ ಸರಾಸರಿ ಕೇವಲ 5.4 ಆಗಿರುತ್ತದೆ. ಹೀಗಾಗಿ ಬ್ರೂಕ್ ಐಪಿಎಲ್‌ನಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ ಎಂದರೆ ತಪ್ಪಾಗದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಘರ್ಜಿಸಿದ್ದಾರೆ. ಹೀಗಾಗಿ ಸ್ವತಃ ಬ್ರೂಕ್​ ಅವರೇ ಐಪಿಎಲ್​​ನ್ನು ಕಠಿಣ ಸ್ಪರ್ಧೆ ಎಂದು ಕರೆದಿದ್ದಾರೆ.

ಬ್ರೂಕ್ ಅಂತಾರಾಷ್ಟ್ರೀಯ ವೃತ್ತಿಜೀವನ: ಹ್ಯಾರಿ ಬ್ರೂಕ್ ಟೆಸ್ಟ್‌ನಲ್ಲಿ ಅತ್ಯಂತ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬ್ರೂಕ್ 12 ಟೆಸ್ಟ್ ಪಂದ್ಯಗಳ 19 ಇನ್ನಿಂಗ್ಸ್‌ಗಳಲ್ಲಿ 65.22 ರ ಅತ್ಯುತ್ತಮ ಸರಾಸರಿ ಮತ್ತು 91.65 ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 1174 ರನ್ ಗಳಿಸಿದ್ದಾರೆ. ಅವರು ಟೆಸ್ಟ್‌ನಲ್ಲಿ 7 ಅರ್ಧ ಶತಕ ಮತ್ತು 4 ಶತಕಗಳನ್ನು ಸಹ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಅವರು 3 ಏಕದಿನಗಳಲ್ಲಿ 28.67 ರ ಸರಾಸರಿಯಲ್ಲಿ 86 ರನ್ ಗಳಿಸಿದ್ದಾರೆ ಮತ್ತು 20 ಟಿ20 ಪಂದ್ಯಗಳ 17 ಇನ್ನಿಂಗ್ಸ್‌ಗಳಲ್ಲಿ, ಬ್ರೂಕ್ 26.57 ರ ಸರಾಸರಿಯಲ್ಲಿ ಒಟ್ಟು 372 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಸಂಜು ಸ್ಯಾಮ್ಸನ್​ ಜರ್ಸಿ ಸೂರ್ಯ ಕುಮಾರ್​​ ತೊಟ್ಟಿದ್ದೇಕೆ..? ಹೊಸ ಕಿಟ್​​​ ಎಡವಟ್ಟು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.