ಲಾರ್ಡ್ಸ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ನ ಕೊನೆಯ ದಿನ ಚೇಸ್ ಮಾಡಬಹುದಾದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಗೆಲ್ಲುವ ಮನಸ್ಸಿನಿಂದ ಆಡದಿದ್ದಕ್ಕೆ ಆಸ್ಟ್ರೇಲಿಯಾದ ದಂತಕತೆ ಶೇನ್ ವಾರ್ನರ್ ಕಿಡಿಕಾರಿದ್ದಾರೆ.
ಲಾರ್ಡ್ಸ್ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ 5ನೇ ದಿನ 169ಕ್ಕೆ ಡಿಕ್ಲೇರ್ ಘೋಷಿಸಿ ಇನ್ನು 75 ಓವರ್ಗಳು ಉಳಿದಿರುವಂತೆ 273 ರನ್ಗಳ ಗುರಿ ನೀಡಿತ್ತು. ಆದರೆ, ಇಂಗ್ಲೆಂಡ್ ಬ್ಯಾಟ್ಸ್ಮನ್ಗಳು 70 ಓವರ್ಗಳಲ್ಲಿ ನಿಧಾನಗತಿ ಬ್ಯಾಟಿಂಗ್ ಮಾಡಿ 3 ವಿಕೆಟ್ ಕಳೆದುಕೊಂಡು 170 ರನ್ಗಳಿಸಿ ಡ್ರಾ ಸಾಧಿಸಿದರು.
ಆರಂಭಿಕರಾಗಿ ಕಣಕ್ಕಿಳಿದಿದ್ದ ರೋರಿ ಬರ್ನ್ಸ್ ಮತ್ತು ಡಾಮ್ ಸಿಬ್ಲೆ ರಕ್ಷಣಾತ್ಮಕ ಆಟಕ್ಕೆ ಮುಂದಾಗಿ ಗೆಲ್ಲದಿರಲು, ಸೋಲದಿದ್ದರೆ ಸಾಕು ಎನ್ನುವ ಮನಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡಿದರು. 5 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿದ ಸಿಬ್ಲೆ 207 ಎಸೆತಗಳಲ್ಲಿ ಅಜೇಯ 60 ರನ್ಗಳಿಸಿದರೆ, ಪೋಪ್ 20 ರನ್ಗಳಿಸಿದರು. ಬರ್ನ್ಸ್ 81 ಎಸೆತಗಳಲ್ಲಿ 25, ಕ್ರಾಲೆ 25 ಎಸೆತಗಳಲ್ಲಿ 2, ರೂಟ್ 71 ಎಸೆತಗಳಲ್ಲಿ 40 ರನ್ಗಳಿಸಿ ಔಟಾದರು.
-
Disappointed at the negative approach from England y’day as they never even contemplated chasing down a very getable total. A huge opportunity missed on how to chase on the 5th day, plus exciting for spectators, viewers & test cricket ! @robkey612 @nassercricket @MichaelVaughan
— Shane Warne (@ShaneWarne) June 7, 2021 " class="align-text-top noRightClick twitterSection" data="
">Disappointed at the negative approach from England y’day as they never even contemplated chasing down a very getable total. A huge opportunity missed on how to chase on the 5th day, plus exciting for spectators, viewers & test cricket ! @robkey612 @nassercricket @MichaelVaughan
— Shane Warne (@ShaneWarne) June 7, 2021Disappointed at the negative approach from England y’day as they never even contemplated chasing down a very getable total. A huge opportunity missed on how to chase on the 5th day, plus exciting for spectators, viewers & test cricket ! @robkey612 @nassercricket @MichaelVaughan
— Shane Warne (@ShaneWarne) June 7, 2021
" ನಿನ್ನೆ ಇಂಗ್ಲೆಂಡ್ ಆಟಗಾರರ ಋಣಾತ್ಮಕ ಮನೋಭಾವನೆ ನನಗೆ ನಿರಾಸೆ ತರಿಸಿದೆ. ಏಕೆಂದರೆ ಅವರು ತಲುಪಬಹುದಾದ ಗುರಿಯನ್ನು ಬೆನ್ನಟ್ಟಲೂ ಸಹಾ ಆಲೋಚಿಸಲಿಲ್ಲ. ಪ್ರೇಕ್ಷಕರು,ವೀಕ್ಷಕರು ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ 5ನೇ ದಿನದಂದು ಹೇಗೆ ಬೆನ್ನಟ್ಟಬೇಕು ಎಂಬುದನ್ನು ತೋರಿಸುವ ಒಂದು ದೊಡ್ಡ ಅವಕಾಶವನ್ನು ಕಳೆದುಕೊಂಡರು" ಎಂದು ಟ್ವೀಟ್ ಮೂಲಕ ನಿರಾಸೆ ವ್ಯಕ್ತಪಡಿಸಿದ್ದಾರೆ.
ಆದರೆ, ಇಂಗ್ಲೆಂಡ್ ಆಟವನ್ನು ಸಮರ್ಥಿಸಿಕೊಂಡಿದ್ದ ನಾಯಕ ರೂಟ್, ಕಿವೀಸ್ ಗುಣಮಟ್ಟದ ಬೌಲರ್ಗಳೆದುರು ನಾವು ಟೆಸ್ಟ್ ಪಂದ್ಯವನ್ನು ಉಳಿಸಿಕೊಳ್ಳಲು ಆಡಿದೆವು ಎಂದು ತಿಳಿಸಿದ್ದಾರೆ.
ಖಂಡಿತ ಕೆಲವರಿಗೆ ನಿರಾಸೆಯಾಗಿರುತ್ತದೆ. ಆದರೆ, ನಮ್ಮ ದೃಷ್ಟಿಕೋನದಲ್ಲಿ ನಾವು ಈ ಸರಣಿಯಲ್ಲಿ ತುಂಬಾ ಚೆನ್ನಾಗಿ ಆಡಿದ್ದೇವೆ. ಇದನ್ನು ಇಲ್ಲಿಯೇ ಬಿಟ್ಟು ಮುಂದು ಹೋಗಬೇಕಿದೆ. ನಮಗೆ ಎಡ್ಗ್ಬಸ್ಟನ್ನಲ್ಲಿ ಸರಣಿ ಗೆಲ್ಲುವ ಅವಕಾಶವಿದೆ ಎಂದು ತಮ್ಮ ಬ್ಯಾಟ್ಸ್ಮನ್ಗಳ ಆಟವನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನು ಓದಿ:WTC ಫೈನಲ್ನಲ್ಲಿ ಭಾರತದ ವಿರುದ್ಧವೇ ತೊಡೆ ತಟ್ಟಲಿದ್ದಾನೆ ಕನ್ನಡಿಗ ದಂಪತಿಯ ಮಗ