ETV Bharat / sports

ಇನ್ನಿಂಗ್ಸ್​ ಸೋಲಿನೊಂದಿಗೆ 18 ವರ್ಷಗಳ ಹಿಂದಿನ ಬೇಡದ ದಾಖಲೆಗೆ ಪಾತ್ರವಾದ ಇಂಗ್ಲೆಂಡ್​! - ಇಂಗ್ಲೆಂಡ್ ಕಳಪೆ ದಾಖಲೆ

ಪ್ರಸ್ತುತ 5 ಪಂದ್ಯಗಳ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 0-3ರಲ್ಲಿ ಹಿನ್ನಡೆ ಅನುಭವಿಸಿದೆ. ಮೂರು ಪಂದ್ಯಗಳಲ್ಲೂ ಯಾವುದೇ ಪ್ರತಿರೋಧ ತೋರದೇ ಸೋಲು ಕಾಣುತ್ತಿರುವ ಆಂಗ್ಲರ ತಂಡ 2021ರಲ್ಲಿ 9ನೇ ಸೋಲು ಕಂಡಿದೆ.

England lost 9 test matches in 2021
ಇಂಗ್ಲೆಂಡ್​ಗೆ 2021ರಲ್ಲಿ ಗರಿಷ್ಠ ಸೋಲು
author img

By

Published : Dec 28, 2021, 5:07 PM IST

ಮೆಲ್ಬೋರ್ನ್​: ಇಂಗ್ಲೆಂಡ್ ತಂಡ ಆ್ಯಶಸ್​​ ಸರಣಿಯ 3ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ಯಾಲೆಂಡರ್​ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್​ ಪಂದ್ಯಗಳಲ್ಲಿ ಸೋಲು ಕಂಡ ಕಳಪೆ ದಾಖಲೆಗೆ ಪಾತ್ರವಾಗಿದೆ.

ಪ್ರಸ್ತುತ 5 ಪಂದ್ಯಗಳ ಪ್ರತಿಷ್ಠಿತ ಆ್ಯಶಸ್​ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ಈಗಾಗಲೇ 0-3ರಲ್ಲಿ ಹಿನ್ನಡೆ ಅನುಭವಿಸಿದೆ. ಮೂರು ಪಂದ್ಯಗಳಲ್ಲೂ ಯಾವುದೇ ಪ್ರತಿರೋಧ ತೋರದೇ ಸೋಲು ಕಾಣುತ್ತಿರುವ ಆಂಗ್ಲರ ತಂಡ 2021ರಲ್ಲಿ 9ನೇ ಸೋಲು ಕಂಡಿದೆ.

2003ರಲ್ಲಿ ಬಾಂಗ್ಲಾದೇಶ ತಂಡ 9 ಪಂದ್ಯಗಳಲ್ಲಿ ಸೋಲು ಕಂಡು ಈ ಕಳಪೆ ದಾಖಲೆಗೆ ಪಾತ್ರವಾಗಿತ್ತು. ಇದೀಗ ಇಂಗ್ಲೆಂಡ್​ 2021ರಲ್ಲಿ ಅಷ್ಟೇ ಸೋಲು ಕಂಡು ಬಾಂಗ್ಲಾದೇಶದೊಂದಿಗೆ ಆ ದಾಖಲೆಯನ್ನು ಹಂಚಿಕೊಂಡಿದೆ.

ಜೋ ರೂಟ್ ನೇತೃತ್ವದ ಇಂಗ್ಲೆಂಡ್ ತಂಡ ಪ್ರಸ್ತುತ ವರ್ಷದಲ್ಲಿ ಭಾರತದೆದುರು 5 ಟೆಸ್ಟ್​, ಆಸ್ಟ್ರೇಲಿಯಾ ವಿರುದ್ಧ 3 ಮತ್ತು ನ್ಯೂಜಿಲ್ಯಾಂಡ್ ವಿರುದ್ಧ 1 ಟೆಸ್ಟ್​ ಪಂದ್ಯದಲ್ಲಿ ಸೋಲು ಕಂಡಿದೆ. ಇಂಗ್ಲೆಂಡ್​ 2-0ಯಲ್ಲಿ ಶ್ರೀಲಂಕಾ ವಿರುದ್ಧ ಸರಣಿ ಗೆದ್ದಿರುವುದು 2021ರಲ್ಲಿ ತಂಡದ ಏಕೈಕ ಧನಾತ್ಮಕ ಸಾಧನೆಯಾಗಿದೆ.

ಇದನ್ನೂ ಓದಿ:ಇಂಗ್ಲೆಂಡ್​ 68ಕ್ಕೆ ಆಲೌಟ್​ : ಭಾರತವನ್ನು ಗೇಲಿ ಮಾಡಿದ್ದ ಮೈಕಲ್​ ವಾನ್​​ರನ್ನು ಟ್ರೋಲ್​ ಮಾಡಿದ ಜಾಫರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.