ಲಂಡನ್: 2017ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತದ ಪ್ರಮುಖ ಇಬ್ಬರು ಬ್ಯಾಟ್ಸ್‌ವುಮೆನ್‌ಗಳನ್ನ ಔಟ್ ಮಾಡುವ ಮೂಲಕ ಇಂಗ್ಲೆಂಡ್ಗೆ ಏಕದಿನ ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಅಲೆಕ್ಸ್ ಹಾರ್ಟ್ಲಿ ಪಕ್ಕ ಆರ್ಸಿಬಿಮಾನಿಯಾಗಿದ್ದು, ಈ ಸಲ ಕಪ್ ನಮ್ದೇ ಎಂದು ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ಐಪಿಎಲ್ನಲ್ಲಿ ಮೂರು ಬಾರಿ ಫೈನಲ್ ತಲುಪಿದರೂ ಕಪ್ ಗೆಲ್ಲಲು ಆರ್ಸಿಬಿ ವಿಫಲವಾಗಿದೆ. ಆದರೂ ಅಭಿಮಾನಿಗಳಲ್ಲಿ ಆರ್ಸಿಬಿ ಮೇಲಿನ ಕ್ರೇಜ್ ಕಡಿಮೆಯಾಗಿಲ್ಲ. ಪ್ರತಿ ವರ್ಷವೂ ಹೊಸ ಹುರುಪಿನಲ್ಲಿ ಈ ಸಲ ಕಪ್ ನಮ್ದೇ ಎನ್ನುವ ಘೋಷವಾಕ್ಯವನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಮೊಳಗಿಳಿಸುತ್ತಿರುತ್ತಾರೆ. ಆದರೆ, ಈ ಬಾರಿಯು ಮುಂದುವರಿದಿದೆ. ವಿಶೇಷವೆಂದರೆ ಇಂಗ್ಲೆಂಡ್ ಮಹಿಳಾ ತಂಡದ ಅಲೆಕ್ಸ್ ಹಾರ್ಟ್ಲಿ ಕನ್ನಡದಲ್ಲಿ ' ಈ ಸಲ ಕಪ್ ನಮ್ದೇ' ಎಂದು ಟ್ವೀಟ್ ಮಾಡಿ ಕನ್ನಡಿಗರ ಮನ ಗೆದ್ದಿದ್ದಾರೆ.
-
ಈ ಸಲ ಕಪ್ ನಮ್ದೇ ❤️
— Alexandra Hartley (@AlexHartley93) April 14, 2021 " class="align-text-top noRightClick twitterSection" data="
">ಈ ಸಲ ಕಪ್ ನಮ್ದೇ ❤️
— Alexandra Hartley (@AlexHartley93) April 14, 2021ಈ ಸಲ ಕಪ್ ನಮ್ದೇ ❤️
— Alexandra Hartley (@AlexHartley93) April 14, 2021
ಈ ಟ್ವೀಟ್ ಟ್ವಿಟರ್ನಲ್ಲಿ ಕಿಚ್ಚೆಬ್ಬಿಸುತ್ತಿದೆ. ಆರ್ಸಿಬಿ ಅಭಿಮಾನಿಗಳು ಆಂಗ್ಲ ಸುಂದರಿಯ ಕನ್ನಡ ಪ್ರೇಮಕ್ಕೆ ಫಿದಾ ಆಗಿದ್ದು, ಧನ್ಯವಾದ ತಿಳಿಸಿದ್ದಾರೆ. ಕನ್ನಡಿಗರೇ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿರುವ ಈ ದಿನಗಳಲ್ಲಿ ಇಂಗ್ಲೀಷ್ ಆಟಗಾರ್ತಿ ಕನ್ನಡ ಬಳಸಿರುವುದಕ್ಕೆ ಆರ್ಸಿಬಿ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಾರೆ.