ಲಂಡನ್: ಈ ವರ್ಷದ ಅಂತ್ಯಕ್ಕೆ ಆರಂಭಗೊಳ್ಳುತ್ತಿರುವ ಪ್ರತಿಷ್ಠಿತ ಆ್ಯಷಸ್ ಸರಣಿಯನ್ನ ಇಂಗ್ಲೆಂಡ್ನ ಕೆಲ ಆಟಗಾರರು ಬಹಿಷ್ಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ್ಯಷಸ್ ಸರಣಿಯಲ್ಲಿ ಭಾಗಿಯಾಗಬೇಕಾದರೆ 4 ತಿಂಗಳ ಕಾಲ ಹೋಟೆಲ್ನಲ್ಲೇ ಕ್ವಾರಂಟೈನ್ ಆಗಬೇಕಿದೆ. ಈ ನಿಯಮವನ್ನ ಕೆಲ ಆಟಗಾರರು ವಿರೋಧಿಸಿದ್ದಾರೆ ಎನ್ನಲಾಗಿದೆ.
ಮಾಧ್ಯಮ ವರದಿಯ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ನಿಗದಿ ಮಾಡಿರುವ ದಿನಾಂಕದಂತೆಯೇ ಟೆಸ್ಟ್ ನಡೆಸಲು ನಿರ್ಧರಿದೆ. ಈ ಮೂಲಕ ಸರಣಿ ಮುಂದೂಡುವ ಯಾವುದೇ ಯೋಜನೆ ಇಲ್ಲ ಎಂದಿದೆ. ಈ ನಿರ್ಧಾರದಿಂದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಜೊತೆಗೆ ಇಂಗ್ಲೆಂಡ್ ತಂಡ ಮತ್ತು ಅಧಿಕಾರಿಗಳ ಮಾತುಕತೆಯ ಬಳಿಕ ಆ್ಯಷಸ್ನಲ್ಲಿ ಕಡಿಮೆ ಸದಸ್ಯರ ತಂಡ ಮತ್ತು ಸಹಾಯಕ ಸದಸ್ಯರ ಒಳಗೊಂಡ ತಂಡ ಆಸ್ಟ್ರೇಲಿಯಾ ತಲುಪುವ ಸಾಧ್ಯತೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ನಡುವೆ ಕ್ವಾರಂಟೈನ್ ನಿಯಮ ಮತ್ತು ಸರಣಿ ಮುಂದೂಡಲು ಆಂಗ್ಲ ಆಟಗಾರರು ಮಂಡಳಿ ಮುಂದೆ ಮನವಿ ಮಾಡಿದ್ದರು ಎನ್ನಲಾಗಿದೆ. ಬಳಿಕ ಈ ಕುರಿತು ಮಾತುಕತೆ ನಡೆದು ಇಸಿಬಿ ತಿರಸ್ಕರಿದೆ ಹೀಗಾಗಿ ಆಟಗಾರರಿಗೆ ಬೇಸರ ತರಿಸಿದೆ ಎನ್ನಲಾಗಿದೆ.
ಈ ರೀತಿ 4 ತಿಂಗಳ ಕ್ವಾರಂಟೈನ್ಗೆ ಒಳಗಾಗಬೇಕು ಎಂದಾದರೆ ಕೆಲ ಆಟಗಾರರು ಐಪಿಎಲ್, ಟಿ - 20 ವಿಶ್ವಕಪ್ ಸಹ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ನಿಯಮದಲ್ಲಿ ಬದಲಾವಣೆ ತರುವಂತೆ ಆಗ್ರಹ ಕೇಳಿ ಬಂದಿದೆ.
ಓದಿ: CPL 2021: ಡೊಮಿನಿಕ್ ಅಬ್ಬರದ ಬ್ಯಾಟಿಂಗ್.. ಬ್ರಾವೋ ಪಡೆಗೆ ಚೊಚ್ಚಲ ಚಾಂಪಿಯನ್ ಪಟ್ಟ