ರಾವಲ್ಪಿಂಡಿ(ಪಾಕಿಸ್ತಾನ): ಇಲ್ಲಿನ ಸಮತಟ್ಟಾದ ಮೈದಾನದಲ್ಲಿ ರನ್ ಮಳೆಯೇ ಸುರಿದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನದ ವಿರುದ್ಧ 74 ರನ್ಗಳ ಜಯ ದಾಖಲಿಸಿದೆ. ಕೊನೆಯ ದಿನದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಆಲಿ ರಾಬಿನ್ಸನ್ ಮತ್ತು ಜೇಮ್ಸ್ ಆಂಡರ್ಸನ್ ಇಂಗ್ಲೆಂಡ್ಗೆ ಗೆಲುವು ತಂದುಕೊಟ್ಟರು. ಈ ಮೂಲಕ 17 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಟೆಸ್ಟ್ ಜಯ ದಾಖಲಿಸಿದರು.
ಮೊದಲ ಇನಿಂಗ್ಸ್ ಮುಗಿಯಲು 4 ದಿನ ತೆಗೆದುಕೊಂಡ ಪಂದ್ಯ ಡ್ರಾ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಗೆಲ್ಲುವ ಇರಾದೆ ಹೊಂದಿದ್ದ ಇಂಗ್ಲೆಂಡ್ ಆಟಗಾರರು 2ನೇ ಇನಿಂಗ್ಸ್ನಲ್ಲಿ ಕೇವಲ 36 ಓವರ್ಗಳಲ್ಲಿ ಬಿರುಸಿನ ಬ್ಯಾಟ್ ಮಾಡಿ 264 ರನ್ಗಳಿಗೆ ಅಚ್ಚರಿಯ ಡಿಕ್ಲೇರ್ ಮಾಡಿಕೊಂಡರು. ಕೊನೆಯ ದಿನದಾಟದ ನಾಲ್ಕು ಅವಧಿಯಲ್ಲಿ ಪಾಕಿಸ್ತಾನದ ಎಲ್ಲ ವಿಕೆಟ್ ಉರುಳಿಸಿದ ಇಂಗ್ಲೆಂಡ್ ಅಧಿಕಾರಯುತ ಜಯ ದಾಖಲಿಸಿತು.
-
A WIN FOR THE AGES!! 🦁🦁🦁
— England Cricket (@englandcricket) December 5, 2022 " class="align-text-top noRightClick twitterSection" data="
🇵🇰 #PAKvENG 🏴 pic.twitter.com/r3QlEHwAXd
">A WIN FOR THE AGES!! 🦁🦁🦁
— England Cricket (@englandcricket) December 5, 2022
🇵🇰 #PAKvENG 🏴 pic.twitter.com/r3QlEHwAXdA WIN FOR THE AGES!! 🦁🦁🦁
— England Cricket (@englandcricket) December 5, 2022
🇵🇰 #PAKvENG 🏴 pic.twitter.com/r3QlEHwAXd
ಕೊನೆಯಲ್ಲಿ ಹೈಡ್ರಾಮಾ: 5 ನೇ ದಿನದಾಟ ಮುಕ್ತಾಯವಾಗಲು 30 ನಿಮಿಷ ಇದ್ದಾಗ ಬ್ಯಾಟ್ ಮಾಡುತ್ತಿದ್ದ ಪಾಕಿಸ್ತಾನದ ಮೊಹಮದ್ ಅಲಿ ಮೈದಾನ ತೊರೆದು ಶೌಚಾಲಯಕ್ಕೆ ಹೋದರು. 4 ನಿಮಿಷ ಆಟ ನಿಂತ ಬಳಿಕ ಮಂದ ಬೆಳಕಿನ ಕಾರಣ ನೀಡಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪಾಕಿಸ್ತಾನ ಯತ್ನಿಸಿತು. ಆದರೆ, ಇದಕ್ಕೊಪ್ಪದ ಇಂಗ್ಲೆಂಡ್ ಆಟ ಮುಂದುವರಿಸಿತು. 46 ಎಸೆತಗಳನ್ನು ಎದುರಿಸಿ ಆಡುತ್ತಿದ್ದ ನಸೀಮ್ ಶಾರನ್ನು ಜಾಕ್ ಲೀಚ್ ಎಲ್ಬಿ ಬಲೆಗೆ ಬೀಳಿಸುವ ಮೂಲಕ ಇಂಗ್ಲೆಂಡ್ ಗೆಲುವು ಸಾಧಿಸಿತು.
ದಾಖಲೆಯ ಗೆಲುವು: ಪಂದ್ಯದಲ್ಲಿ ಒಟ್ಟಾರೆ 1768 ರನ್ಗಳು ದಾಖಲಾದವು. ಇದು ಅತಿ ಹೆಚ್ಚು ರನ್ ಬಂದು ಫಲಿತಾಂಶ ನೀಡಿದ ಪಂದ್ಯ ಎಂಬ ದಾಖಲೆ ಬರೆಯಿತು. 1921 ರಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಧ್ಯೆ ನಡೆದ ಪಂದ್ಯದಲ್ಲಿ 1753 ರನ್ ದಾಖಲಾಗಿತ್ತು. ಆ ಪಂದ್ಯವನ್ನು ಆಸೀಸ್ 119 ರನ್ಗಳಿಂದ ವಶಪಡಿಸಿಕೊಂಡಿತ್ತು. ಇದು ಈವರೆಗಿನ ದಾಖಲೆಯಾಗಿತ್ತು.
ಇನಿಂಗ್ಸ್ ಲೆಕ್ಕಾಚಾರ: ಇಂಗ್ಲೆಂಡ್ ಮೊದಲ ಇನಿಂಗ್ಸ್ 657, ಎರಡನೇ ಇನಿಂಗ್ಸ್ 7 ವಿಕೆಟ್ಗೆ 264 ಡಿಕ್ಲೇರ್. ಪಾಕಿಸ್ತಾನ ಮೊದಲ ಇನಿಂಗ್ಸ್ 579, ಎರಡನೇ ಇನಿಂಗ್ಸ್ 268.
ಓದಿ: ನಿಧಾನಗತಿಯ ಓವರ್ ಮಾಡಿದ್ದಕ್ಕೆ ಟೀಂ ಇಂಡಿಯಾಗೆ ಭಾರಿ ದಂಡ ವಿಧಿಸಿದ ಐಸಿಸಿ