ಲೀಡ್ಸ್: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಇಂಗ್ಲೆಂಡ್ ಪ್ರವಾಸಿ ಪಾಕಿಸ್ತಾನ ತಂಡವನ್ನು 45 ರನ್ಗಳಿಂದ ಮಣಿಸಿ 3 ಪಂದ್ಯಗಳ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆರಂಭದಲ್ಲೇ ಜೇಸನ್ ರಾಯ್(11) ಮತ್ತು ಟಿ20 ಕ್ರಿಕೆಟ್ನ ನಂಬರ್ 1 ಬ್ಯಾಟ್ಸ್ಮನ್ ಡೇವಿಡ್ ಮಲನ್(1) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.
ಆದರೆ ಹಂಗಾಮಿ ನಾಯಕ ಜೋಸ್ ಬಟ್ಲರ್ ಕೇವಲ 39 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 59 ರನ್ಗಳಿಸಿ ತಂಡವನ್ನು ಆಘಾತದಿಂದ ಮೇಲೆತ್ತಿದ್ದರು. ಇವರಿಗೆ ಸಾರ್ಥ ನೀಡಿದ ಮೊಯೀನ್ ಅಲಿ 16 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 36 ರನ್ಗಳಿಸಿದರೆ, ಲಿವಿಂಗ್ಸ್ಟೋನ್ 23 ಎಸೆತಗಳಲ್ಲಿ 38 ರನ್ಗಳಿಸಿ ತಂಡದ ಮೊತ್ತ 200 ತಲುಪುವಂತೆ ಮಾಡಿದರು.
-
England win 👏
— ICC (@ICC) July 18, 2021 " class="align-text-top noRightClick twitterSection" data="
They restrict Pakistan to 155/9 and register a 45-run victory in the second T20I.
The series is now level at 1-1.#ENGvPAK | https://t.co/91OY1n1CTL pic.twitter.com/BK3o5gfNUk
">England win 👏
— ICC (@ICC) July 18, 2021
They restrict Pakistan to 155/9 and register a 45-run victory in the second T20I.
The series is now level at 1-1.#ENGvPAK | https://t.co/91OY1n1CTL pic.twitter.com/BK3o5gfNUkEngland win 👏
— ICC (@ICC) July 18, 2021
They restrict Pakistan to 155/9 and register a 45-run victory in the second T20I.
The series is now level at 1-1.#ENGvPAK | https://t.co/91OY1n1CTL pic.twitter.com/BK3o5gfNUk
ಪಾಕಿಸ್ತಾನ ಪರ ಮೊಹಮದ್ ಹಸ್ನೈನ್ 51ಕ್ಕೆ3, ಹ್ಯಾರಿಸ್ ರವೂಫ್ 48ಕ್ಕೆ 2, ಶಹೀನ್ ಅಫ್ರಿದಿ 28ಕ್ಕೆ1 ಮತ್ತು ಇಮಾದ್ ವಸೀಮ್ 37ಕ್ಕೆ 2 ವಿಕೆಟ್ ಪಡೆದರು.
201 ರನ್ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 155ರನ್ ಗಳಿಸಲಷ್ಟೇ ಶಕ್ತವಾಗಿ 45 ರನ್ಗಳ ಸೋಲು ಕಂಡಿತು.
ವಿಕೆಟ್ ಕೀಪರ್ ರಿಜ್ವಾನ್ 37 , ಶದಾಬ್ ಖಾನ್ 22 38 ಮತ್ತು ಬಾಬರ್ ಅಜಮ್ 22 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಅತಿಥೇಯ ಇಂಗ್ಲೆಂಡ್ ಪರ ಸಕಿದ್ ಮೊಹ್ಮೂದ್ 33ಕ್ಕೆ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಇವರಿಗೆ ಸಾಥ್ ನೀಡಿದ ಮೊಯೀನ್ ಅಲಿ 32ಕ್ಕೆ 2, ಆದಿಲ್ ರಶೀದ್ 30ಕ್ಕೆ 2, ಪರ್ಕಿಸನ್ ಮತ್ತು ಜೋರ್ಡನ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
ಎರಡು ತಂಡಗಳ ನಡುವಿನ 3ನೇ ಹಾಗೂ ನಿರ್ಣಾಯಕ ಟಿ20 ಪಂದ್ಯ ಮ್ಯಾಂಚೆಸ್ಟರ್ನಲ್ಲಿ ಜುಲೈ 20 ರಂದು ನಡೆಯಲಿದೆ. ಈಗಾಗಲೇ ಇಂಗ್ಲೆಂಡ್ ತಂಡ 3-0ಯಲ್ಲಿ ಏಕದಿ ಸರಣಿ ಗೆದ್ದುಕೊಂಡಿದೆ.
ಇದನ್ನು ಓದಿ:ಧವನ್, ಕಿಶನ್ ಅರ್ಧಶತಕ: ಶ್ರೀಲಂಕಾ ವಿರುದ್ಧ ಭಾರತಕ್ಕೆ 7 ವಿಕೆಟ್ಗಳ ಭರ್ಜರಿ ಜಯ