ETV Bharat / sports

Alex Hales: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ತಂಡದ ಅಲೆಕ್ಸ್ ಹೇಲ್ಸ್ - ETV Bharath Kannada news

Alex Hales: ಇಂಗ್ಲೆಂಡ್​ನ ಬಲಗೈ ಆರಂಭಿಕ ಆಟಗಾರ ಅಲೆಕ್ಸ್​ ಹೇಲ್ಸ್​ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.

england batter alex hales announces retirement

author img

By

Published : Aug 4, 2023, 8:30 PM IST

ಇಂಗ್ಲೆಂಡ್‌ನ ಬ್ಯಾಟರ್ ಅಲೆಕ್ಸ್ ಹೇಲ್ಸ್ ಶುಕ್ರವಾರ ತಮ್ಮ 12 ವರ್ಷದ ಕ್ರಿಕೆಟ್​ ವೃತ್ತಿಜೀವನಕ್ಕೆ ನಿವೃತ್ತಿ ಪ್ರಕಟಿಸಿದ್ದಾರೆ. ಆಂಗ್ಲರ ಪಡೆಯ ಬಲಗೈ ಆರಂಭಿಕ ಹೇಲ್ಸ್​​ 2022ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಂಗ್ಲೆಂಡ್​ ಪರ 11 ಟೆಸ್ಟ್, 70 ಏಕದಿನ ಮತ್ತು 75 ಟಿ20 ಪಂದ್ಯಗಳನ್ನು ಆಡಿದ್ದಾರೆ.

2019 ವಿಶ್ವಕಪ್​ಗೂ ಒಂದು ತಿಂಗಳ ಮೊದಲು ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಹೇಲ್ಸ್ ಅವರನ್ನು ನಿಷೇಧಿಸಲಾಗಿತ್ತು. ಇದರಿಂದಾಗಿ 2019ರ ವಿಶ್ವಕಪ್​ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಇದು ಅವರ ಜೀವನದಲ್ಲಿ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ. ನಿಷೇಧದ ನಂತರ ಸುಮಾರು 3 ವರ್ಷಗಳ ಕಾಲ ತಂಡಕ್ಕೆ ಮರಳಲು ಸಾಧ್ಯವಾಗಲಿಲ್ಲ.

2022ರ ಟಿ20 ವಿಶ್ವಕಪ್​ ವೇಳೆಗೆ ಜಾನಿ ಬೈರ್‌ಸ್ಟೋವ್‌ಗೆ ಗಾಯದಿಂದ ತಂಡದಿಂದ ಹೊರಗುಳಿದ ಕಾರಣ ಅವರ ಬದಲಿ ಆಟಗಾರನಾಗಿ ತಂಡದಲ್ಲಿ ಸ್ಥಾನ ಪಡೆದುಕೊಂಡರು. 2022ರ ಟಿ20 ವಿಶ್ವಕಪ್ ಅ​ನ್ನು ಇಂಗ್ಲೆಂಡ್​ ಗೆದ್ದುಕೊಂಡಿತು. ಈ ಗೆಲುವಿನಲ್ಲಿ ಹೇಲ್ಸ್​ ಉತ್ತಮ ಪಾತ್ರ ನಿರ್ವಹಿಸಿದ್ದರು. 2015ರ ವಿಶ್ವಕಪ್ ನಂತರ ಇಯಾನ್ ಮಾರ್ಗನ್ ನೇತೃತ್ವದಲ್ಲಿ ವೈಟ್ ಬಾಲ್ ಕ್ರಿಕೆಟ್‌ನ ವಿಧಾನದಲ್ಲಿ ಇಂಗ್ಲೆಂಡ್‌ ತಂಡದಲ್ಲಿ ಪ್ರಮುಖ ಆಟಗಾರನಾಗಿ ಹೇಲ್ಸ್​ ಗುರುತಿಸಿಕೊಂಡಿದ್ದರು.

ಅಲೆಕ್ಸ್​ ಹೇಲ್ಸ್​ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ," ಸ್ನೇಹಿತರೇ, ನಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ 156 ಪಂದ್ಯಗಳಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ. ನಾನು ಕೆಲವು ನೆನಪುಗಳನ್ನು ಮತ್ತು ಕೆಲವು ಸ್ನೇಹವನ್ನು ಜೀವಮಾನವಿಡೀ ಉಳಿಸಿಕೊಳ್ಳುತ್ತೇನೆ. ನಿವೃತ್ತಿ ತೆಗೆದುಕೊಳ್ಳಲು ಇದು ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಇಂಗ್ಲೆಂಡ್ ಜರ್ಸಿಯಲ್ಲಿ ನನ್ನ ಸಮಯದುದ್ದಕ್ಕೂ ಏಳು-ಬೀಳುಗಳನ್ನು ಕಂಡಿದ್ದೇನೆ. ಇದು ನಂಬಲಾಗದ ಪ್ರಯಾಣವಾಗಿದೆ. ಇಂಗ್ಲೆಂಡ್‌ಗಾಗಿ ನನ್ನ ಕೊನೆಯ ಪಂದ್ಯವು ವಿಶ್ವಕಪ್ ಫೈನಲ್ ಗೆದ್ದಿದೆ. ಏರಿಳಿತಗಳುದ್ದಕ್ಕೂ ನಾನು ಯಾವಾಗಲೂ ನನ್ನ ಸ್ನೇಹಿತರು, ಕುಟುಂಬ ಮತ್ತು ನಿಸ್ಸಂದೇಹವಾಗಿ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ಅಭಿಮಾನಿಗಳಿಂದ ದೊಡ್ಡ ಪ್ರಮಾಣದ ಬೆಂಬಲ ಅನುಭವಿಸಿದ್ದೇನೆ. ಮುಂಬರುವ ದಿನಗಳಲ್ಲಿ ಪ್ರಪಂಚದಾದ್ಯಂತ ಹೆಚ್ಚು ಫ್ರಾಂಚೈಸಿ ಕ್ರಿಕೆಟ್ ಆಡಲು ಎದುರು ನೋಡುತ್ತಿದ್ದೇನೆ" ಎಂದು ನಿವೃತ್ತಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ಹೇಲ್ಸ್ 2011ರ ಆಗಸ್ಟ್​ ತಿಂಗಳ ಭಾರತ ಪ್ರವಾಸದಲ್ಲಿ ಇಂಗ್ಲೆಂಡ್​ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಹೇಲ್ಸ್ 70 ಏಕದಿನ ಪಂದ್ಯಗಳಲ್ಲಿ 37.79 ಸರಾಸರಿ ಮತ್ತು 95.72 ಸ್ಟ್ರೈಕ್ ರೇಟ್‌ನಲ್ಲಿ 2419 ರನ್ ಗಳಿಸಿದ್ದಾರೆ. 75 ಟಿ20 ಗಳಲ್ಲಿ 138.35 ಸ್ಟ್ರೈಕ್ ರೇಟ್ ಮತ್ತು 30.95 ರ ಸರಾಸರಿಯಲ್ಲಿ 2074 ರನ್ ಗಳಿಸಿದ್ದಾರೆ. ಆಗಸ್ಟ್ 2016ರಲ್ಲಿ ಅಲೆಕ್ಸ್​​ 122 ಎಸೆತಗಳಲ್ಲಿ 171 ರನ್ ಗಳಿಸಿದ್ದರಿಂದ ಇಂಗ್ಲೆಂಡ್ ಏಕದಿನ ಕ್ರಿಕೆಟ್​ನಲ್ಲಿ 444/3 ರನ್​ ಗಳಿಸಿತು. ಇದು ವಿಶ್ವ ದಾಖಲೆಯ ಸ್ಕೋರ್‌ ಆಗಿದೆ. ಪ್ರಸ್ತುತ ಹೇಲ್ಸ್​​ ನಾಟಿಂಗ್‌ಹ್ಯಾಮ್‌ಶೈರ್ ತಂಡದಲ್ಲಿ ಕೌಂಟಿ ಕ್ರಿಕೆಟ್ ​ಆಡುತ್ತಿದ್ದಾರೆ.

ಇದನ್ನೂ ಓದಿ: IND vs WI T20I: ನಿಧಾನಗತಿ ಬೌಲಿಂಗ್​: ಭಾರತ-ವೆಸ್ಟ್ ಇಂಡೀಸ್‌ಗೆ ದಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.