ETV Bharat / sports

ಬುಮ್ರಾ ದಾಳಿಗೆ ಆಂಗ್ಲ ಪಡೆ ತತ್ತರ​.. 26ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಕಳಪೆ ರೆಕಾರ್ಡ್​

ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 26ರನ್​​ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡ ಇಂಗ್ಲೆಂಡ್​ ಹೊಸದೊಂದು ಕಳಪೆ ರೆಕಾರ್ಡ್​ ಬರೆದಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಆಂಗ್ಲರ ಪಡೆ 26ರನ್​​​ಗಳಿಕೆ ಐದು ವಿಕೆಟ್ ಕಳೆದುಕೊಂಡಿರುವುದು ಇದೇ ಮೊದಲು.

Jasprit Bumrah
Jasprit Bumrah
author img

By

Published : Jul 12, 2022, 6:43 PM IST

ದಿ ಓವೆಲ್​(ಇಂಗ್ಲೆಂಡ್​): ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ವೇಗಿ ಬುಮ್ರಾ ಮಾರಕ ಬೌಲಿಂಗ್​ ದಾಳಿಗೆ ಇಂಗ್ಲೆಂಡ್​ ತಂಡ ತತ್ತರಿಸಿದೆ. ಕೇವಲ 26 ರನ್​​ಗಳಿಕೆ ಮಾಡುವಷ್ಟರಲ್ಲಿ ಪ್ರಮುಖ 5 ವಿಕೆಟ್​ ಕಳೆದುಕೊಂಡಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಕಳಪೆ ರೆಕಾರ್ಡ್​​ಗೆ ಪಾತ್ರವಾಗಿದೆ.

ಟಾಸ್​​ ಸೋತು ಮೊದಲು ಬ್ಯಾಟಿಂಗ್​ ನಡೆಸಲು ಬಂದ ಇಂಗ್ಲೆಂಡ್​, ಯಾರ್ಕರ್​ ಕಿಂಗ್ ಜಸ್ಪ್ರೀತ್​​​ ಬುಮ್ರಾ ದಾಳಿಗೆ ನಲುಗಿ ಹೋಯಿತು. ಹೀಗಾಗಿ, 26ರನ್​​ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್​ ಕಳೆದುಕೊಂಡಿತು. ಈ ಮೂಲಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​​ನಲ್ಲಿ 5 ವಿಕೆಟ್​​ನಷ್ಟಕ್ಕೆ ಅತಿ ಕಡಿಮೆ ರನ್​​ಗಳಿಕೆ ಮಾಡಿರುವ ಕಳಪೆ ರೆಕಾರ್ಡ್​ ಬರೆದಿದೆ.

ಇಂಗ್ಲೆಂಡ್​ ನಾಲ್ವರು ಬ್ಯಾಟರ್​​ಗಳು ಶೂನ್ಯಕ್ಕೆ ಔಟ್​​: ಬುಮ್ರಾ ಎಸೆದ ಓವರ್​​ನಲ್ಲಿ ಜೇಸನ್ ರಾಯ್​(0), ರೂಟ್​​(0), ಲಿವಿಗ್​​ಸ್ಟೋನ್​(0) ಶೂನ್ಯಕ್ಕೆ ಔಟಾದರೆ, ಬೈರ್​​ಸ್ಟೋ 7 ರನ್​​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇನ್ನೂ ಶಮಿ ಓವರ್​​ನಲ್ಲಿ ಬೆನ್​​ ಸ್ಟೋಕ್ಸ್​​(0) ವಿಕೆಟ್​ ಒಪ್ಪಿಸಿದರು. ಈ ಹಿಂದೆ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​​ 5 ವಿಕೆಟ್​ನಷ್ಟಕ್ಕೆ 29ರನ್​ಗಳಿಕೆ ಮಾಡಿತ್ತು. ಅದಕ್ಕೂ ಮೊದಲು ಜಿಂಬಾಬ್ವೆ ವಿರುದ್ಧ 5 ವಿಕೆಟ್ ಕಳೆದುಕೊಂಡು 30ರನ್​​ಗಳಿಕೆ ಮಾಡಿತ್ತು.

ಇದನ್ನೂ ಓದಿರಿ: ಇಂಡೋ - ಆಂಗ್ಲರ ಮೊದಲ ಏಕದಿನ: ಟಾಸ್​ ಗೆದ್ದು ಬೌಲಿಂಗ್ ಆಯ್ದ ರೋಹಿತ್​; ವಿರಾಟ್​​ ಅಲಭ್ಯ

ಹೊಸ ದಾಖಲೆ ಬರೆದ ಬುಮ್ರಾ: ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬುಮ್ರಾ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ. ಮೊದಲ 10 ಓವರ್​​ಗಳಲ್ಲಿ 4 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಈ ಹಿಂದೆ ಭಾರತದ ಜಾವಗಲ್​ ಶ್ರೀನಾಥ್​​ 2003ರಲ್ಲಿ ಶ್ರೀಲಂಕಾ ಹಾಗೂ ಭುವನೇಶ್ವರ್ ಕುಮಾರ್​​ 2013ರಲ್ಲಿ ಶ್ರೀಲಂಕಾ ವಿರುದ್ಧ ಈ ದಾಖಲೆ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.