ಲಂಡನ್ : ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಆಲ್ರೌಂಡರ್ ಎಲಿಸ್ ಪೆರ್ರಿ ವೈಯಕ್ತಿಕ ಕಾರಣ ನೀಡಿ ಉದ್ಘಾಟನಾ ಆವೃತ್ತಿಯ ದಿ ಹಂಡ್ರೆಡ್ ಲೀಗ್ನಿಂದ ಹೊರ ಬಂದಿದ್ದಾರೆ.
30 ವರ್ಷದ ಆಟಗಾರ್ತಿ ಬರ್ಮಿಂಗ್ಹ್ಯಾಮ್ ಫೀನೆಕ್ಸ್ ತಂಡದ ಪರ ಜುಲೈ 21ರಿಂದ ಆರಂಭವಾಗಲಿರುವ 100 ಎಸೆತದ ಟೂರ್ನಮೆಂಟ್ನಲ್ಲಿ ಆಡಬೇಕಿತ್ತು. ಆದರೆ, ವೈಯಕ್ತಿಕ ಕಾರಣಗಳಿಂದ ತಾವೂ ಈ ಅವೃತ್ತಿಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಪೆರ್ರಿ ಹೇಳಿದ್ದಾರೆ.
"ವೈಯಕ್ತಿಕ ಕಾರಣಗಳಿಂದಾಗಿ ಎಲಿಸ್ ಪೆರ್ರಿ ದಿ ಹಂಡ್ರೆಂಡ್‌ನಿಂದ ಸರಿದಿರುವುದರಿಂದ ನಾವು ತುಂಬಾ ನಿರಾಶೆಗೊಂಡಿದ್ದೇವೆ. ಆದರೆ, ನಾವು ಅವರ ನಿರ್ಧಾರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ ಮತ್ತು ಅವರಿಗೆ ಶುಭ ಹಾರೈಸುತ್ತೇವೆ" ಎಂದು ಮಹಿಳಾ ಸ್ಪರ್ಧೆಯ ಮುಖ್ಯಸ್ಥ ಬೆತ್ ಬ್ಯಾರೆಟ್-ವೈಲ್ಡ್ ಮಾಧ್ಯಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಈಗಾಗಲೇ ಬರ್ಮಿಂಗ್ಹ್ಯಾಮ್ ಫೀನೆಕ್ಸ್ ತಂಡದಲ್ಲಿ ಒಪ್ಪಂದ ಮಾಡಿಕೊಂಡಿದ್ದ ನ್ಯೂಜಿಲ್ಯಾಂಡ್ ತಂಡದ ನಾಯಕಿ ಸೋಫಿ ಡಿವೈನ್ ಕಳೆದ ತಿಂಗಳು ಟೂರ್ನಮೆಂಟ್ನಿಂದ ಹಿಂದೆ ಸರಿದಿದ್ದಾರೆ. ಇವರ ಬದಲಿಗೆ ಭಾರತದ ಉದಯೋನ್ಮುಖ ಬ್ಯಾಟರ್ ಶೆಫಾಲಿ ವರ್ಮಾ ಸೇರಿದ್ದಾರೆ. ಪೆರ್ರಿ ತಂಡದ ಸಹ ಆಟಗಾರ್ತಿಯರಾದ ಮೆಗ್ ಲ್ಯಾನಿಂಗ್, ಅಲಿಸಾ ಹೀಲಿ ಮತ್ತು ರಿಚೆಲ್ ಹೇನ್ಸ್ ದಿ ಹಂಡ್ರೆಡ್ ಲೀಗ್ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.
ಇದನ್ನು ಓದಿ:ಧೋನಿ, ವಾರ್ನರ್ ಬಿಟ್ಟು ಸಾರ್ವಕಾಲಿಕ ಐಪಿಎಲ್ ತಂಡ ಪ್ರಕಟಿಸಿದ ಸೂರ್ಯಕುಮಾರ್