ಲಂಡನ್ : ಸೀಮಿತ ಓವರ್ಗಳ ಕ್ರಿಕೆಟ್ ಸರಣಿಗೆ ಅಕ್ಟೋಬರ್ನಲ್ಲಿ ಕೈಗೊಳ್ಳಬೇಕಿದ್ದ ಪಾಕಿಸ್ತಾನ ಪ್ರವಾಸವನ್ನು ಹಿಂತೆಗೆದುಕೊಂಡಿದ್ದಕ್ಕಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಇಯಾನ್ ವಾಟ್ಮೋರ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಕ್ಷಮೆ ಕೋರಿದ್ದಾರೆ. ಅಲ್ಲದೆ ಮುಂದಿನ ವರ್ಷ ಸುದೀರ್ಘ ಪ್ರವಾಸ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನಮ್ಮ ನಿರ್ಧಾರದಿಂದ ಯಾರಿಗಾದರೂ ನೋವಾಗಿದ್ದರೆ ಮತ್ತು ನಿರಾಸೆಯಾಗಿದ್ದರೆ ನಾನು ಅವರಲ್ಲಿ ಕ್ಷಮೆ ಕೋರುತ್ತೇನೆ. ಅದರಲ್ಲೂ ಪಾಕಿಸ್ತಾನಕ್ಕೆ ನಾವು ಕ್ಷಮೆ ಕೋರುತ್ತೇವೆ. ಪಾಕಿಸ್ತಾನ ಪ್ರವಾಸದ ವಿಚಾರದಲ್ಲಿ ಕ್ರಿಕೆಟ್ ಮಂಡಳಿ ತೆಗೆದುಕೊಂಡ ನಿರ್ಧಾರವು ಅತ್ಯಂತ ಕಷ್ಟಕರವಾಗಿತ್ತು.
ನಮ್ಮ ಆಟಗಾರರು ಮತ್ತು ಸಿಬ್ಬಂದಿಯ ಯೋಗಕ್ಷೇಮ ಮತ್ತು ಮಾನಸಿಕ ಆರೋಗ್ಯಕ್ಕೆ ಮಂಡಳಿ ಪ್ರಥಮ ಆಧ್ಯತೆ ನೀಡಿದೆ ಎಂದು ವಾಟ್ಮೋರ್ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ ನಂತರ ತಮ್ಮ ಮೊದಲ ಸಾರ್ವಜನಿಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾವು ಮುಂದಿನ ವರ್ಷ ಪಾಕಿಸ್ತಾನಕ್ಕೆ ಸುದೀರ್ಘವಾದ ಪ್ರವಾಸ ಕೈಗೊಳ್ಳಲು ಒಪ್ಪಿಕೊಂಡಿದ್ದೇವೆ ಮತ್ತು ಯೋಜನೆಯನ್ನು ಮುಂದುವರಿಸುತ್ತೇವೆ. ಮುಂದಿನ ಚಳಿಗಾಲದ ಪ್ರವಾಸದಲ್ಲಿ ಇಂಗ್ಲೆಂಡ್, ಪಾಕಿಸ್ತಾನದಲ್ಲಿ 3 ಟೆಸ್ಟ್, 5 ಏಕದಿನ ಪಂದ್ಯವನ್ನಾಡಲಿದೆ ಎಂದು ವಾಟ್ಮೋರ್ ಡೈಲಿ ಮೇಲ್ಗೆ ತಿಳಿಸಿದ್ದಾರೆ.
ಪ್ರವಾಸ ರದ್ದುಗೊಳಿಸುವ ಮುನ್ನ ಆಟಗಾರರನ್ನು ಸಂಪರ್ಕಿಸಿಲ್ಲ ಎಂಬುದರ ಬಗ್ಗೆ ಮಾತನಾಡಿದ ವಾಟ್ಮೋರ್, ಮಂಡಳಿಯು ತನ್ನದೇ ತೀರ್ಪುಗಳನ್ನು ಆಧರಿಸಿ ಪ್ರವಾಸ ರದ್ದುಗೊಳಿಸುವ ನಿರ್ಧಾರ ತೆಗೆದುಕೊಂಡಿತು.
ಹಾಗಾಗಿ, ಆಟಗಾರರೊಂದಿಗೆ ಸಮಾಲೋಚನೆ ಮಾಡಲು ಹೋಗಲಿಲ್ಲ. ನಾವು ಪ್ರವಾಸದೊಂದಿಗೆ ಮುಂದುವರಿಯಲು ನಿರ್ಧರಿಸಿದ್ದರೆ ಆಟಗಾರರ ಮುಂದೆ ಪ್ರಸ್ತಾಪ ಮಾಡಬೇಕಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಭಾರತದ ಕೋಚ್ ಆಗಲು ಕುಂಬ್ಳೆಗೆ ನಿರಾಸಕ್ತಿ, ಗಂಗೂಲಿ ಬಿಟ್ಟು ಉಳಿದ ಸದಸ್ಯರಿಗೂ ಇಷ್ಟವಿಲ್ವಂತೆ!