ETV Bharat / sports

ಅಶಿಸ್ತಿನಿಂದಾಗಿ ತಂಡದಿಂದ ಹೊರಬಿದ್ದರೇ ಕಿಶನ್​, ಅಯ್ಯರ್?:​​ ದ್ರಾವಿಡ್ ಹೇಳಿದ್ದಿಷ್ಟು

ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್ ಅವರನ್ನು​ ಅಶಿಸ್ತಿನ ಕಾರಣಕ್ಕಾಗಿ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯಿಂದ ಕೈಬಿಡಲಾಗಿದೆ ಎಂಬ ವರದಿಯನ್ನು ಕೋಚ್​ ರಾಹುಲ್​ ದ್ರಾವಿಡ್​ ಅಲ್ಲಗಳೆದಿದ್ದಾರೆ.

ಕೋಚ್​​ ರಾಹುಲ್​​ ದ್ರಾವಿಡ್
ಕೋಚ್​​ ರಾಹುಲ್​​ ದ್ರಾವಿಡ್
author img

By PTI

Published : Jan 11, 2024, 9:30 AM IST

ಮೊಹಾಲಿ: ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಗೆ ಟೀಂ ಇಂಡಿಯಾ ಸ್ಫೋಟಕ ಬ್ಯಾಟರ್​ಗಳಾದ ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅಯ್ಯರ್​ ಆಯ್ಕೆಯಾಗದೇ ಇರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಅಶಿಸ್ತಿನ ಕಾರಣಕ್ಕೆ ಇಬ್ಬರನ್ನು ಆಯ್ಕೆ ಮಾಡಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ, ಇದನ್ನು ತಂಡದ ಮುಖ್ಯ ಕೋಚ್​ ರಾಹುಲ್​​ ದ್ರಾವಿಡ್​ ನಿರಾಕರಿಸಿದ್ದಾರೆ.

ಇಶಾನ್​ ಕಿಶನ್​ ಮತ್ತು ಶ್ರೇಯಸ್​ ಅವರನ್ನು ತಂಡದಿಂದ ಕೈಬಿಡಲು ಅಶಿಸ್ತು ಕಾರಣವಲ್ಲ. ಕಿಶನ್​ ವೈಯಕ್ತಿಕ ಕಾರಣಕ್ಕಾಗಿ ಸರಣಿಯಿಂದ ದೂರ ಉಳಿದಿದ್ದಾರೆ. ಅಯ್ಯರ್​ ತಂಡಕ್ಕೆ ಆಯ್ಕೆಯಾಗಿಲ್ಲ. ಇಬ್ಬರೂ ಮುಂದಿನ ದಿನಗಳಲ್ಲಿ ತಂಡ ಸೇರಲಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಅವರು ತಿಳಿಸಿದರು.

ಇಶಾನ್ ಕಿಶನ್ ಆಯ್ಕೆಗೆ ಲಭ್ಯರಿರಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ವೈಯಕ್ತಿಕ ಕಾರಣಕ್ಕಾಗಿ ವಿಶ್ರಾಂತಿ ಬಯಸಿದ್ದರು. ಇದರ ಬಳಿಕವೂ ಆಯ್ಕೆಗೆ ಲಭ್ಯರಾಗಿಲ್ಲ. ಅಶಿಸ್ತು ತೋರಿದ್ದಾರೆ ಎಂದು ವರದಿಯಾಗಿದ್ದು ಸುಳ್ಳು. ಅವರ ವಿಶ್ರಾಂತಿಯನ್ನು ತಂಡ ಗೌರವಿಸಲಿದೆ ಎಂದರು.

2023ರ ಅಕ್ಟೋಬರ್​ನಿಂದ 2024ರ ಜನವರಿವರೆಗೆ ಭಾರತ 14 ಏಕದಿನ, 8 ಟಿ-20 ಪಂದ್ಯಗಳನ್ನು ಆಡಿದೆ. ಅದರಲ್ಲಿ ಕಿಶನ್​, 2 ಏಕದಿನ, ಮೂರು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಅಫ್ಘಾನ್​ ಸರಣಿಗೆ ವಿಕೆಟ್‌ಕೀಪರ್-ಬ್ಯಾಟರ್ ಕೆ.ಎಲ್.ರಾಹುಲ್ ಅವರನ್ನು ಪರಿಗಣಿಸಲಾಗಿಲ್ಲ. ಯುವ ಪ್ರತಿಭೆ ಜಿತೇಶ್ ಶರ್ಮಾಗೆ ಗ್ಲೌಸ್​ ನೀಡಲಾಗಿದೆ.

ಅಯ್ಯರ್​ ಹೊರಗುಳಿದಿದ್ದೇಕೆ?: ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್​ ಅಯ್ಯರ್​ ಕೂಡ ಅಶಿಸ್ತಿನ ಕಾರಣಕ್ಕಾಗಿ ತಂಡದಿಂದ ಔಟ್​ ಆಗಿಲ್ಲ. ಅವರು ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಆಡಿರಲಿಲ್ಲ. ತಂಡದಲ್ಲಿ ಪ್ರತಿಭಾನ್ವಿತ ಕ್ರಿಕೆಟಿಗರಿದ್ದಾರೆ. ಪ್ಲೇಯಿಂಗ್​ 11 ಆಯ್ಕೆ ಮಾಡುವುದೇ ಕಠಿಣ. ಎಲ್ಲರನ್ನೂ ಆಡಿಸುವುದು ಸಾಧ್ಯವಿಲ್ಲ. ಆಯ್ಕೆ ಸಮಿತಿಯು ನನ್ನೊಂದಿಗೆ ಯಾವುದೇ ಶಿಸ್ತಿನ ಬಗ್ಗೆ ಚರ್ಚಿಸಿಲ್ಲ ಎಂದರು.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಶ್ರೇಯಸ್​ ಅಯ್ಯರ್​ ಅವರನ್ನು ರಣಜಿ ತಂಡದಲ್ಲಿ ಆಡಲು ಬಿಸಿಸಿಐ ಸೂಚಿಸಿತ್ತು. ಆದರೆ, ಅವರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಬಳಿಕ ಅವರು ರಣಜಿಯಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಇಶಾನ್​ ಕಿಶನ್ ವೈಯಕ್ತಿಕ ಕಾರಣ ನೀಡಿ, ಪಾರ್ಟಿ, ಮಾಧ್ಯಮಗಳಲ್ಲಿ ಕಾಣಿಸಿಕೊಂಡಿರುವುದು ಆಯ್ಕೆ ಸಮಿತಿಯ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಶಿಸ್ತು ಉಲ್ಲಂಘಿಸಿದ ಕಾರಣಕ್ಕಾಗಿ ಇಬ್ಬರನ್ನೂ ತಂಡಕ್ಕೆ ಆಯ್ಕೆ ಮಾಡಿಲ್ಲ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಅಗ್ನಿಪರೀಕ್ಷೆ ಗೆಲ್ತಾರಾ ವಿರಾಟ್ ಕೊಹ್ಲಿ​, ರೋಹಿತ್​ ಶರ್ಮಾ?: ಸಾಮರ್ಥ್ಯ ಸಾಬೀತಿಗೆ ಆಫ್ಘನ್​ ಸರಣಿ ವೇದಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.