ETV Bharat / sports

ದ್ರಾವಿಡ್​-ಗಂಗೂಲಿಯ ಆ ಜತೆಯಾಟವೇ ಜೋಸ್ ಬಟ್ಲರ್‌ಗೆ ಸ್ಫೂರ್ತಿ.. ಆಂಗ್ಲನೊಬ್ಬ ಅದ್ಭುತ ಕ್ರಿಕೆಟಿಗನಾದ ಕಥೆ..

ಬಾಲ್ಯದಲ್ಲಿ ಆ ಪಂದ್ಯ ನನ್ನ ಮೇಲೆ ಅಪಾರ ಪ್ರಭಾವ ಬೀರಿತ್ತು. ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್‌ ಇಬ್ಬರೂ ದೊಡ್ಡ ಶತಕ ಬಾರಿಸಿದ್ದರು. ಇದು ನನ್ನ ಮೇಲೆ ಬೀರಿದ ಪ್ರಭಾವದಿಂದಲೇ ನಾನು ಕ್ರಿಕೆಟ್‌ ವೃತ್ತಿ ಬದುಕನ್ನು ಆಯ್ಕೆ ಮಾಡಿದೆ..

ಜೋಸ್ ಬಟ್ಲರ್
ಜೋಸ್ ಬಟ್ಲರ್
author img

By

Published : May 19, 2021, 12:53 PM IST

ಲಂಡನ್ : ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ತಾನು ಕ್ರಿಕೆಟಿನಾಗಲು ಟೀಂ ಇಂಡಿಯಾದ ಮಾಜಿ ದಿಗ್ಗಜ ಆಟಗಾರರಾದ ಸೌರವ್‌ ಗಂಗೂಲಿ ಮತ್ತು ರಾಹುಲ್ ದ್ರಾವಿಡ್‌ ಅವರ ಆಟವೇ ಕಾರಣ ಎಂದು ಹೇಳಿದ್ದಾರೆ.

1999ರ ವಿಶ್ವಕಪ್ ಟೂರ್ನಿ ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗಿತ್ತು. ಈ ಟೂರ್ನಿಯಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಬಟ್ಲರ್ ಮನಸ್ಸನ್ನ ಬದಲಿಸಿತಂತ್ತೆ.

ಈ ಪಂದ್ಯದಲ್ಲಿನ ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್‌ ಅತ್ಯುತ್ತಮ ಜೊತೆಯಾಟ ಬಟ್ಲರ್ ಕರಿಯರ್​ನೇ ಬದಲಿಸಿತು. 2ನೇ ವಿಕೆಟ್‌ಗೆ ಗಂಗೂಲಿ ಹಾಗೂ ದ್ರಾವಿಡ್ 318 ರನ್ ಸಿಡಿಸಿದ್ದರು.

ಈ ಮೂಲಕ ಲಂಕಾಗೆ ಶಾಕ್ ನೀಡಿದ್ದರು. ಈ ಪಂದ್ಯದಲ್ಲಿ ಭಾರತೀಯ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಯನ್ನು ನೋಡಿದ ಬಟ್ಲರ್, ನಾನು ಕೂಡ ಕ್ರಿಕೆಟಿನಾಗಬೇಕು, ವಿಶ್ವಕಪ್ ಟೂರ್ನಿಯಲ್ಲಿ ಆಡಬೇಕು ಎಂದು ನಿರ್ಧರಿಸಿದ್ದರಂತೆ.

"ಬಾಲ್ಯದಲ್ಲಿ ಆ ಪಂದ್ಯ ನನ್ನ ಮೇಲೆ ಅಪಾರ ಪ್ರಭಾವ ಬೀರಿತ್ತು. ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್‌ ಇಬ್ಬರೂ ದೊಡ್ಡ ಶತಕ ಬಾರಿಸಿದ್ದರು. ಇದು ನನ್ನ ಮೇಲೆ ಬೀರಿದ ಪ್ರಭಾವದಿಂದಲೇ ನಾನು ಕ್ರಿಕೆಟ್‌ ವೃತ್ತಿ ಬದುಕನ್ನು ಆಯ್ಕೆ ಮಾಡಿದೆ," ಎಂದು ಬಟ್ಲರ್‌ ಹೇಳಿದ್ದಾರೆ.

ಅಂದಹಾಗೆ ದ್ರಾವಿಡ್‌ ಮತ್ತು ಗಂಗೂಲಿ ಇಬ್ಬರೂ ಕೂಡ ಇಂಗ್ಲೆಂಡ್‌ ನೆಲದಲ್ಲಿ ಭಾರಿ ಯಶಸ್ಸು ಗಳಿಸಿದ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

ಶ್ರೀಲಂಕಾದ ಬೌಲಿಂಗ್‌ ದಾಳಿಯನ್ನು ಧೂಳೀಪಟ ಮಾಡಿದ್ದ ಸೌರವ್‌ ಗಂಗೂಲಿ 158 ಎಸೆತಗಳಲ್ಲಿ 183 ರನ್‌ ಸಿಡಿಸಿದರೆ, ಅವರಿಗೆ ಸಾತ್‌ ಕೊಟ್ಟ ದ್ರಾವಿಡ್‌ 129 ಎಸೆತಗಳಲ್ಲಿ 145 ರನ್‌ ಬಾರಿಸಿದ್ದರು. ಏಕದಿನ ಕ್ರಿಕೆಟ್‌ ಇತಿಹಾಸದ ಶ್ರೇಷ್ಠ ಜೊತೆಯಾಟಗಳಲ್ಲಿ ಇದು ಕೂಡ ಒಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.