ಇಂದೋರ್ (ಮಧ್ಯಪ್ರದೇಶ): ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ ಗೆಲುವಿಗೆ ಕಾರಣರಾಗಿದ್ದ ಭಾರತದ ಆರಂಭಿಕ ಆಟಗಾರ ಶುಭಮನ್ ಗಿಲ್ ಅವರು ತಮ್ಮ ಪ್ರದರ್ಶನದಿಂದ ನನ್ನ ತಂದೆ ಸಂತೋಷಪಡುತ್ತಾರೆ ಎಂದು ನಾನು ಭಾವಿಸುವುದಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ. ಪಂದ್ಯವು ತನ್ನ ಶತಕವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ ಹೀಗಾಗಿ ಅವರು ಸಂತೋಷ ವ್ಯಕ್ತ ಪಡಿಸುವುದಿಲ್ಲ ಎಂದಿದ್ದಾರೆ.
ಮಂಗಳವಾರ ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಬ್‌ಮನ್ ಗಿಲ್ ಅವರ ಶತಕ ಗಳಿಸಿ ಬೃಹತ್ ಮೊತ್ತದ ಗುರಿ ನಂತರ ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ಅವರ ಮೂರು ವಿಕೆಟ್‌ಗಳ ನೆರವಿನಿಂದ ಭಾರತವು ನ್ಯೂಜಿಲೆಂಡ್ ಅನ್ನು 90 ರನ್‌ಗಳಿಂದ ಸೋಲಿಸಿತು. ಪಂದ್ಯದ ನಂತರ ಗಿಲ್ ಅವರನ್ನು ಸಂದರ್ಶನ ಮಾಡಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬಳಿ ತಂದೆಯ ಸಂತೋಷದ ಬಗ್ಗೆ ಹೇಳಿಕೊಂಡಿದ್ದಾರೆ.
"ಈ ಆಟದಲ್ಲಿನ ನನ್ನ ಪ್ರದರ್ಶನದಿಂದ ಅವರು (ಶುಭಮನ್ ಅವರ ತಂದೆ) ಸಂತೋಷಪಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಅದನ್ನು ದೊಡ್ಡ ಸ್ಕೋರ್‌ಗೆ ಪರಿವರ್ತಿಸಲು ಮುಂದುವರಿಸಲು ನನಗೆ ಹೇಳುತ್ತಿದ್ದರು" ಎಂದು ಗಿಲ್, ದ್ರಾವಿಡ್ ಅವರು ಇಂದಿನ ನಿಮ್ಮ ಆಟಕ್ಕೆ ನಿಮ್ಮ ತಂದೆ ಸಂತೋಷ ವ್ಯಕ್ತ ಪಡಿಸುತ್ತಾರಾ ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.
-
Motivation from father, joy of batting with captain @ImRo45 & @imVkohli and special bond with Head Coach ☺️ 👍
— BCCI (@BCCI) January 25, 2023 " class="align-text-top noRightClick twitterSection" data="
Man of the moment, @ShubmanGill, shares it all in this interview with Rahul Dravid 👌 👌 - By @ameyatilak
Full feature 🔽 #TeamIndia | #INDvNZhttps://t.co/sAOk7VUGMk pic.twitter.com/z6kza58nB5
">Motivation from father, joy of batting with captain @ImRo45 & @imVkohli and special bond with Head Coach ☺️ 👍
— BCCI (@BCCI) January 25, 2023
Man of the moment, @ShubmanGill, shares it all in this interview with Rahul Dravid 👌 👌 - By @ameyatilak
Full feature 🔽 #TeamIndia | #INDvNZhttps://t.co/sAOk7VUGMk pic.twitter.com/z6kza58nB5Motivation from father, joy of batting with captain @ImRo45 & @imVkohli and special bond with Head Coach ☺️ 👍
— BCCI (@BCCI) January 25, 2023
Man of the moment, @ShubmanGill, shares it all in this interview with Rahul Dravid 👌 👌 - By @ameyatilak
Full feature 🔽 #TeamIndia | #INDvNZhttps://t.co/sAOk7VUGMk pic.twitter.com/z6kza58nB5
ರಾಹುಲ್ ದ್ರಾವಿಡ್ ಗಿಲ್ ಅವರ ತಂದೆಯ ಮಾತನ್ನು ಕೋಟ್ ಮಾಡಿ ಪ್ರಶ್ನೆ ಮಾಡುತ್ತಾರೆ. ಈ ಹಿಂದೆ ಗಿಲ್ ಅರ್ಧ ಶತಕಕ್ಕೆ ವಿಕೆಟ್ ಒಪ್ಪಿಸುತ್ತಿದ್ದಾಗ ಅವರ ತಂದೆ "ಈ ತುಂತುರು ಮಳೆಯ ರೀತಿಯ ಆಟ ಬಿಟ್ಟು ಎಂದು ಸಿಡಿಲಬ್ಬರದ ಗೇಮ್ ಆಡುತ್ತೀಯ" ಎಂದು ಕೇಳಿದ್ದನ್ನು ದ್ರಾವಿಡ್ ಉಲ್ಲೇಖಿಸಿ ಇಂದಿನ ನಿನ್ನ ಆಟ ತಂದೆಗೆ ಸಂತೋಷವಾಗಿರುತ್ತಾ ಎಂದು ಪ್ರಶ್ನಿಸಿದ್ದಾರೆ.
23 ವರ್ಷದ ಶುಭಮನ್ ಗಿಲ್ ಅವರು ಏಕದಿನ ಕ್ರಿಕೆಟ್ ಆಡಲು ಇಷ್ಟಪಡುತ್ತಾರೆ. ಅವರು ಹೇಳುವಂತೆ ಒಡಿಐನಲ್ಲಿ ಪಿಚ್ ಮತ್ತು ಕ್ರಿಡಾಂಗಣದ ಮೇಲ್ಮೈ ಹೇಗೆ ವರ್ತಿಸುತ್ತಿದೆ ಎಂಬುದನ್ನು ಅರಿತುಕೊಳ್ಳಲು ಅವಕಾಶ ಸಿಗುತ್ತದೆ. ಈ ಲೆಕ್ಕಾಚಾರ ಮಾಡಿ ನಂತರ ನಮ್ಮ ಬ್ಯಾಟಿಂಗ್ನ್ನು ವ್ಯಕ್ತಪಡಿಸಲು ಮತ್ತು ತನ್ನ ಹೊಡೆತಗಳನ್ನು ಆಡಲು ಸಾಕಷ್ಟು ಸಮಯ ಸಿಗುತ್ತದೆ ಎಂದಿದ್ದಾರೆ.
"ಏಕದಿನ ಕ್ರಿಕೆಟ್ ನಾನು ಬ್ಯಾಟ್ ಮಾಡಲು ಇಷ್ಟಪಡುವ ಮಾದರಿಗಳಲ್ಲಿ ಒಂದಾಗಿದೆ. ಈ ಮಾದರಿ ನನಗೆ ಆರಂಭದಲ್ಲಿ ಸ್ವಲ್ಪ ಸ್ವಾತಂತ್ರ್ಯವನ್ನು ನೀಡುತ್ತದೆ, ಇದು ವಿಕೆಟ್‌ನಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ನಂತರ ನಾನು ನನ್ನನ್ನು ವ್ಯಕ್ತಪಡಿಸುತ್ತೇನೆ ಮತ್ತು ಸಿಕ್ಸರ್ ಮತ್ತು ಬೌಂಡರಿಗಳನ್ನು ಗಳಿಸುತ್ತೇನೆ ಎಂದಿದ್ದಾರೆ. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಗಳಿಸಿದ್ದರಿಂದ ನಾನು ಆಡುತ್ತೇನೆ ಎಂದು ನನಗೆ ಖಚಿತವಾಗಿರಲಿಲ್ಲ. ಆದರೆ ನೀವು ಮತ್ತು ರೋಹಿತ್ ಭಾಯ್ ತೋರಿಸಿದ ಆತ್ಮವಿಶ್ವಾಸ ನನ್ನನ್ನು ಹೆಚ್ಚಿಸಿತು"ಎಂದು ಗಿಲ್ ಹೇಳಿದರು.
ವಿರಾಟ್ ಮತ್ತು ರೋಹಿತ್ ಜೊತೆಗೆ ಆಟ ಆಡುವುದು ಹೇಗನಿಸುತ್ತದೆ ಎಂದು ದ್ರಾವಿಡ್ ಕೇಳಿದ ಪ್ರಶ್ನೆಗೆ, ನಾನು ಆ ಇಬ್ಬರ ಬ್ಯಾಟಿಂಗನ್ನು ನೋಡಿಕೊಂಡು ಬೆಳೆದವನು. ಅವರ ಸ್ಥಿರ ಪ್ರದರ್ಶನ ನನಗೆ ತುಂಬಾ ಇಷ್ಟ, ಅವರೊಂದಿಗೆ ಕ್ರೀಸ್ ಹಂಚಿಕೊಳ್ಳಲು ತುಂಬಾ ಸಂತೋಷವಾಗುತ್ತದೆ ಎಂದು ಗಿಲ್ ಹೇಳಿದಕ್ಕೆ ಅವರೊಂದಿಗೆ ಹೆಚ್ಚು ಹೊತ್ತು ನಿಂತು ಆಡಿ ಎಂದು ದ್ರಾವಿಡ್ ಸಲಹೆ ನೀಡಿದರು.
2000 ರನ್ ಪೂರೈಸಿದ ಗಿಲ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2000 ರನ್ ಗಳಿಸಿದ ದಾಖಲೆ ಗಿಲ್ ಮಾಡಿದ್ದಾರೆ. 37 ಪಂದ್ಯಗಳಲ್ಲಿ, 49 ಇನ್ನಿಂಗ್ಸ್ ಆಡಿರುವ ಗಿಲ್ 47.62 ಸರಾಸರಿಯಲ್ಲಿ 2,048 ರನ್ ಗಳಿಸಿದ್ದಾರೆ. ಅವರು 208ರ ಅತ್ಯುತ್ತಮ ವೈಯಕ್ತಿಕ ಸ್ಕೋರ್ ಆಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಐದು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳನ್ನು ಹೊಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಗಿಲ್ 13 ಪಂದ್ಯಗಳಲ್ಲಿ 25 ಇನ್ನಿಂಗ್ಸ್ ಆಡಿದ್ದು 32.00 ಸರಾಸರಿಯಲ್ಲಿ 736 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು ನಾಲ್ಕು ಅರ್ಧ ಶತಕಗಳನ್ನು ಗಳಿಸಿದ್ದು 110 ರ ಅತ್ಯುತ್ತಮ ಸ್ಕೋರ್ ಆಗಿದೆ. ಏಕದಿನದಲ್ಲಿ 21 ಪಂದ್ಯ ಆಡಿದ್ದು 1,254 ರನ್ ಗಳಿಸಿದ್ದಾರೆ. 73.76 ರ ಸರಾಸರಿ ಬ್ಯಾಟ್ ಬೀಸಿದ್ದು, ನಾಲ್ಕು ಶತಕಗಳು ಮತ್ತು ಐದು ಅರ್ಧ ಶತಕ ಅವರ ಹೆಸರಿನಲ್ಲಿದೆ. ಏಕದಿನದಲ್ಲಿ 208 ಗರಿಷ್ಠ ಸ್ಕೋರ್. ಮೂರು ಟಿ20 ಆಡಿದ್ದು 19.33ರ ಸರಾಸರಿಯಲ್ಲಿ 58 ರನ್ ಗಳಿಸಿದ್ದಾರೆ. ಜೊತೆಗೆ 46ರ ಅತ್ಯುತ್ತಮ ರನ್ಗಳಿಕೆಯಾಗಿದೆ.
ಇದನ್ನೂ ಓದಿ: ICC ODI Ranking : ಬೌಲಿಂಗ್ನಲ್ಲಿ ಸಿರಾಜ್ಗೆ ಅಗ್ರಸ್ಥಾನ, ಬ್ಯಾಟಿಂಗ್ನಲ್ಲಿ ವಿರಾಟ್ ಹಿಂದಿಕ್ಕಿದ ಗಿಲ್