ಜಿಯೋ ಇಂಡಿಯನ್ ಪ್ರೀಮಿಯರ್ ಲೀಗ್ನ ಎಲ್ಲಾ ಸಿಮ್ ಬಳಕೆದಾರರಿಗೆ ಉಚಿತವಾಗಿ ವೀಕ್ಷಣೆ ಅವಕಾಶ ನೀಡಿ ಭರ್ಜರಿ ಪ್ರತಿಕ್ರಿಯೆಗಳಿಸಿತ್ತು. ದಾಖಲೆಯ ಜಾಹೀರಾತುದಾರನ್ನು ಪಡೆದುಕೊಂಡಿತ್ತು. ಅಲ್ಲದೇ ಒಂದೇ ದಿನ ಹೆಚ್ಚು ಜನರು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡಿದ್ದರು. ಐಪಿಎಲ್ ಫೈನಲ್ ಪಂದ್ಯವನ್ನು 3.2 ಕೋಟಿ ಜನರು ಓಟಿಟಿ ಪರದೆಯ ಮೇಲೆ ವೀಕ್ಷಣೆ ಮಾಡಿದ್ದರು.
ಈ ಉಚಿತ ಯೋಜನೆ ಜಿಯೋ ಸಿನಿಮಾ ಬಳಕೆದಾರರನ್ನು ಹೆಚ್ಚಿಸಿತ್ತು. ಅಲ್ಲದೇ ಕ್ರಿಕೆಟ್ಗೆ ಹೆಚ್ಚಾಗಿ ಬಳಕೆಯಲ್ಲಿದ್ದ ಹಾಟ್ಸ್ಟಾರ್ ಮೂಲೆ ಗುಂಪಾಗಿತ್ತು. ಈಗ ಹಾಟ್ಸ್ಟಾರ್ ಸಹ ಜಿಯೋ ಸಿನಿಮಾ ಜೊತೆ ಸ್ಪರ್ಧೆಗೆ ಇಳಿದಿದ್ದು, ಉಚಿತ ಘೋಷಣೆಗೆ ಮುಂದಾಗಿದೆ. ಮುಂದೆ ಬರಲಿರುವ ಮಹತ್ವದ ಅಂತಾರಾಷ್ಟ್ರೀಯ ಪಂದ್ಯಗಳ ಫ್ರೀ ವೀಕ್ಷಣೆ ಅವಕಾಶ ಮಾಡಿಕೊಡುವ ಮೂಲಕ ಭಾರತದಲ್ಲಿ ಒಟಿಟಿ ಪ್ರಸಾರದಲ್ಲಿ ಇದ್ದ ನಂ.1 ಗಿರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಏಷ್ಯಾ ರಾಷ್ಟ್ರಗಳ ಕ್ರಿಕೆಟ್ ತಂಡಗಳು ಆಡುವ ಏಷ್ಯಾಕಪ್ ಮತ್ತು ಭಾರತದಲ್ಲಿ ಈ ವರ್ಷಾಂತ್ಯಕ್ಕೆ ನಡೆಯಲಿರುವ ವಿಶ್ವಕಪ್ ಪಂದ್ಯಗಳ ಪ್ರಸಾರದ ಹಕ್ಕು ಸ್ಟಾರ್ ಸಂಸ್ಥೆಯ ಬಳಿ ಇದೆ. ಇದನ್ನು ಡಿಸ್ನಿ ಪ್ಲೆಸ್ ಹಾಟ್ಸ್ಟಾರ್ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಮೂಲಕ ತಮ್ಮ ಮಾರ್ಕೆಟ್ ಅನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಭಾರತದಲ್ಲಿ ಹಾಟ್ಸ್ಟಾರ್ಗೆ ಅಗ್ರಸ್ಥಾನ: ಒಟಿಟಿ ಮಾಧ್ಯಮಗಳು ಹಲವಾರು ಇದ್ದರೂ, ಹಾಟ್ಸ್ಟಾರ್ ಭಾರತದ ಚಂದಾದಾರಿಕೆಯಲ್ಲಿ ಅತಿ ಹೆಚ್ಚು ಜನರನ್ನು ಒಳಗೊಂಡಿದ್ದ ಮಾಧ್ಯಮವಾಗಿತ್ತು. ಇದಕ್ಕೆ ಕಾರಣ ಕ್ರಿಕೆಟ್, ಏಷ್ಯಾ ರಾಷ್ಟ್ರಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರಿಕೆಟ್ಗಳ ಪ್ರಸಾರದ ಹಕ್ಕು ಬಹಳ ವರ್ಷಗಳಿಂದ ಸ್ಟಾರ್ ಗೂಪ್ ಬಳಿಯೇ ಇದೆ. ಅಲ್ಲದೇ ಕಳೆದ ವರ್ಷದ ವರೆಗೂ ಐಪಿಎಲ್ನ ಪ್ರಸಾರದ ಹಕ್ಕು ಸಹ ಸ್ಟಾರ್ ಸಂಸ್ಥೆ ಬಳಿಯೇ ಇತ್ತು.
ಆದರೆ, ಈ ವರ್ಷದ ಐಪಿಎಲ್ ವೇಳೆ ಬಿಸಿಸಿಐ ಹೊಸ ಹರಾಜು ಪ್ರಕ್ರಿಯೆಯನ್ನು ಮಾಡಿತ್ತು. ಅದರಂತೆ ಟಿವಿ ಪ್ರಸಾರದ ಹಕ್ಕು ಮತ್ತು ಒಟಿಟಿ ಪ್ರಸಾರದ ಹಕ್ಕನ್ನು ಬೇರೆ ಬೇರೆ ಮಾಡಿ ಹರಾಜಿಗೆ ಕರೆದಿತ್ತು. ಒಟಿಟಿ ಪ್ರಸಾರದ ಹಕ್ಕನ್ನು ಜಿಯೋ ಸಂಸ್ಥೆ ದುಬಾರಿ ಮೊತ್ತ ನೀಡಿ ಖರೀದಿಸಿ ಉಚಿತ ವೀಕ್ಷಣೆಯ ಅವಕಾಶ ಮಾಡಿಕೊಟ್ಟಿದ್ದಲ್ಲದೇ ಭಾರತದ ಬಹುತೇಕ ಭಾಷೆಗಳಲ್ಲಿ ವೀಕ್ಷಕ ವಿವರಣೆ ವ್ಯವಸ್ಥೆ ಮಾಡಿತ್ತು. ಇದು ಜಿಯೋಗೆ ಭರ್ಜರಿ ಯಶಸ್ಸು ತಂದುಕೊಟ್ಟಿತ್ತು.
ಐಪಿಎಲ್ ಮುಗಿಯುತ್ತಿದ್ದಂತೆ ಹೆಚ್ಬಿಒ (HBO) ಜೊತೆಗೆ ಸೇರಿಕೊಂಡ ವೆಬ್ ಸರಣಿಗಳ ಪ್ರಸಾರ ಮತ್ತು ಜಿಯೋ ಅವರ ನಿರ್ಮಾಣ ಸಂಸ್ಥೆಯಲ್ಲಿ ತಯಾರಾದ ಸಿನಿಮಾಗಳನ್ನು ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿತು. ಅಲ್ಲದೇ ಪ್ರೈಮ್ ವಿಡಿಯೋಗಳ ವೀಕ್ಷಣೆಗೆ 999 ರೂ ಕೊಟ್ಟು ವಾರ್ಷಿಕ ಚಂದಾದಾರಿಕೆ ಖರೀದಿಸುಂತೆ ಅಗ್ಗದ ಒಟಿಟಿ ಸೌಲಭ್ಯವನ್ನು ನೀಡಿದೆ.
ಇದೆಲ್ಲವೂ ಇತರ ಒಟಿಟಿಯ ಜೊತೆಗೆ ಸ್ಟಾರ್ ಸಂಸ್ಥೆಗೆ ದೊಡ್ಡ ಹೊಡೆತ ಕೊಟ್ಟಿದ್ದು, ಇದಕ್ಕಾಗಿ ವಿಶ್ವಕಪ್ ಮತ್ತು ಏಷ್ಯಾಕಪ್ನ್ನು ಮೊಬೈಲ್ ಬಳಕೆದಾರರಿಗೆ ಉಚಿತವಾಗಿ ಕೊಡುವ ಚಿಂತನೆಯನ್ನು ಹಾಟ್ಸ್ಟಾರ್ ಮಾಡಿದೆ. ಇದರಿಂದ ಜಾಗತಿಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: JioCinemaಗೆ ಬಂಪರ್! ಐಪಿಎಲ್ ಪ್ರಸಾರದ ವೇಳೆ 23 ಕಂಪನಿಗಳಿಂದ ಜಾಹೀರಾತು