ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಐಪಿಎಲ್ನಲ್ಲಿ 200ನೇ ಪಂದ್ಯವನ್ನಾಡಿದ 3ನೇ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ನ 15ನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಈ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ(208) ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (204) ನಂತರ ನಗದು ಸಮೃದ್ಧ ಲೀಗ್ನಲ್ಲಿ 200 ಪಂದ್ಯಗಳನ್ನಾಡಿದ 3ನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
-
𝙄𝙣 𝙚𝙡𝙞𝙩𝙚 𝙘𝙤𝙢𝙥𝙖𝙣𝙮 ✨@DineshKarthik becomes one of only 3️⃣ players to make 2️⃣0️⃣0️⃣ IPL appearances! #KKRvCSK #KKRHaiTaiyaar #IPL2021 pic.twitter.com/sw7blDqlhE
— KolkataKnightRiders (@KKRiders) April 21, 2021 " class="align-text-top noRightClick twitterSection" data="
">𝙄𝙣 𝙚𝙡𝙞𝙩𝙚 𝙘𝙤𝙢𝙥𝙖𝙣𝙮 ✨@DineshKarthik becomes one of only 3️⃣ players to make 2️⃣0️⃣0️⃣ IPL appearances! #KKRvCSK #KKRHaiTaiyaar #IPL2021 pic.twitter.com/sw7blDqlhE
— KolkataKnightRiders (@KKRiders) April 21, 2021𝙄𝙣 𝙚𝙡𝙞𝙩𝙚 𝙘𝙤𝙢𝙥𝙖𝙣𝙮 ✨@DineshKarthik becomes one of only 3️⃣ players to make 2️⃣0️⃣0️⃣ IPL appearances! #KKRvCSK #KKRHaiTaiyaar #IPL2021 pic.twitter.com/sw7blDqlhE
— KolkataKnightRiders (@KKRiders) April 21, 2021
ಕಾರ್ತಿಕ್ 13 ವರ್ಷಗಳ ಐಪಿಎಲ್ ವೃತ್ತಿ ಜೀವನದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ (2008ರಿಂದ 2010), ಪಂಜಾಬ್ ಕಿಂಗ್ಸ್(2011), ಮುಂಬೈ ಇಂಡಿಯನ್ಸ್ 2012-13ರವರೆಗೆ, ಡೆಲ್ಲಿ(2014), ರಾಯಲ್ ಚಾಲೆಂಜರ್ಸ್ ಬೆಂಗಳೂರು(2015), ಗುಜರಾತ್ ಲಯನ್ಸ್( 2016-17) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(2018ರಿಂದ) ತಂಡಗಳ ಪರ ಆಡಿದ್ದಾರೆ.
ಅವರು 199(180 ಇನ್ನಿಂಗ್ಸ್) ಪಂದ್ಯಗಳಿಂದ 129ರ ಸ್ಟ್ರೈಕ್ ರೇಟ್ನಲ್ಲಿ 3855 ರನ್ ಗಳಿಸಿದ್ದಾರೆ. 19 ಅರ್ಧಶತಕ ಸಿಡಿಸಿದ್ದಾರೆ. ವಿಕೆಟ್ ಕೀಪಿಂಗ್ನಲ್ಲಿ 140 ಬಲಿ ಪಡೆಯುವ ಮೂಲಕ ಐಪಿಎಲ್ನಲ್ಲಿ ಧೋನಿ ನಂತರ ಅತ್ಯುತ್ತಮ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಅಲ್ಲದೆ ಐಪಿಎಲ್ನಲ್ಲಿ ಗರಿಷ್ಠ ಕ್ಯಾಚ್(112) ಪಡೆದ ದಾಖಲೆ ಕಾರ್ತಿಕ್ ಹೆಸರಿನಲ್ಲಿದೆ. ಧೋನಿ 109 ಕ್ಯಾಚ್ ಪಡೆದಿದ್ದಾರೆ.