ETV Bharat / sports

ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 208 ಕಿ.ಮೀ ವೇಗದಲ್ಲಿ ಬೌಲಿಂಗ್​ ಮಾಡಿದ್ರಾ ಭುವಿ? - ವೇಗಿ ಭುವನೇಶ್ವರ್ ಕುಮಾರ್​

ಐರ್ಲೆಂಡ್​ ವಿರುದ್ಧ ನಿನ್ನೆ ನಡೆದ ಮೊದಲ ಟಿ20 ಪಂದ್ಯದಲ್ಲಿ ವೇಗದ ಬೌಲರ್​ ಭುವನೇಶ್ವರ್ ಕುಮಾರ್​ ದಾಖಲೆಯ 208 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ...

Bhuvneshwar Kumar Bowl
Bhuvneshwar Kumar Bowl
author img

By

Published : Jun 27, 2022, 3:13 PM IST

ಡಬ್ಲಿನ್​​(ಐರ್ಲೆಂಡ್​): ಕ್ರಿಕೆಟ್ ಶಿಶು ಐರ್ಲೆಂಡ್​ ವಿರುದ್ಧ ಭಾನುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಒಂದು ವಿಕೆಟ್‌ ಪಡೆಯುವ ಮೂಲಕ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್, ಪವರ್​​ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇದರ ಜೊತೆಗೆ ಅವರು ಎಲ್ಲರೂ ಹುಬ್ಬೇರಿಸುವ ಮತ್ತೊಂದು ಸಾಧನೆ ಮಾಡಿದ್ದಾರೆಂದು ಎಲ್ಲರೂ ಅಚ್ಚರಿಗೊಳಗಾಗಿದ್ದರು.

Bhuvneshwar Kumar Bowl

ಸ್ವಿಂಗ್​​ ಬೌಲರ್​ ಭುವಿ​​ ನಿನ್ನೆಯ ಪಂದ್ಯದಲ್ಲಿ ಗಂಟೆಗೆ ಬರೋಬ್ಬರಿ 208 ಕಿ.ಮೀ ವೇಗದಲ್ಲಿ ಚೆಂಡು ಎಸೆದಿದ್ದಾರೆಂದು ಟಿವಿ ಪರದೆಯಲ್ಲಿ ತೋರಿಸಲಾಗಿತ್ತು. ಈ ಮೂಲಕ ಕ್ರಿಕೆಟ್​ ಅಭಿಮಾನಿಗಳು ಮಾತ್ರವಲ್ಲ, ಕ್ರಿಕೆಟ್​ ದಿಗ್ಗಜರಿಗೇ ಅರೆಕ್ಷಣ ಅಚ್ಚರಿ.! ಕೆಲವರು ಪಾಕ್‌ನ ಶೋಯೆಬ್​ ಅಖ್ತರ್​​​ ಅವರನ್ನು ಉಲ್ಲೇಖಿಸಿ ವಿಶ್ವ ಕ್ರಿಕೆಟ್​ನಲ್ಲಿ 161.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿರುವ ದಾಖಲೆಯನ್ನು ಭುವಿ ಪುಡಿಗಟ್ಟಿದ್ದಾರೆ ಎಂದು ವಾದಿಸಿದ್ದರು.

ಇದನ್ನೂ ಓದಿ: ಟಿ-20 ಪವರ್​ ಪ್ಲೇ: ಅತಿ ಹೆಚ್ಚು ವಿಕೆಟ್ ಪಡೆದ​ ಭುವನೇಶ್ವರ್ ಕುಮಾರ್

ಕ್ರಿಕೆಟ್​ ಇತಿಹಾಸದಲ್ಲಿ ಅತಿ ವೇಗದ ಚೆಂಡು ಎಸೆದ ದಾಖಲೆ ಶೋಯೆಬ್​ ಅಖ್ತರ್​ ಹೆಸರಲ್ಲಿದೆ. ಭುವನೇಶ್ವರ್ ಕುಮಾರ್ ಬೌಲಿಂಗ್ ಮಾಡ್ತಿದ್ದಾಗ ಸ್ಪೀಡೋ ಮೀಟರ್​​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ, ಮೊದಲ ಎಸೆತ 201 ಕಿಲೋ ಮೀಟರ್​ ಹಾಗೂ ಎರಡನೇ ಎಸೆತ 208 ಕಿ.ಮೀ ಎಂದು ಕಾಣಿಸಿಕೊಂಡಿದೆ ಎನ್ನಲಾಗ್ತಿದೆ.

2002ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಶೋಯೆಬ್ ಅಖ್ತರ್ ದಾಖಲೆಯ 161.3 ಕಿ.ಮೀ ವೇಗದಲ್ಲಿ ಚೆಂಡು ಎಸೆದಿರುವುದು ಮುರಿಯದ ದಾಖಲೆಯಾಗಿಯೇ ಉಳಿದಿದೆ. 2022ರ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವೇಗಿ ಉಮ್ರಾನ್ ಮಲಿಕ್​ 157 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

ಐರ್ಲೆಂಡ್​ ವಿರುದ್ಧ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ 7 ವಿಕೆಟ್​​ಗಳ ಅಂತರದ ಗೆಲುವು ದಾಖಲಿಸಿದ್ದು, ಎರಡು ಟಿ20 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.