ETV Bharat / sports

ಪ್ರತಿಬಾರಿ ಮೈದಾನಕ್ಕಿಳಿದಾಗಲೂ ಧೋನಿ ಸರ್​ ಹೇಳಿದ್ದನ್ನು ನೆನಪಿಸಿಕೊಳ್ತೀನಿ : ಇಂದ್ರಾಣಿ ರಾಯ್ - ಎಂಎಸ್ ಧೋನಿ

ಮಹಿ ಸರ್​ ಅವರಂತಹ ಲೆಜೆಂಡ್​​ಗಳಿಂದ ಕಲಿಯುವುದು ನಿಜಕ್ಕೂ ದೊಡ್ಡ ಸವಲತ್ತಾಗಿದೆ. ಇದೀ ಅವರಿಂದ ನನ್ನ ಆಟ ಸುಧಾರಿಸಿದೆ. ನಾನು ಮೈದಾನಕ್ಕೆ ಬಂದಾಗಲೆಲ್ಲಾ ಅವರ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ..

ಇಂದ್ರಾಣಿ ರಾಯ್
ಇಂದ್ರಾಣಿ ರಾಯ್
author img

By

Published : May 17, 2021, 6:08 PM IST

ರಾಂಚಿ : ಇಂಗ್ಲೆಂಡ್​ ಪ್ರವಾಸಕ್ಕೆ ಭಾರತ ಮಹಿಳಾ ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆಯಾಗಿರುವ ಯುವ ವಿಕೆಟ್ ಕೀಪರ್ ಇಂದ್ರಾಣಿ ತಮಗೆ ಧೋನಿ ನೀಡಿದ್ದ ಪ್ರಮುಖ ಸಲಹೆಗಳನ್ನು ತಿಳಿಸಿದ್ದಾರೆ.

ಮುಂದಿನ ತಿಂಗಳು ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್​ ಮತ್ತು 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಯನ್ನಾಡಲು ತೆರಳಲಿದೆ.

ಈ ಸರಣಿಯಲ್ಲಿ ರಾಂಚಿಯ 23 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್​ವುಮನ್ ಇಂದ್ರಾಣಿ ರಾಯ್ ಮೊದಲ ಬಾರಿಗೆ ನೀಲಿ ಜರ್ಸಿ ತೊಡಲು ಸಿದ್ಧರಾಗಿದ್ದಾರೆ.

ತಮ್ಮ ಆಯ್ಕೆಯ ಸಂಭ್ರಮವನ್ನು ಸ್ಪೋರ್ಟ್ಸ್​ ಸ್ಟಾರ್​ ಜೊತೆ ಹಂಚಿಕೊಂಡಿರುವ ಅವರು, ತಮ್ಮ ಆಟ ಅಭಿವೃದ್ಧಿಯಾಗಲು ಧೋನಿ ನೀಡಿದ ಸಲಹೆ ಹೇಗಿತ್ತು ಎಂದು ರಾಯ್ ತಿಳಿಸಿದ್ದಾರೆ.

ಕಳೆದ ವರ್ಷ ರಾಂಚಿಯಲ್ಲಿ ತರಬೇತಿ ಸೆಷನ್​ ನಡೆಯುವ ವೇಳೆ ಮಹಿ ಸರ್​ ಜೊತೆ ನಾನು ದೀರ್ಘವಾದ ಮಾತುಕತೆ ನಡೆಸಿದ್ದೆ. ಅವರು ನನ್ನ ಆಟ ಉತ್ತಮಗೊಳಿಸಲು ಹಲವು ಸಲಹೆ ನೀಡಿದರು. 5 ಮೀಟರ್​ ತ್ರಿಜ್ಯದಲ್ಲಿ ರೆಫ್ಲೆಕ್ಸಸ್​ ಮತ್ತು ಮೂವ್​ಮೆಂಟ್​ ಕಡೆ ಹೆಚ್ಚು ಗಮನ ನೀಡಬೇಕೆಂದು ತಿಳಿಸಿದರು.

ವಿಕೆಟ್​ ಕೀಪರ್​ಗಳು ಪಾದದ ಚಲನೆಗಳು ಪ್ರಮುಖ ವಿಷಯ, ಅದನ್ನು ಉತ್ತಮಗೊಳಿಸಿಕೊಳ್ಳಬೇಕೆಂದು ಅವರು ನನಗೆ ಸಲಹೆ ನೀಡಿದರು. ಅವರ ಸಲಹೆಗಳು ನನಗೆ ಸಾಕಷ್ಟು ಸಹಾಯ ಮಾಡಿದವು.

ಮಹಿ ಸರ್​ ಅವರಂತಹ ಲೆಜೆಂಡ್​​ಗಳಿಂದ ಕಲಿಯುವುದು ನಿಜಕ್ಕೂ ದೊಡ್ಡ ಸವಲತ್ತಾಗಿದೆ. ಇದೀ ಅವರಿಂದ ನನ್ನ ಆಟ ಸುಧಾರಿಸಿದೆ. ನಾನು ಮೈದಾನಕ್ಕೆ ಬಂದಾಗಲೆಲ್ಲಾ ಅವರ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ ಎಂದು ರಾಯ್ ತಿಳಿಸಿದ್ದಾರೆ.

ಇದನ್ನು ಓದಿ:ನನಗೆ ಜಾಕ್ ಕಾಲಿಸ್​, ವಾಟ್ಸನ್​ರಂತೆ ಆಡುವ ಸಾಮರ್ಥ್ಯವಿದೆ, ಅವಕಾಶ ಸಿಗುತ್ತಿಲ್ಲ: ವಿಜಯ ಶಂಕರ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.