ETV Bharat / sports

ಸಿಎಸ್​ಕೆ ಪ್ಲೇ ಆಫ್​ ತಲುಪಿದ ಮೇಲೆ ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ಬೇಕು : ಗಂಭೀರ್ ಸಲಹೆ - ಕೋಲ್ಕತ್ತಾ ನೈಟ್ ರೈಡರ್ಸ್​

ಅದು ಚೇಸಿಂಗ್ ಆಗಿರಬಹುದು ಅಥವಾ ಮೊದಲು ಬ್ಯಾಟಿಂಗ್ ಮಾಡಿರಲಿ, ಅವರು ಕ್ರೀಸ್​ನಲ್ಲಿ ಸಮಯ ಕಳೆಯಬೇಕು. ನಾನು ಅದನ್ನು ನೋಡಬೇಕೆಂದು ಬಯಸಿದ್ದೇನೆ. ಆಶಾದಾಯಕವಾಗಿ, ಅದು ಸಂಭವಿಸುತ್ತದೆ ಎಂದುಕೊಂಡಿದ್ದೇನೆ. ನಾಯಕನ ಅತ್ಯುತ್ತಮ ವಿಶೇಷತೆ ಅಂದರೆ ಅವರು ತೆನ್ನಿಚ್ಛೆಯಂತೆ ಎಲ್ಲಿ ಬೇಕಾದರೂ ಬ್ಯಾಟ್ ಮಾಡಬಹುದು..

GAMBHIR-DHONI
ಗೌತಮ್ ಗಂಭೀರ್ - ಧೋನಿ
author img

By

Published : Sep 25, 2021, 10:11 PM IST

Updated : Sep 25, 2021, 10:36 PM IST

ನವದೆಹಲಿ : ಚೆನ್ನೈ ಸೂಪರ್​ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ನಲ್ಲಿ ಚೆನ್ನೈ ಕ್ವಾಲಿಫೈಯರ್​ ತಲುಪಿದ ಮೇಲೆ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟಿಂಗ್ ಮಾಡಬೇಕೆಂದು ಮಾಜಿ ಟೀಂ​ ಇಂಡಿಯಾ ಬ್ಯಾಟರ್​ ಗೌತಮ್ ಗಂಭೀರ್​ ಹೇಳಿದ್ದಾರೆ.

ಸಿಎಸ್​ಕೆ ಪ್ರಸ್ತುತ 9 ಪಂದ್ಯಗಳಿಂದ 7 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಸಿಎಸ್​ಕೆ ಪ್ಲೇ ಆಫ್​ ಅಂತಿಮ ಮೆಟ್ಟಿಲಿನಲ್ಲಿದೆ. ಸಿಎಸ್​ಕೆ ತಂಡ ಎಲ್ಲಾ ವಿಭಾಗದಲ್ಲೂ ಅದ್ಭುತ ಪ್ರದರ್ಶನ ತೋರುತ್ತಿದೆ. ಆದರೆ, ನಾಯಕ ಧೋನಿ ಕಳೆದ ಆವೃತ್ತಿಯಿಂದಲೂ ಬ್ಯಾಟಿಂಗ್​ನಲ್ಲಿ ಹೇಳಿಕೊಳ್ಳುವ ಪ್ರದರ್ಶನ ತೋರುತ್ತಿಲ್ಲ.

ಐಪಿಎಲ್​ನ 2ನೇ ಹಂತದಲ್ಲೂ ಮುಂಬೈ ವಿರುದ್ಧ 3, ಆರ್​ಸಿಬಿ ವಿರುದ್ಧ ಅಜೇಯ 11 ರನ್​ಗಳಿಸಿದ್ದರು. ಹಾಗಾಗಿ, ಗೌತಮ್ ಗಂಭೀರ್​ ಅವರನ್ನು 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಕ್ಕಿಂತ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ಸೂಕ್ತ ಎಂದು ಹೇಳಿದ್ದಾರೆ.

ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಕ್ಕೆ ಎರಡು ಬಾರಿ ಟ್ರೋಫಿ ತಂದುಕೊಟ್ಟಿರುವ ಗಂಭೀರ್​, ಧೋನಿ ಚೇಸಿಂಗ್ ಆಗಿರಲಿ ಅಥವಾ ಡಿಫೆಂಡಿಂಗ್ ಆಗಿರಲಿ ನಂಬರ್​ 4ರಲ್ಲಿ ಆಡಬೇಕು ಎಂದು ಹೇಳಿದ್ದಾರೆ. ಸಿಎಸ್​ಕೆ ಪ್ಲೇ ಆಫ್​ ತಲುಪಿದಾಗ ಎಂಎಸ್​ ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು.

ಅದು ಚೇಸಿಂಗ್ ಆಗಿರಬಹುದು ಅಥವಾ ಮೊದಲು ಬ್ಯಾಟಿಂಗ್ ಮಾಡಿರಲಿ, ಅವರು ಕ್ರೀಸ್​ನಲ್ಲಿ ಸಮಯ ಕಳೆಯಬೇಕು. ನಾನು ಅದನ್ನು ನೋಡಬೇಕೆಂದು ಬಯಸಿದ್ದೇನೆ. ಆಶಾದಾಯಕವಾಗಿ, ಅದು ಸಂಭವಿಸುತ್ತದೆ ಎಂದುಕೊಂಡಿದ್ದೇನೆ. ನಾಯಕನ ಅತ್ಯುತ್ತಮ ವಿಶೇಷತೆ ಅಂದರೆ ಅವರು ತೆನ್ನಿಚ್ಛೆಯಂತೆ ಎಲ್ಲಿ ಬೇಕಾದರೂ ಬ್ಯಾಟ್ ಮಾಡಬಹುದು ಎಂದು ಗಂಭೀರ್ ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ನೀವು ನಂಬರ್​ 3 ಅಥವಾ 4ನೇ ಕ್ರಮಾಂಕದ ಬ್ಯಾಟರ್​ ರನ್​ಗಳಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ನೀವು ಸ್ವಲ್ಪ ಸಮಯ ಹೆಚ್ಚು ಬ್ಯಾಟಿಂಗ್ ಮಾಡಬೇಕಾಗುತ್ತದೆ. ನೀವು ಹೆಚ್ಚು ರನ್ ಗಳಿಸಿದರೆ, ಅದು ಸುಲಭವಾಗಿ ಮುಂದುವರಿಯುತ್ತದೆ. ಪ್ಲೇ ಆಫ್​ನಲ್ಲಿ ನಿಮ್ಮ ತಂಡ ಬೇಗ ವಿಕೆಟ್​ ಕಳೆದುಕೊಂಡರೆ ನೀವು ಮೇಲಿನ ಕ್ರಮಾಂಕದಲ್ಲಿ ಬಂದು ರನ್​ ಗಳಿಸುವ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ ಎಂದು ಗಂಭೀರ್​ ಹೇಳಿದ್ದಾರೆ.

ಇದನ್ನು ಓದಿ : ಟಿ20 ಕ್ರಿಕೆಟ್​ನಲ್ಲಿ 250 ವಿಕೆಟ್​ ಪಡೆದ ರವಿಚಂದ್ರನ್ ಅಶ್ವಿನ್

Last Updated : Sep 25, 2021, 10:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.