ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್.ಧೋನಿ ನಂ .7 ರ ಬದಲು ಮೇಲಿನ ಕ್ರಮಾಂಕದಲ್ಲಿ ಆಡಬೇಕು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಈ ಸೀಸನ್ನ ಮೊದಲ ಪಂದ್ಯದಲ್ಲಿ ನಾಯಕ ಧೋನಿ ಶೂನ್ಯಕ್ಕೆ ಔಟ್ ಆಗಿ ಹಿಂದಿನ ವರ್ಷದಿಂದ ಈ ವರ್ಷವೂ ಕಳಪೆ ಫಾರ್ಮ್ ಮುಂದುವರಿಸಿದ್ದರು. ಈ ಹಿನ್ನೆಲೆಯಲ್ಲಿ ನಿವೃತ್ತ ಕ್ರಿಕೆಟರ್ ಗೌತಮ್ ಗಂಭೀರ ಈ ಸಲಹೆ ನೀಡಿದ್ದಾರೆ.
ಈ ಹಿಂದಿನಂತೆ ಧೋನಿ ಈಗ ಬೌಂಡರಿ ಭಾರಿಸುವ ಮೂಲಕ ಇನ್ನಿಂಗ್ಸ್ ಆರಂಭಿಸುವ ಆಟಗಾರರಾಗಿ ಉಳಿದಿಲ್ಲ ಎಂದು ಗಂಭೀರ ಅಭಿಪ್ರಾಯಪಟ್ಟಿದ್ದಾರೆ. "ಎಂಎಸ್ ಧೋನಿ ಹೆಚ್ಚಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು, ಅದು ಮುಖ್ಯವಾದುದು. ಏಕೆಂದರೆ ಅವರು ತಂಡವನ್ನು ಮುಂಚೂಣಿಯಲ್ಲಿ ನಿಂತು ನಿರ್ವಹಿಸಬೇಕಿದೆ ಎಂದು ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎರಡು ಬಾರಿ ಪ್ರಶಸ್ತಿಗೆ ತೆಗೆದುಕೊಂಡು ಹೋಗಿದ್ದ ಗೌತಮ್ ಗಂಭೀರ್ ಹೇಳಿದ್ದಾರೆ.
ಇದನ್ನೂ ಓದಿ: ’ನಿರಂತರವಾಗಿ ಯಶಸ್ವಿಯಾಗುವುದು ಪಾಸಿಟಿವ್ ಎನರ್ಜಿ ಕೊಟ್ಟಿದೆ’ : ಎಬಿ ಡಿವಿಲಿಯರ್ಸ್!
"ಒಬ್ಬ ನಾಯಕ ತಂಡವನ್ನ ಮುಂಚೂಣಿಯಲ್ಲಿ ನಿಂತು ನಡೆಸಬೇಕಾಗಿರುವುದರಿಂದ ನಾನು ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಸಿಎಸ್‌ಕೆ ತಂಡದ ಬೌಲಿಂಗ್ ವಿಭಾಗದಲ್ಲಿ ಕೆಲ ಸಮಸ್ಯಗಳಿವೆ. ಆದರೆ, ಧೋನಿ ಮೇಲಿನ ಕ್ರಮಾಂಕದಲ್ಲಿ ಬಂದು ಆಡುವುದರಿಂದ ತಂಡಕ್ಕೆ ಲಾಭ ಇದೆ ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.