ಮುಂಬೈ: ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್ ಪಡೆದು ಮಿಂಚಿದ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ, ಐಪಿಎಲ್ನಲ್ಲಿ 150 ಮಂದಿ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದ ದಾಖಲೆಗೆ ಪಾತ್ರರಾಗಿದ್ದಾರೆ.
ಧೋನಿ ಕೆಕೆಆರ್ ತಂಡದ ನಿತೀಶ್ ರಾಣಾ(9), ರಾಹುಲ್ ತ್ರಿಪಾಠಿ(8) ಮತ್ತು ಇಯಾನ್ ಮಾರ್ಗನ್(7)ರನ್ನು ನಿನ್ನೆಯ ಪಂದ್ಯದಲ್ಲಿ ಬಲಿ ಪಡೆದಿದ್ದರು. ಈ ಮೂಲಕ ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಸ್ಟಂಪ್ ಹಿಂದೆ ನಿಂತು 150 ಮಂದಿಯನ್ನು ಪೆವಿಲಿಯನ್ಗಟ್ಟಿದ ವಿಶೇಷ ದಾಖಲೆಗೆ ಪಾತ್ರರಾದರು. ಇದರಲ್ಲಿ 112 ಕ್ಯಾಚ್ ಮತ್ತು 39 ಸ್ಟಂಪ್ ಸೇರಿವೆ.
ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗರಿಷ್ಠ ಕ್ಯಾಚ್ ಪಡೆದ ದಾಖಲೆಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ದಿನೇಶ್ ಕಾರ್ತಿಕ್ ಅವರ ಜೊತೆ ಹಂಚಿಕೊಂಡರು. ಧೋನಿ ಮತ್ತು ಕಾರ್ತಿಕ್ ತಲಾ 112 ಕ್ಯಾಚ್ ಪಡೆದಿದ್ದಾರೆ. ಐಪಿಎಲ್ನಲ್ಲಿ 100ಕ್ಕೂ ಹೆಚ್ಚು ಕ್ಯಾಚ್ ಪಡೆದಿರುವುದು ವಿಕೆಟ್ ಕೀಪರ್ಗಳಾಗಿದ್ದಾರೆ. ಇನ್ನು ಕಾರ್ತಿಕ್ 31 ಸ್ಟಂಪ್ ಮಾಡಿದ್ದು, ಒಟ್ಟು 143 ಡಿಸ್ಮಿಸಲ್ ಮಾಡಿದ್ದಾರೆ.
ಧೋನಿ ಮತ್ತು ಕಾರ್ತಿಕ್ ಹೊರತುಪಡಿಸಿದರೆ ಕನ್ನಡಿಗ ರಾಬಿನ್ ಉತ್ತಪ್ಪ 90, ಪಾರ್ಥೀವ್ ಪಟೇಲ್ 81, ವೃದ್ಧಿಮಾನ್ ಸಹಾ 79 ಡಿಸ್ಮಿಸಲ್ ಮಾಡಿ ಅಗ್ರ 5ರ ಪಟ್ಟಿಯಲ್ಲಿದ್ದಾರೆ.
ಇದನ್ನು ಓದಿ:ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿರುವ ಕೆಕೆಆರ್ ನಾಯಕನಿಗೆ 12 ಲಕ್ಷ ರೂ. ದಂಡ