ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಯಶಸ್ವಿ ನಾಯಕನಾಗಿರುವ ಮಹೇಂದ್ರ ಸಿಂಗ್ ಧೋನಿ ಈಗಾಗಲೇ ಸಿಎಸ್ಕೆ ತಂಡಕ್ಕೆ ಹಲವಾರು ಸಲ ಪ್ರಶಸ್ತಿ ತಂದುಕೊಟ್ಟಿದ್ದಾರೆ. 2022ರ ಆವೃತ್ತಿ ಮೇಲೂ ಕಣ್ಣಿಟ್ಟಿರುವ ಅವರು ಇದೀಗ ಚೆನ್ನೈಗೆ ಬಂದಿಳಿದಿದ್ದಾರೆ.
2022ರ ಇಂಡಿಯನ್ ಪ್ರೀಮಿಯರ್ ಲೀಗ್ಗೋಸ್ಕರ ಫೆ. 12 ಮತ್ತು 13ರಂದು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದಕ್ಕಾಗಿ ಯಾವ ಆಟಗಾರರನ್ನ ಖರೀದಿ ಮಾಡಬೇಕು ಎಂಬ ವಿಷಯಗಳ ಬಗ್ಗೆ ಮ್ಯಾನೇಜ್ಮೆಂಟ್ ಜೊತೆ ಚರ್ಚೆ ಮಾಡಲು ಧೋನಿ ಚೆನ್ನೈಗೆ ಆಗಮಿಸಿದ್ದಾರೆ. ಇದೀಗ ಸಿಎಸ್ಕೆ ಫ್ರಾಂಚೈಸಿ ಜೊತೆ ಮಹೇಂದ್ರ ಸಿಂಗ್ ಧೋನಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.
-
The 💛 goes 😁, every single time! #ThalaDharisanam #WhistlePodu 🦁 pic.twitter.com/IihZJsuDVQ
— Chennai Super Kings - Mask P😷du Whistle P🥳du! (@ChennaiIPL) January 27, 2022 " class="align-text-top noRightClick twitterSection" data="
">The 💛 goes 😁, every single time! #ThalaDharisanam #WhistlePodu 🦁 pic.twitter.com/IihZJsuDVQ
— Chennai Super Kings - Mask P😷du Whistle P🥳du! (@ChennaiIPL) January 27, 2022The 💛 goes 😁, every single time! #ThalaDharisanam #WhistlePodu 🦁 pic.twitter.com/IihZJsuDVQ
— Chennai Super Kings - Mask P😷du Whistle P🥳du! (@ChennaiIPL) January 27, 2022
ಇದನ್ನೂ ಓದಿರಿ: ಪುಟ್ಟ ಮಗುವಿದ್ರೂ ಮಾಜಿ ಸಿಎಂ ಬಿಎಸ್ವೈ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ಯಾಕೆ?
2022ರ ಆವೃತ್ತಿಗಾಗಿ ಸಿಎಸ್ಕೆ ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ, ಮೊಯಿನ್ ಅಲಿ ಮತ್ತು ಆರಂಭಿಕ ಆಟಗಾರ ಋತುರಾಜ್ ಗಾಯ್ಕವಾಡ್ಗೆ ತಂಡದಲ್ಲೇ ಉಳಿಸಿಕೊಂಡಿದೆ. ಇದೀಗ ಬಲಿಷ್ಠ ತಂಡ ಕಟ್ಟುವ ನಿಟ್ಟಿನಲ್ಲಿ ಯಾವೆಲ್ಲ ಆಟಗಾರರ ಖರೀದಿ ಮಾಡಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಭಾಗವಾಗಿರುವ ಮಹೇಂದ್ರ ಸಿಂಗ್ ಧೋನಿ ಆಟಗಾರರ ಖರೀದಿಗಾಗಿ ಮಹತ್ವದ ಪ್ಲಾನ್ ರೂಪಿಸಲಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ನಡೆಸಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಆದರೆ, ಈವರೆಗೆ ಸ್ಥಳ ನಿಗದಿ ಮಾಡಿಲ್ಲ. ಆದರೆ, ಟೂರ್ನಿಗೋಸ್ಕರ ದಿನಾಂಕ ನಿಗದಿ ಮಾಡಿದ್ದು, ಮಾರ್ಚ್ ಕೊನೆಯ ವಾರದಿಂದ ಐಪಿಎಲ್ ಹಂಗಾಮಾ ಶುರುವಾಗಲಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ