ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಪರ ರನ್ಗಳ ಮಳೆ ಹರಿಸುತ್ತಿರುವ ದೇವದತ್ ಪಡಿಕ್ಕಲ್ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೀಗ ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಕೂಡ ಅವರನ್ನ ಹೊಗಳಿದ್ದಾರೆ.
ಪಡಿಕ್ಕಲ್ ಆರ್ಸಿಬಿಯಲ್ಲಿ ಇದೀಗ ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಶತಕಗಳಿಸಿ ಮಿಂಚಿರುವ ಕನ್ನಡಿಗ ಈಗಾಗಲೇ ದೇಶಿಯ ಕ್ರಿಕೆಟ್ನಲ್ಲೂ ಮಹತ್ವದ ಸಾಧನೆ ಮಾಡಿದ್ದಾರೆ.
ಇದರ ಬ್ಯಾಟಿಂಗ್ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸುನಿಲ್ ಗವಾಸ್ಕರ್, ಪಡಿಕ್ಕಲ್ ಇದೀಗ ಭಾರತಕ್ಕಾಗಿ ಎಲ್ಲ ಸ್ವರೂಪದ ಕ್ರಿಕೆಟ್ ಆಡಲು ಸಮರ್ಥವಾಗಿದ್ದಾರೆ ಎಂದಿದ್ದಾರೆ. ಅವರು ಎಲ್ಲ ಸ್ವರೂಪದ ಕ್ರಿಕೆಟ್ಗಳಲ್ಲಿ ಭಾರತಕ್ಕಾಗಿ ಆಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಪಡಿಕ್ಕಲ್ ಆ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಜೊತೆಗಿನ ಆಟ ಮಧ್ಯಮ ಓವರ್ಗಳಲ್ಲಿ ಬೌಂಡರಿ ಸಿಡಿಸಲು ಸಹಾಯ ಮಾಡ್ತು: ಪಡಿಕ್ಕಲ್!
ಪ್ರಥಮ ದರ್ಜೆ ಕ್ರಿಕೆಟ್ ಹಾಗೂ ರಣಜಿ ಟ್ರೋಫಿಯಲ್ಲಿ ಈಗಾಗಲೇ ಅದ್ಭುತ ಪ್ರದರ್ಶನ ನೀಡಿರುವ ಪಡಿಕ್ಕಲ್, 50 ಓವರ್ಗಳ ಕ್ರಿಕೆಟ್ನಲ್ಲಿ ಸಾಕಷ್ಟು ರನ್ಗಳಿಸುವ ಸಾಮರ್ಥ್ಯವಿದೆ. ಟಿ-20 ದೇಶೀಯ ಕ್ರಿಕೆಟ್ನಲ್ಲೂ ಸಾಕಷ್ಟು ರನ್ಗಳಿಸಿದ್ದು, ಶೀಘ್ರದಲ್ಲೇ ಟೀಂ ಇಂಡಿಯಾ ಸೇರಿಕೊಂಡರೆ ನನಗೆ ಆಶ್ಚರ್ಯವಿಲ್ಲ ಎಂದು ವಿವರಿಸಿದ್ದಾರೆ. ಪಂಜಾಬ್ ಕಿಂಗ್ಸ್ ನಾಯಕ ಕೆ.ಎಲ್ ರಾಹುಲ್ ನಂತರ ಕರ್ನಾಟಕದಿಂದ ಹೊರಬಂದ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಪಡಿಕ್ಕಲ್ ಕೂಡ ಒಬ್ಬರಾಗಿದ್ದಾರೆ ಎಂದಿದ್ದಾರೆ.
ಕರ್ನಾಟಕ ಈಗಾಗಲೇ ಅನೇಕ ಬ್ಯಾಟ್ಸಮನ್ಗಳನ್ನ ಭಾರತ ತಂಡಕ್ಕೆ ನೀಡಿದ್ದು, ಅದರಲ್ಲಿ ಜಿ. ವಿಶ್ವನಾಥ್, ರಾಹುಲ್ ದ್ರಾವಿಡ್, ಕೆ.ಎಲ್. ರಾಹುಲ್, ಮಾಯಾಂಕ್ ಅಗರ್ವಾಲ್, ತ್ರಿಶತಕ ವೀರ ಕರುಣ್ ನಾಯರ್. ಇದೀಗ ಪಡಿಕ್ಕಲ್ ಕೂಡ ಅವರ ಸಾಲಿನಲ್ಲಿ ನಿಲ್ಲುತ್ತಾರೆ ಎಂದಿದ್ದಾರೆ.