ಪುದುಚೇರಿ: ರೋಹನ್ ಕುನ್ನುಮ್ಮಲ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಅವರ ಭರ್ಜರಿ ಆರಂಭಿಕ ಜೊತೆಯಾಟ ಮತ್ತು ವಾಷಿಂಗ್ಟನ್ ಸುಂದರ್ ಅವರ 3 ವಿಕೆಟ್ಗಳ ಸಹಾಯದಿಂದ ದಕ್ಷಿಣ ವಲಯವು 2023ರ ದೇವಧರ್ ಟ್ರೋಫಿ ಮುಡಿಗೇರಿಸಿಕೊಂಡಿತು. ಪೂರ್ವ ವಲಯ 45 ರನ್‌ಗಳ ಸೋಲನುಭವಿಸಿತು. ಈ ಮೂಲಕ 9ನೇ ಬಾರಿಗೆ ದಕ್ಷಿಣ ವಲಯ ಪ್ರಶಸ್ತಿ ಗೆದ್ದುಕೊಂಡಿತು.
ಮ್ಯಾಚ್ ಹೇಗಿತ್ತು?: ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಕ್ಷಿಣ ವಲಯ 329 ರನ್‌ಗಳ ಬೃಹತ್ ಗುರಿ ನೀಡಿತು. ಇದನ್ನು ಬೆನ್ನತ್ತಲು ಶುರು ಮಾಡಿದ ಪೂರ್ವ ವಲಯ ಉತ್ತಮ ಆರಂಭ ಪಡೆಯಲಿಲ್ಲ. ವಾಸುಕಿ ಕೌಶಿಕ್ ಮತ್ತು ವಿದ್ವತ್ ಕಾವೇರಪ್ಪ ಅವರ ಮಧ್ಯಮ ವೇಗದ ಬೌಲಿಂಗ್ಗೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಅಭಿಮನ್ಯು ಈಶ್ವರನ್ (1), ವಿರಾಟ್ ಸಿಂಗ್ (6) ಮತ್ತು ಉತ್ಕರ್ಷ್ ಸಿಂಗ್ (4) ವಿಕೆಟ್ ಒಪ್ಪಿಸಿದರು. ಹೀಗೆ, ಪೂರ್ವ ವಲಯ 17 ರನ್ 3 ವಿಕೆಟ್ ಕಳೆದುಕೊಂಡಿತ್ತು.
-
Duleep Trophy 2023-2024 Winners 🏆
— BCCI Domestic (@BCCIdomestic) August 3, 2023 " class="align-text-top noRightClick twitterSection" data="
Deodhar Trophy 2023-24 Winners 🏆
Congratulations 𝗦𝗢𝗨𝗧𝗛 𝗭𝗢𝗡𝗘! 🙌#Final | #SZvEZ pic.twitter.com/KHLwPCa52L
">Duleep Trophy 2023-2024 Winners 🏆
— BCCI Domestic (@BCCIdomestic) August 3, 2023
Deodhar Trophy 2023-24 Winners 🏆
Congratulations 𝗦𝗢𝗨𝗧𝗛 𝗭𝗢𝗡𝗘! 🙌#Final | #SZvEZ pic.twitter.com/KHLwPCa52LDuleep Trophy 2023-2024 Winners 🏆
— BCCI Domestic (@BCCIdomestic) August 3, 2023
Deodhar Trophy 2023-24 Winners 🏆
Congratulations 𝗦𝗢𝗨𝗧𝗛 𝗭𝗢𝗡𝗘! 🙌#Final | #SZvEZ pic.twitter.com/KHLwPCa52L
ಆರಂಭಿಕರ ವೈಫಲ್ಯದ ನಂತರ ನಾಯಕ ಸೌರಭ್ ತಿವಾರಿ ಮತ್ತು ಸುದೀಪ್ ಕುಮಾರ್ ಘರಾಮಿ ಪೂರ್ವ ವಲಯಕ್ಕೆ ಆಸರೆಯ ಇನ್ನಿಂಗ್ಸ್ ಆಡಿದರು. ಈ ಜೋಡಿ 50 ರನ್ ಜೊತೆಯಾಟ ಮಾಡುತ್ತಿದ್ದಂತೆ ವಾಷಿಂಗ್ಟನ್ ಸುಂದರ್ 28 ರನ್ ಗಳಿಸಿ ಆಡುತ್ತಿದ್ದ ನಾಯಕ ತಿವಾರಿ ಮತ್ತು 41 ಗಳಿಸಿದ್ದ ಘರಾಮಿ ಅವರ ವಿಕೆಟ್ ಪಡೆದರು. 6ನೇ ವಿಕೆಟ್ಗೆ ಕುಮಾರ್ ಕುಶಾಗ್ರ ಮತ್ತು ರಿಯಾನ್ ಪರಾಗ್ ಜೋಡಿ ಒಂದಾಗಿ ಪೂರ್ವ ವಲಯಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಅಬ್ಬರಿಸಿ ಆಡಿದ ರಿಯಾನ್ ಪರಾಗ್ 5 ರನ್ನಿಂದ ದೇವಧರ್ ಟೋಫಿಯ ಮೂರನೇ ಶತಕದಿಂದ ವಂಚಿತರಾದರು. 65 ಬಾಲ್ನಲ್ಲಿ 5 ಸಿಕ್ಸ್ ಮತ್ತು 8 ಬೌಂಡರಿಯ ಸಹಾಯದಿಂದ ಅವರು 95 ರನ್ ಕಲೆಹಾಕಿದರು. ಶತಕದ ಸನಿಹದಲ್ಲಿದ್ದ ರಿಯಾನ್ ಅವರನ್ನೂ ವಾಷಿಂಗ್ಟನ್ ಸುಂದರ್ ಪೆವಿಲಿಯನ್ಗೆ ಕಳುಹಿಸಿದರು.
ಈ ಬೆನ್ನಲ್ಲೇ ಅರ್ಧಶತಕ ಗಳಿಸಿ ಆಡುತ್ತಿದ್ದ ಕುಶಾಗ್ರ ಸಹ ವಿಕೆಟ್ ಒಪ್ಪಿಸಿದರು. ಇಲ್ಲಿಂದ ಪೂರ್ವ ವಲಯಕ್ಕೆ ಗೆಲುವು ಕಠಿಣವಾಗತೊಡಗಿತು. ಕೊನೆಯ ಮೂರು ಬಾಲಂಗೋಚಿ ವಿಕೆಟ್‌ಗಳನ್ನು ದಕ್ಷಿಣ ವಲಯ ಸುಲಭವಾಗಿ ಕಬಳಿಸಿತು. ಇದರಿಂದಾಗಿ ಮಯಾಂಕ್ ತಂಡ 46.1 ಓವರ್ನಲ್ಲೇ ಪಂದ್ಯವನ್ನು 45 ರನ್‌ಗಳಿಂದ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಿತು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ದಕ್ಷಿಣ ವಲಯದ ಆರಂಭಿಕರಾದ ರೋಹನ್ ಕುನ್ನುಮ್ಮಲ್ ಮತ್ತು ನಾಯಕ ಮಯಾಂಕ್ 181 ರನ್‌ಗಳ ದೊಡ್ಡ ಜೊತೆಯಾಟ ಮಾಡಿದರು. ಆರಂಭಿಕ ರೋಹನ್ ಕುನ್ನುಮ್ಮಲ್ 107 ರನ್ ಗಸಿದರೆ, ಅಗರ್ವಾಲ್ 63 ರನ್ ಗಳಿಸಿದರು. ಮೂರನೇ ವಿಕೆಟ್ನಲ್ಲಿ ವಿಫಲತೆ ಕಂಡರೂ, ಎನ್. ಜಗದೀಶನ್ (54) ಅರ್ಧಶತಕ ಗಳಿಸಿದರೆ, ರೋಹಿತ್ ರಾಯುಡು ಮತ್ತು ಸಾಯ್ ಕಿಶೋರ್ 20 ಪ್ಲಸ್ ರನ್ ಕಲೆಹಾಕಿ ತಂಡಕ್ಕೆ ಸಹಾಯ ಮಾಡಿದರು. ದಕ್ಷಿಣ ವಲಯ ನಿಗದಿತ ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 328 ರನ್ ಗಳಿಸಿತ್ತು.
-
𝗧𝗵𝗮𝘁 𝗪𝗶𝗻𝗻𝗶𝗻𝗴 𝗙𝗲𝗲𝗹𝗶𝗻𝗴!
— BCCI Domestic (@BCCIdomestic) August 3, 2023 " class="align-text-top noRightClick twitterSection" data="
South Zone Captain @mayankcricket receives the prestigious #DeodharTrophy 🏆 from Mr. Devajit Saikia, Joint Secretary, BCCI 👏👏 #SZvEZ | #Final pic.twitter.com/57beWkFTzM
">𝗧𝗵𝗮𝘁 𝗪𝗶𝗻𝗻𝗶𝗻𝗴 𝗙𝗲𝗲𝗹𝗶𝗻𝗴!
— BCCI Domestic (@BCCIdomestic) August 3, 2023
South Zone Captain @mayankcricket receives the prestigious #DeodharTrophy 🏆 from Mr. Devajit Saikia, Joint Secretary, BCCI 👏👏 #SZvEZ | #Final pic.twitter.com/57beWkFTzM𝗧𝗵𝗮𝘁 𝗪𝗶𝗻𝗻𝗶𝗻𝗴 𝗙𝗲𝗲𝗹𝗶𝗻𝗴!
— BCCI Domestic (@BCCIdomestic) August 3, 2023
South Zone Captain @mayankcricket receives the prestigious #DeodharTrophy 🏆 from Mr. Devajit Saikia, Joint Secretary, BCCI 👏👏 #SZvEZ | #Final pic.twitter.com/57beWkFTzM
ದೇವಧರ್ ಟ್ರೋಫಿಯಲ್ಲಿ ಮಿಂಚಿದ ಪ್ರತಿಭೆಗಳು: ನಾಲ್ಕು ವರ್ಷದ ನಂತರ ನಡೆದ ಏಕದಿನ ಮಾದರಿಯ ದೇಶೀಯ ಟೂರ್ನಿಯಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.
ರಿಯಾನ್ ಪರಾಗ್ (ಪೂರ್ವ ವಲಯ): ಅಸ್ಸಾಂನ ಯುವ ಆಲ್‌ರೌಂಡರ್ ಪಂದ್ಯಾವಳಿಯನ್ನು ಪ್ರಮುಖ ರನ್ ಸ್ಕೋರರ್ ಆಗಿದ್ದಾರೆ. ಐದು ಪಂದ್ಯಗಳಲ್ಲಿ 88.50 ರ ಸರಾಸರಿಯಲ್ಲಿ 136 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟರ್ ಬೀಸಿ 354 ರನ್ ಗಳಿಸಿದ್ದಾರೆ. ಅವರು ಎರಡು ಶತಕ ಮತ್ತು ಎರಡು ಅರ್ಧಶತಕ ಗಳಿಸಿದ್ದಾರೆ. 131 ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಟೂರ್ನಿಯಲ್ಲಿ 11 ವಿಕೆಟ್ ಸಹ ಪಡೆದಿದ್ದಾರೆ. ಫೈನಲ್ನಲ್ಲಿ 95 ರನ್ ಗಳಿಸಿ ವಿಕೆಟ್ಕೊಟ್ಟರು.
ಮಯಾಂಕ್ ಅಗರ್ವಾಲ್ (ದಕ್ಷಿಣ ವಲಯ): ಪ್ರಶಸ್ತಿ ವಿಜೇತ ತಂಡದ ನಾಯಕ, ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಆರು ಪಂದ್ಯಗಳಲ್ಲಿ 68.50 ಸರಾಸರಿಯಲ್ಲಿ 341 ರನ್ ಗಳಿಸಿದ್ದಾರೆ. 98ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದ್ದು, ಟೂರ್ನಿಯಲ್ಲಿ ಒಟ್ಟು ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ.
ರೋಹನ್ ಕುನ್ನುಮ್ಮಲ್ (ದಕ್ಷಿಣ ವಲಯ): ಕೇರಳ ಬ್ಯಾಟರ್ ಆರು ಪಂದ್ಯಗಳಲ್ಲಿ 62.20 ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ದಕ್ಷಿಣ ವಲಯ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೇ ಟೂರ್ನಿಯಲ್ಲಿ ಎರಡು ಅರ್ಧಶತಕಗಳೊಂದಿಗೆ ಮೂರನೇ ಅತಿ ಹೆಚ್ಚು ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.
ವಿದ್ವತ್ ಕಾವೇರಪ್ಪ (ದಕ್ಷಿಣ ವಲಯ): ಕರ್ನಾಟಕದ ಯುವ ಪ್ರತಿಭೆ ಕಾವೇರಪ್ಪ ದೇಶೀ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಕೆಲ ಟೂರ್ನಿಗಳಂತೆ ದೇವಧರ್ ಟ್ರೋಫಿಯಲ್ಲೂ ಮಿಂಚಿದ್ದಾರೆ. ದಕ್ಷಿಣ ವಲಯದ ಪರ ಐದು ಪಂದ್ಯಗಳನ್ನು ಆಡಿದ ಅವರು 13 ವಿಕೆಟ್‌ಗಳನ್ನು ಪಡೆದಿದ್ದಾರೆ. 17 ರನ್ಗೆ 5 ವಿಕೆಟ್ ಕಬಳಿಸಿದ್ದರು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಶಮ್ಸ್ ಮುಲಾನಿ (ಪಶ್ಚಿಮ ವಲಯ): ಭಾರತ ತಂಡಕ್ಕೆ ಪಾದಾರ್ಪಣೆ ಮಾಡುವ ಭರವಸೆ ಇರುವ ಮುಂಬೈನ ಆಲ್‌ರೌಂಡರ್ ಐದು ಪಂದ್ಯಗಳಲ್ಲಿ 12 ವಿಕೆಟ್ ಪಡೆದು ಮಿಂಚಿದ್ದಾರೆ.
ಮಯಾಂಕ್ ಪ್ರಭು ಯಾದವ್ (ಉತ್ತರ ವಲಯ): ಈ ಡೆಲ್ಲಿ ಬೌಲರ್ ಐದು ಪಂದ್ಯಗಳಲ್ಲಿ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 63ಕ್ಕೆ 4 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಇದನ್ನೂ ಓದಿ: IPL 2024: ಆರ್ಸಿಬಿಗೆ ಮುಖ್ಯಕೋಚ್ ಆಗಿ ಬಂದ ಆಂಡಿ ಫ್ಲವರ್, ಮೈಕ್ ಹೆಸ್ಸನ್ ಜಾಗಕ್ಕೆ ಯಾರು?