ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಸ್ಟಾರ್ ಬ್ಯಾಟರ್ ರಾಸ್ ಟೇಲರ್ರನ್ನು ಕ್ಲೀನ್ ಬೌಲ್ಡ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಎಸೆತ ಯಾವುದೇ ಬೌಲರ್ನ ಕನಸಿನ ಎಸೆತವಾಗಿರುತ್ತದೆ ಎಂದು ಸಿರಾಜ್ ಹೇಳಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತ 325 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕಿವೀಸ್ಗೆ ಸಿರಾಜ್ ಮರ್ಮಾಘಾತ ನೀಡಿದರು. ತಂಡದ ಆರಂಭಿಕರಾದ ಟಾಮ್ ಲೇಥಮ್(10), ವಿಲ್ ಯಂಗ್(4) ಮತ್ತು ಅನುಭವಿ ರಾಸ್ ಟೇಲರ್(1) ವಿಕೆಟ್ ಪಡೆದು ಭಾರತಕ್ಕೆ ಭರ್ಜರಿ ಆರಂಭ ನೀಡಿದರು.
ಈ ಮೂರು ವಿಕೆಟ್ಗಳಲ್ಲಿ ರಾಸ್ ಟೇಲರ್ ಔಟಾದ ಎಸೆತ ಅದ್ಭುತವಾಗಿತ್ತು. ಕ್ರಿಕೆಟ್ನಲ್ಲಿ ಅಪಾರ ಅನುಭವವುಳ್ಳ ಟೇಲರ್ ಭಾರತೀಯ ವೇಗಿಯ ಸ್ವಿಂಗ್ ಎಸೆತವನ್ನು ಗುರುತಿಸುವಲ್ಲಿ ಸಂಪೂರ್ಣ ವಿಫಲರಾದರು. ಅದೊಂದು ನಿಜಕ್ಕೂ ಯಾವುದೇ ಬ್ಯಾಟರ್ ಕೂಡ ಎದುರಿಸಲಾಗದ ಎಸೆತವಾಗಿತ್ತು. ಈ ಕುರಿತು ಮಾತನಾಡಿದ ಸಿರಾಜ್, ಯಾವುದೇ ಬೌಲರ್ಗಾದರೂ ಕನಸಿನ ಎಸೆತವಾಗಿದೆ ಎಂದು ಹೇಳಿದ್ದಾರೆ.
-
pic.twitter.com/tG1fRbUC1r
— Ved Pathak 🇮🇳 (@VedPathak35) December 4, 2021 " class="align-text-top noRightClick twitterSection" data="
Mohammad Siraj wicket against Ross Taylor.
">pic.twitter.com/tG1fRbUC1r
— Ved Pathak 🇮🇳 (@VedPathak35) December 4, 2021
Mohammad Siraj wicket against Ross Taylor.pic.twitter.com/tG1fRbUC1r
— Ved Pathak 🇮🇳 (@VedPathak35) December 4, 2021
Mohammad Siraj wicket against Ross Taylor.
ನಾವು ಇನ್ಸ್ವಿಂಗ್ ಎಸೆತಕ್ಕಾಗಿ ಫೀಲ್ಡ್ ಸೆಟ್ಟಿಂಗ್ ಮಾಡಿದ್ದೆವು. ನಾನು ಪ್ಯಾಡ್ಸ್ಗೆ ಹೊಡೆಯುವ ಗುರಿಯಿತ್ತು. ಆದರೆ ಉತ್ತಮ ಲಯದಲ್ಲಿದ್ದರಿಂದ ಔಟ್ ಸ್ವಿಂಗ್ ಏಕೆ ಪ್ರಯೋಗಿಸಬಾರದು ಎಂದು ಭಾವಿಸಿದೆ. ಅದು ಯಶಸ್ವಿಯಾಯಿತು. ಟೇಲರ್ ಬೌಲ್ಡ್ ಆದ ಎಸೆತ ಯಾವುದೇ ಫಾಸ್ಟ್ ಬೌಲರ್ನ ಕನಸಿನ ಎಸೆತವಾಗಿರುತ್ತದೆ ಎಂದು ಸಿರಾಜ್ ಹೇಳಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯ ವೇಳೆ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದ ಸಿರಾಜ್ ಟೆಸ್ಟ್ ಸರಣಿಯ ವೇಳೆ ಹಿರಿಯ ಬೌಲರ್ಗಳಾದ ಉಮೇಶ್ ಯಾದವ್ ಮತ್ತು ಇಶಾಂತ್ ಎದುರು ಕಡೆಗಣಿಸಲ್ಪಟ್ಟರು. ಆದರೆ ಕಾನ್ಪುರ ಟೆಸ್ಟ್ನಲ್ಲಿ ವಿಕೆಟ್ ಪಡೆಯಲು ವಿಫಲರಾದ ಇಶಾಂತ್ ಬದಲಿಗೆ 2ನೇ ಟೆಸ್ಟ್ನಲ್ಲಿ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡರು.
ಇದನ್ನೂ ಓದಿ:ಕುಂಬ್ಳೆ ಸರ್ ಜೊತೆಗೆ ಈ ದಾಖಲೆ ಹಂಚಿಕೊಂಡಿದ್ದು ತುಂಬಾ ವಿಶೇಷವೆನ್ನಿಸುತ್ತಿದೆ: ಅಜಾಜ್ ಪಟೇಲ್