ETV Bharat / sports

125 ಎಸೆತದಲ್ಲಿ 331 ರನ್: 28 ಬೌಂಡರಿ, 20 ಸಿಕ್ಸರ್​-ಇದು 12 ವರ್ಷದ ಬಾಲಕ ಮೋಹಕ್ ಸಾಧನೆ​ - ಬ್ರಿಯಾನ್ ಲಾರಾ

ಮೋಹಕ್​ ಅವರು ಎಂಡುರೆನ್ಸ್​ ಕ್ರಿಕೆಟ್ ಅಕಾಡೆಮಿ ವಿರುದ್ಧ ನಡೆದ ಪಂದ್ಯದಲ್ಲಿ 125 ಎಸೆತಗಳಲ್ಲಿ 20 ಸಿಕ್ಸರ್ಸ್ ಮತ್ತು 28 ಫೋರ್​​ಗಳ ಸಹಿತ 331 ರನ್​ ಸಿಡಿಸಿದ್ದಾರೆ.

Delhi teenager Mohak smashes triple ton
125 ಎಸೆತಗಳಲ್ಲಿ 331 ರನ್​ ಸಿಡಿಸಿದ ಮೋಹಕ್
author img

By

Published : Nov 30, 2021, 7:45 PM IST

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್​ ಬಾಲ ಭವನ್ ಅಕಾಡೆಮಿಯ 12 ವರ್ಷದ ಬಾಲಕ ಮೋಹಕ್ ಕುಮಾರ್ 13 ವರ್ಷದೊಳಗಿನ ಡ್ರೀಮ್​ ಕಪ್​ ಚೇಸರ್ಸ್​ ಟೂರ್ನಮೆಂಟ್​ನಲ್ಲಿ ವೇಗದ ತ್ರಿಶತಕ ಸಿಡಿಸಿ ಕ್ರಿಕೆಟ್​ ಪ್ರಿಯರಲ್ಲಿ ಅಚ್ಚರಿ ಮೂಡಿಸಿದರು.

ಮೋಹಕ್​ ಎಂಡುರೆನ್ಸ್​ ಕ್ರಿಕೆಟ್ ಅಕಾಡೆಮಿ ವಿರುದ್ಧ ನಡೆದ ಪಂದ್ಯದಲ್ಲಿ 125 ಎಸೆತಗಳಲ್ಲಿ 20 ಸಿಕ್ಸರ್ಸ್ ಮತ್ತು 28 ಫೋರ್​​ಗಳ ಸಹಿತ ಒಟ್ಟು 331 ರನ್​ ಸಿಡಿಸಿದ್ದಾರೆ.

ಎಡಗೈ ಬ್ಯಾಟರ್​ ಆಗಿರುವ ಮೋಹಕ್​, ವೆಸ್ಟ್​ ಇಂಡೀಸ್​ ತಂಡದ ಮಾಜಿ ನಾಯಕ ಬ್ರಿಯಾನ್ ಲಾರಾ, ಕ್ರಿಸ್​ ಗೇಲ್​ ಮತ್ತು ಭಾರತ ತಂಡದ ವಿಕೆಟ್​ ಕೀಪರ್​ ರಿಷಭ್​ ಪಂತ್ ಅವರ ಅಪ್ಪಟ ಅಭಿಮಾನಿ. ಲಾರಾ ಅವರಂತೆ ಸ್ಕ್ವೇರ್​ ಡ್ರೈವ್​ ಮತ್ತು ಪಂತ್​ರಂತೆ ಸಿಕ್ಸರ್​ ಬಾರಿಸುವುದನ್ನು ಚಿಕ್ಕವಯಸ್ಸಿನಲ್ಲೇ ಕರಗತ ಮಾಡಿಕೊಂಡಿದ್ದಾರೆ.

ಐಎಎನ್‌ಎಸ್‌ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಅವರು, "ನಾನು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುವುದಕ್ಕೆ ಇಷ್ಟಪಡುತ್ತೇನೆ. ಆದರೆ, ಕೆಲವು ಪರಿಸ್ಥಿತಿಯಲ್ಲಿ ವಿಕೆಟ್​ ಕಾಪಾಡಿಕೊಳ್ಳಬೇಕಾದಾಗ ಸ್ಟ್ರೈಕ್ ರೊಟೇಶನ್ ಮಾಡುವುದಕ್ಕೆ ಬಯಸುತ್ತೇನೆ" ಎಂದು ತನ್ನ ಆಟದ ವೈಖರಿಯನ್ನು ವಿವರಿಸಿದರು.

ಮೋಹಕ್ ಅವರ ಈ ಆಕ್ರಮಣಕಾರಿ ಆಟ ನೋಡಿದ ತಕ್ಷಣ ದೆಹಲಿ ಅಂಡರ್ 14 ತಂಡಕ್ಕೆ ಆಯ್ಕೆ ಮಾಡಲು ಮೊದಲ ಆದ್ಯತೆಯ ಆಟಗಾರನಾಗಿ ಗುರುತಿಸಲಾಗಿದೆ. ಡಿಸೆಂಬರ್​ನಲ್ಲಿ ನಡೆಯುವ ಟ್ರಯಲ್ಸ್​ಗೆ ಈಗಾಗಲೇ ಮೋಹಕ್ ತಯಾರಿ ನಡೆಸುತ್ತಿದ್ದಾರೆ.

ಮೋಹಕ್​ ಬ್ಯಾಟ್​ ಹಿಡಿದುಕೊಳ್ಳಲು ಬಾರದ ದಿನಗಳಿಂದಲೂ ಕೋಚ್​ ಆಗಿರುವ ನವನೀತ್ ಕುಮಾರ್​ ಮಿಶ್ರಾ ತಮ್ಮ ಶಿಷ್ಯನ ಸಾಧನೆಯನ್ನು ಪ್ರಶಂಸಿಸಿದರು. ಮೋಹಕ್​ 40-50 ರನ್​ಗಳಿಸಿದರೆ ತೃಪ್ತನಾಗುವುದಿಲ್ಲ ಎಂದು ಅವರು ಹೇಳುತ್ತಾರೆ.

"ಮೋಹಕ್ ಪಂದ್ಯದ ಅಂತ್ಯದವರೆಗೂ ಆಡುವುದಕ್ಕೆ ಬಯಸುತ್ತಾನೆ. ಅವನಂತಹ ಆಕ್ರಮಣಕಾರಿ ಬ್ಯಾಟರ್ ಇನ್ನಿಂಗ್ಸ್​ ಅಂತ್ಯದವರೆಗೆ ಬ್ಯಾಟ್ ಮಾಡಿದರೆ ತಂಡ ಖಂಡಿತಾ ಬೃಹತ್ ಮೊತ್ತ ದಾಖಲಿಸುತ್ತದೆ. ಈತ ಇದೇ ರೀತಿಯಲ್ಲಿ ಆಡುವುದನ್ನು ಮುಂದುವರಿಸಿದರೆ ಕ್ರಿಕೆಟ್​ ಜಗತ್ತಿನಲ್ಲಿ ದೊಡ್ಡ ಗೌರವ ಸಂಪಾದಿಸಲಿದ್ದಾನೆ" ಎಂದು ಮಿಶ್ರಾ ಭವಿಷ್ಯ ನುಡಿದರು.

ಈ ಬಾಲಕ​ನ ತಂದೆ ಮನೀಶ್​ ಕೂಡ ತಮ್ಮ ಮಗನ ಸಾಧನೆ ನೋಡಿ ಸಂತೋಷಪಟ್ಟಿದ್ದು, ಮಗನನ್ನು ದೊಡ್ಡ ಕ್ರಿಕೆಟರ್ ಆಗಿ ನೋಡುವುದಕ್ಕೆ ಬಯಸುತ್ತೇನೆ. ಅದಕ್ಕೆ ಅಗತ್ಯವಾದ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

"ಮೋಹಕ್ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರಂತೆಯೇ ಬ್ಯಾಟಿಂಗ್ ಮಾಡುತ್ತಾರೆ. ಪಂತ್​ರಂತೆಯೇ ಎಡಗೈ ಬ್ಯಾಟರ್ ಮತ್ತು ಭಯವಿಲ್ಲದೇ ಆಡಬಲ್ಲ. ಅವನು ತುಂಬಾ ತಾಳ್ಮೆ ಹೊಂದಿದ್ದಾನೆ, ಆದರೆ ಬ್ಯಾಟಿಂಗ್ ಮಾತ್ರ ತುಂಬಾ ಆಕ್ರಮಣಕಾರಿಯಾಗಿರುತ್ತದೆ. ಮೋಹಕ್​ಗೆ ಉತ್ತಮ ಬೆಂಬಲ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಅಕಾಡೆಮಿ ಸಿಇಒಗೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ" ಎಂದು ಮನೀಶ್ ಕುಮಾರ್ ಹೇಳಿದರು.

ಈ ಪಂದ್ಯದಲ್ಲಿ ಮೋಹಕ್​ ಅವರ ಬಾಲ ಭವನ್ ಅಕಾಡೆಮಿ 40 ಓವರ್​ಗಳಲ್ಲಿ 576 ರನ್​ ಸಿಡಿಸಿದರೆ, ಇದಕ್ಕುತ್ತರವಾಗಿ ಎಂಡುರೆನ್ಸ್​ ಕ್ರಿಕೆಟ್ ಅಕಾಡೆಮಿ 17.1 ಓವರ್​ಗಳಲ್ಲಿ 153 ರನ್​ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ: IPL Retention : ಮ್ಯಾಕ್ಸ್​ವೆಲ್, ಕೊಹ್ಲಿ ನಂತರ ಸಿರಾಜ್​ರನ್ನು ಉಳಿಸಿಕೊಳ್ಳಲು RCB ನಿರ್ಧಾ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.