ETV Bharat / sports

ವಿವಾಹ ವಿಚ್ಚೇದನ ಪಡೆದ ಕ್ರಿಕೆಟಿಗ ಶಿಖರ್​ ಧವನ್​; ಮಾನಸಿಕ ಹಿಂಸೆಯಡಿ ಕೋರ್ಟ್‌ ಒಪ್ಪಿಗೆ - ವಿವಾಹ ವಿಚ್ಚೇದನ ಪಡೆದ ಕ್ರಿಕೆಟಿಗ ಶಿಖರ್​ ಧವನ್

ಕ್ರಿಕೆಟಿಗ ಶಿಖರ್​ ಧವನ್​ಗೆ ದೆಹಲಿ ಕೌಟುಂಬಿಕ ನ್ಯಾಯಾಲಯ ವಿವಾಹ ವಿಚ್ಚೇದನ ನೀಡಿದೆ.

ವಿವಾಹ ವಿಚ್ಚೇದನ ಪಡೆದ ಕ್ರಿಕೆಟಿಗ ಶಿಖರ್​ ಧವನ್

author img

By ETV Bharat Karnataka Team

Published : Oct 4, 2023, 11:01 PM IST

ನವದೆಹಲಿ: ದೆಹಲಿಯ ಕೌಟುಂಬಿಕ ನ್ಯಾಯಾಲಯವು ಭಾರತದ ಕ್ರಿಕೆಟಿಗ ಶಿಖರ್​ ಧವನ್​ಗೆ ಪತ್ನಿ ಅಯೆಶಾ ಮುಖರ್ಜಿಯಿಂದ ವಿಚ್ಛೇದನ ನೀಡಿದೆ. ಪತ್ನಿಯಿಂದ ಧವನ್‌ ಮಾನಸಿಕ ಹಿಂಸೆಗೆ ಗುರಿಯಾಗಿದ್ದಾನೆ ಎಂದು ಕೋರ್ಟ್​ ಅಭಿಪ್ರಾಯಪಟ್ಟು ಬುಧವಾರ ವಿಚ್ಛೇದನ ಮಂಜೂರು ಮಾಡಿದೆ.

ನ್ಯಾಯಾಧೀಶ ಹರೀಶ್ ಕುಮಾರ್ ಅವರು ಶಿಖರ್​ ಧವನ್​ ಅವರ ವಿವಾಹ ವಿಚ್ಚೇದನ ಅರ್ಜಿಯನ್ನು ಇತ್ಯರ್ಥ ಪಡಿಸಿದ್ದು, ಪತ್ನಿ ಆಯೇಷಾ ವಿರುದ್ಧ ಕ್ರಿಕೆಟಿಗ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯಲ್ಲಿ ಮಾಡಿದ ಎಲ್ಲಾ ಆರೋಪಗಳನ್ನು ಕೋರ್ಟ್​ ಪರಿಗಣಿಸಿತು. ಆಯೇಷಾ ಮುಖರ್ಜಿಯ ಮೇಲೆ ಧವನ್‌ ಹೊರಿಸಿದ್ದ ಆರೋಪವನ್ನು ಪುರಸ್ಕರಿಸಿತು. ಈ ವೇಳೆ ಆಯೇಷಾ ಅವರು ತನ್ನನ್ನು ತಾನು ಸಮರ್ಥಿಸಿಕೊಳ್ಳಲು ವಿಫಲರಾದರು.

ಕ್ರಿಕೆಟಿಗನ ಏಕೈಕ ಪುತ್ರನಿಂದ ವರ್ಷಗಟ್ಟಲೆ ಪ್ರತ್ಯೇಕವಾಗಿ ವಾಸಿಸುವಂತೆ ಒತ್ತಾಯಿಸಿದ್ದು, ಧವನ್‌ರನ್ನು ಮಾನಸಿಕ ಯಾತನೆಗೆ ಒಳಪಡಿಸಿದೆ. ಇದು ತಪ್ಪು. ಹೀಗಾಗಿ ಇಬ್ಬರ ವಿವಾಹ ವಿಚ್ಚೇದನ ಅಂಗೀಕರಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಪುತ್ರನೊಂದಿಗೆ ಸಂಪರ್ಕಕ್ಕೆ ಅವಕಾಶ: ಪುತ್ರನ ವಿಚಾರವಾಗಿಯೂ ಅಭಿಪ್ರಾಯ ತಿಳಿಸಿರುವ ಕೋರ್ಟ್​, ದಂಪತಿಯ ಮಗನನ್ನು ಭೇಟಿ ಮಾಡಲು ಶಿಖರ್​ ಅವಕಾಶ ಹೊಂದಿದ್ದಾನೆ. ಮಗು ಯಾರಲ್ಲಿ ಬೆಳೆಯಬೇಕು ಎಂಬ ಶಾಶ್ವತ ಆದೇಶವನ್ನು ನೀಡಲು ನಿರಾಕರಿಸಿದ ನ್ಯಾಯಾಲಯವು, ಧವನ್‌ಗೆ ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ನಿರ್ದಿಷ್ಟ ಅವಧಿಗೆ ತನ್ನ ಮಗನನ್ನು ಭೇಟಿ ಮಾಡಲು ಮತ್ತು ವೀಡಿಯೊ ಕರೆ ಮೂಲಕ ಅವರೊಂದಿಗೆ ಚಾಟ್ ಮಾಡಲು ಭೇಟಿ ನೀಡುವ ಹಕ್ಕುಗಳನ್ನೂ ನೀಡಿತು.

ಒಂದು ವರ್ಷದಲ್ಲಿ ಕನಿಷ್ಠ ಅರ್ಧದಷ್ಟು ಶಾಲಾ ರಜೆಯ ಅವಧಿಯವರೆಗೆ ಧವನ್ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ತಂಗುವಿಕೆ ಸೇರಿದಂತೆ ಭೇಟಿಯ ಉದ್ದೇಶಕ್ಕಾಗಿ ಮಗುವನ್ನು ಭಾರತಕ್ಕೆ ಕರೆತರುವಂತೆ ನ್ಯಾಯಾಲಯವು ಆಯೇಶಾ ಅವರಿಗೆ ಸೂಚಿಸಿದೆ. ಅರ್ಜಿದಾರರು ಪ್ರತಿಷ್ಠಿತ ಅಂತರಾಷ್ಟ್ರೀಯ ಕ್ರಿಕೆಟಿಗರಾಗಿರುವುದರಿಂದ ಮತ್ತು ರಾಷ್ಟ್ರದ ಹೆಮ್ಮೆಯಾಗಿರುವುದರಿಂದ, ಮಗನ ಭೇಟಿ ಮತ್ತು ಪಾಲನೆಯ ಸಮಸ್ಯೆಯನ್ನು ಎದುರಿಸಿದಲ್ಲಿ ಕೇಂದ್ರ ಸರ್ಕಾರವನ್ನು ಅವರು ಸಂಪರ್ಕಿಸಿದರೆ ಸಹಾಯ ಮಾಡಲು ಕೋರ್ಟ್‌ ತಿಳಿಸಿದೆ.

ಧವನ್‌ ತಮ್ಮ ಅರ್ಜಿಯಲ್ಲಿ ಪತ್ನಿ ಆರಂಭದಲ್ಲಿ ಅವರೊಂದಿಗೆ ಭಾರತದಲ್ಲಿ ವಾಸ ಮಾಡುವುದಾಗಿ ಹೇಳಿದ್ದರು. ಆದರೆ, ಮೊದಲ ಪತಿಯಿಂದ ಇಬ್ಬರು ಹೆಣ್ಣುಮಕ್ಕಳನ್ನು ಹೊಂದಿರುವ ಅಯೇಷಾ ಮುಖರ್ಜಿ ತನ್ನ ಮಾಜಿ ಪತಿಗೂ ಈ ವಿಚಾರದಲ್ಲಿ ಕೋರ್ಟ್‌ನ ಬದ್ಧತೆಯಲ್ಲಿದ್ದಾಳೆ. ಇದರಿಂದಾಗಿ ಆಕೆ ಭಾರತದಲ್ಲಿ ವಾಸ ಮಾಡಲು ಸಾಧ್ಯವಾಗಲಿಲ್ಲ. ಮಾಜಿ ಪತಿಗೆ ಬದ್ಧಳಾಗಿರುವ ಆಯೇಷಾ ಮುಖರ್ಜಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ತನ್ನೊಂದಿಗೆ ಹೊಂದಿರುವ ಪುತ್ರ ಜೋರಾವರ್‌ನೊಂದಿಗೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾಳೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಕಳೆದ ಮೂರು ಆವೃತ್ತಿಯಲ್ಲೂ ಆತಿಥ್ಯ ವಹಿಸಿದ ದೇಶಗಳೇ ಟ್ರೋಫಿ ಗೆದ್ದಿವೆ: ರೋಹಿತ್​ ಶರ್ಮಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.