ಮುಂಬೈ: ಡಬಲ್ ರೌಂಡ್ ರಾಬಿನ್ ಸುತ್ತಿನ ಮೊದಲ ಸುತ್ತು ಮುಕ್ತಾಯವಾಗಲಿದೆ. ವುಮೆನ್ಸ್ ಪ್ರಿಮಿಯರ್ ಲೀಗ್ನ 10 ಪಂದ್ಯಗಳು ಮುಕ್ತಾಯವಾಗಿದೆ. 11ನೇ ಪಂದ್ಯದಲ್ಲಿ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾದ ಆರ್‌ಸಿಬಿ ಮತ್ತು ಡೆಲ್ಲಿ ಇಂದು ಮತ್ತೆ ಸೆಣಸಾಡಲಿದೆ. ಬೆಂಗಳೂರು ಮೊದಲ ಗೆಲುವಿನ ಎದುರು ನೋಡುತ್ತಿದೆ. ಟಾಸ್ ಗೆದ್ದ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ತಂಡ: ಸ್ಮೃತಿ ಮಂಧಾನ(ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್(ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್
-
🚨 Toss Update 🚨@DelhiCapitals win the toss and elect to bowl first against @RCBTweets.
— Women's Premier League (WPL) (@wplt20) March 13, 2023 " class="align-text-top noRightClick twitterSection" data="
Follow the match ▶️ https://t.co/E13BL45tYr #TATAWPL | #DCvRCB pic.twitter.com/2K5Y80czLw
">🚨 Toss Update 🚨@DelhiCapitals win the toss and elect to bowl first against @RCBTweets.
— Women's Premier League (WPL) (@wplt20) March 13, 2023
Follow the match ▶️ https://t.co/E13BL45tYr #TATAWPL | #DCvRCB pic.twitter.com/2K5Y80czLw🚨 Toss Update 🚨@DelhiCapitals win the toss and elect to bowl first against @RCBTweets.
— Women's Premier League (WPL) (@wplt20) March 13, 2023
Follow the match ▶️ https://t.co/E13BL45tYr #TATAWPL | #DCvRCB pic.twitter.com/2K5Y80czLw
ಡೆಲ್ಲಿ ಕ್ಯಾಪಿಟಲ್ಸ್ ಆಡುವ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ತಾರಾ ನಾರ್ರಿಸ್
ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇಂದು ಎರಡನೇ ಬಾರಿಗೆ ಮೆಗ್ ಲ್ಯಾನಿಂಗ್ ಅವರ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ಸೆಣಸಲಿದೆ. ಇದು ಆರ್‌ಸಿಬಿಯ ಐದನೇ ಪಂದ್ಯವಾಗಿದ್ದು, ಸ್ಮೃತಿ ಮಂಧಾನ ತಂಡ ಆಡಿದ ನಾಲ್ಕು ಪಂದ್ಯಗಳಲ್ಲಿ ಸೋತಿದೆ. ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದರಲ್ಲಿ ಸೋತಿದೆ. ಇವರಿಬ್ಬರ ನಡುವಿನ ಮೊದಲ ಪಂದ್ಯ ಮಾರ್ಚ್ 5 ರಂದು ನಡೆದಿದ್ದು, ಇದರಲ್ಲಿ ಡೆಲ್ಲಿ ಕ್ಯಾಪಿಟ್ಸಲ್ಸ್ 60 ರನ್‌ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್ನು ಸೋಲಿಸಿತ್ತು.
ಮಾರ್ಚ್ 6 ರಂದು ಆರ್‌ಸಿಬಿ ತನ್ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್‌ಗಳಿಂದ ಸೋಲನುಭವಿಸಿತ್ತು. ಮಾರ್ಚ್ 8 ರಂದು ಗುಜರಾತ್ ಜೈಂಟ್ಸ್ ವಿರುದ್ಧ ರೋಚಕ ಪಂದ್ಯದಲ್ಲಿ 11 ರನ್‌ಗಳಿಂದ ರಾಯಲ್ಸ್ ತಂಡ ಸೋತು ಹ್ಯಾಟ್ರಿಕ್ ಸೋಲು ಕಂಡಿತ್ತು. ಮಾರ್ಚ್ 10 ರಂದು ಸ್ಮೃತಿ ತಂಡವನ್ನು ಯುಪಿ ವಾರಿಯರ್ಸ್ 10 ವಿಕೆಟ್‌ಗಳಿಂದ ಸೋಲಿಸಿತು.
ಒಂದರ ಹಿಂದೆ ಒಂದರಂತೆ ಸೋಲು ಎದುರಿಸುತ್ತಿರುವ ರಾಯಲ್ಸ್ ತಂಡದ ಆಟಗಾರರು ಈ ಸೋಲುಗಳಿಂದ ಚೇತರಿಸಿಕೊಂಡು ಮತ್ತೆ ಗೆಲುವಿಗಾಗಿ ಮೈದಾನಕ್ಕೆ ಇಳಿಯಲಿದ್ದಾರೆ. ಕನಿಕಾ ಅಹುಜಾ, ಸೋಫಿ ಡಿವೈನ್, ರಿಚಾ ಘೋಷ್ ಅವರಂತಹ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಆರ್‌ಸಿಬಿ ಹೊಂದಿದೆ. ರೇಣುಕಾ ಸಿಂಗ್, ಪ್ರೀತಿ ಬೋಸ್ ಮತ್ತು ಮೇಗನ್ ಶಟ್ ಅವರಂತಹ ಬೌಲರ್‌ಗಳೂ ಇದ್ದಾರೆ. ಆದರೆ ಇಷ್ಟೆಲ್ಲ ಆದರೂ ಆರ್‌ಸಿಬಿಗೆ ಇನ್ನೂ ಜಯ ಸಿಕ್ಕಿಲ್ಲ.
ಮೆಗ್ ಲ್ಯಾನಿಂಗ್ ತಂಡವು ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿದೆ. ಮೆಗ್ ಇತ್ತೀಚೆಗೆ ಆಸ್ಟ್ರೇಲಿಯಾವನ್ನು ಮಹಿಳಾ ಟಿ20 ವಿಶ್ವಕಪ್‌ನ ಚಾಂಪಿಯನ್ ಆಗಿ ಮಾಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ ಒಂದು ಪಂದ್ಯದಲ್ಲಿ ಸೋಲು ಕಂಡಿದೆ. ಹರ್ಮನ್‌ಪ್ರೀತ್ ನಾಯಕತ್ವದ ಮುಂಬೈ ಇಂಡಿಯನ್ಸ್ ಮಾರ್ಚ್ 9 ರಂದು ಡೆಲ್ಲಿಯನ್ನು 8 ವಿಕೆಟ್‌ಗಳಿಂದ ಸೋಲಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ನ ಶೆಫಾಲಿ ವರ್ಮಾ ಲೀಗ್ನಲ್ಲಿ ಎರಡನೇ ಹೆಚ್ಚು ರನ್ ಗಳಿಸಿ ಆಟಗಾರ್ತಿಯಾಗಿದ್ದಾರೆ.
ಇದನ್ನೂ ಓದಿ: UPW vs MI WPL 2023: ಜಯದ ನಾಗಾಲೋಟ ಮುಂದುವರಿಸಿದ ಮುಂಬೈ ಇಂಡಿಯನ್ಸ್