ETV Bharat / sports

2022ರ ಐಪಿಎಲ್​ಗೆ ನೂತನ ಜರ್ಸಿ ಬಿಡುಗಡೆ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ - ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್

ಡೆಲ್ಲಿ ಕ್ಯಾಪಿಟಲ್ಸ್​ ನೀಡಿರುವ ಹೇಳಿಕೆಯ ಪ್ರಕಾರ, ಈ ಜರ್ಸಿಯನ್ನು ಅಂತಿಮಗೊಳಿಸುವ ಮೊದಲು ತವರು ಕ್ರೀಡಾಂಗಣವಾಗಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಫ್ರಾಂಚೈಸಿ ಕೆಲವು ಜರ್ಸಿಗಳನ್ನು ತಮ್ಮ ಅಭಿಮಾನಿಗಳಿಗೆ ನೀಡಿ, ಒಂದು ಆಯ್ಕೆ ಮಾಡುವಂತೆ ಕೋರಿಕೊಂಡಿತ್ತು ಎಂದು ತಿಳಿದುಬಂದಿದೆ.

Delhi Capitals unveils new jersey ahead of 2022 IPL season
ಡೆಲ್ಲಿ ಕ್ಯಾಪಿಟಲ್ಸ್ ನೂತನ ಜರ್ಸಿ
author img

By

Published : Mar 12, 2022, 4:15 PM IST

ನವದೆಹಲಿ: ಕಳೆದ ಮೂರು ಆವೃತ್ತಿಗಳಿಂದ ಸ್ಥಿರ ಪ್ರದರ್ಶನ ತೋರುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​​ಗಾಗಿ ನೂತನ ಜರ್ಸಿಯನ್ನು ಶನಿವಾರ ಬಿಡುಗಡೆ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್​ ನೀಡಿರುವ ಹೇಳಿಕೆಯ ಪ್ರಕಾರ, ತವರು ಕ್ರೀಡಾಂಗಣವಾಗಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಫ್ರಾಂಚೈಸಿ ಕೆಲವು ಜರ್ಸಿಗಳನ್ನು ತಮ್ಮ ಅಭಿಮಾನಿಗಳಿಗೆ ನೀಡಿ, ಒಂದು ಆಯ್ಕೆ ಮಾಡುವಂತೆ ಕೋರಿಕೊಂಡಿತ್ತು ಎಂದು ತಿಳಿದುಬಂದಿದೆ. ನಗರ ಕೆಲವು ಮಕ್ಕಳಿಗೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಕ್ರಿಕೆಟ್ ಕ್ಲಬ್​ಗಳಿಗೂ ಕೆಲವು ಜರ್ಸಿಗಳನ್ನು ನೀಡಿ ನೆಚ್ಚಿನದನ್ನು ಆಯ್ಕೆ ಮಾಡುವ ಟಾಸ್ಕ್​ ನೀಡಿತ್ತು ಎಂದು ತಿಳಿದುಬಂದಿದೆ.

ಇದು ಹೊಸ ಆವೃತ್ತಿಯ ಐಪಿಎಲ್​ ಆಗಿದ್ದು, ನಾವು ನೂತನ ಬ್ರ್ಯಾಂಡ್​ನ ಜರ್ಸಿಯಲ್ಲಿ ನಮ್ಮ ಆಟಗಾರರನ್ನು ನೋಡುವುದಕ್ಕೆ ಕಾಯಲಾಗುತ್ತಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಹಂಗಾಮಿ ಸಿಇಒ ವಿನೋದ್ ಬಿಶ್ತ್​ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ಮಾರ್ಚ್​ 27 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಬ್ರಬೋರ್ನ್​ ಸ್ಟೇಡಿಯಂನಲ್ಲಿ ತನ್ನ ಮೊದಲ ಪಂದ್ಯವನ್ನಾಡಲಿದೆ. ಮಾರ್ಚ್​ 26ರಂದು ಕೆಕೆಆರ್ ಮತ್ತು ಸಿಎಸ್​ಕೆ ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ.

ಡೆಲ್ಲಿ ತಂಡ ಈ ಬಾರಿ ಹರಾಜಿನಲ್ಲಿ ಡೇವಿಡ್ ವಾರ್ನರ್​, ಮಿಚೆಲ್ ಮಾರ್ಷ್​ ಸೇರಿದಂತೆ ಕೆಲವು ಸ್ಟಾರ್​ ಆಟಗಾರರನ್ನು ಖರೀದಿಸಿದೆ. ಬಲಿಷ್ಠ ತಂಡಗಳಲ್ಲಿ ಒಂದಾಗಿರುವ ಡೆಲ್ಲಿ ಈ ಬಾರಿ ಐಪಿಎಲ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:ಕೆಕೆಆರ್ ಸೇರಿದ ಸ್ಫೋಟಕ ಬ್ಯಾಟರ್​: ಅಲೆಕ್ಸ್​ ಹೇಲ್ಸ್​ ಸ್ಥಾನಕ್ಕೆ ಆ್ಯರೋನ್​​ ಫಿಂಚ್​ ಆಯ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.