ETV Bharat / sports

ಕೋವಿಡ್​ ಲಸಿಕೆಯ ಮೊದಲ ಡೋಸ್ ಪಡೆದ ದೀಪಕ್ ಚಹರ್, ಸಿದ್ಧಾರ್ಥ್ ಕೌಲ್​ - ಕೋವಿಡ್​ 19 ಲಸಿಕೆ ಸ್ವೀಕರಿಸಿದ ಸಿದ್ಧಾರ್ಥ್​

ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್​ನಲ್ಲಿ ಚಹರ್​ ಚೆನ್ನೈ ಸೂಪರ್ ಕಿಂಗ್ಸ್ ಪರ ಮತ್ತು ಕೌಲ್ ಸನ್​ರೈಸರ್ಸ್​ ಹೈದರಾಬಾದ್ ಪರ ಆಡಿದ್ದರು.

ಕೋವಿಡ್​ ಲಿಸಿಕೆಯ ಮೊದಲ ಡೋಸ್ ಪಡೆದ ದೀಪಕ್ ಚಹರ್, ಸಿದ್ಧಾರ್ಥ್ ಕೌಲ್​

author img

By

Published : May 11, 2021, 3:54 PM IST

ಮುಂಬೈ: ಭಾರತ ತಂಡದ ವೇಗದ ಬೌಲರ್​ಗಳಾದ ಸಿದ್ಧಾರ್ಥ್ ಕೌಲ್ ಮತ್ತು ದೀಪಕ್ ಚಹರ್ ಕೋವಿಡ್​ ಲಸಿಕೆಯ ಮೊದಲ ಡೋಸ್​ ಪಡೆದುಕೊಂಡಿದ್ದು, ಆದಷ್ಟು ಬೇಗ ನೀವೂ ಪಡೆದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇಂದು ಕೋವಿಡ್​ ಲಸಿಕೆಯ ನನ್ನ ಮೊದಲ ಡೋಸ್​ ಪಡೆದುಕೊಂಡಿದ್ದೇನೆ. ನೀವೂ ಆದಷ್ಟು ಬೇಗ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಆರೋಗ್ಯ ಕಾಪಾಡುವುದಕ್ಕೆ ಶ್ರಮಿಸುತ್ತಿರುವ ಪೊಲೀಸ್​, ವೈದ್ಯರು ಮತ್ತು ಎಲ್ಲಾ ಮುಂಚೂಣಿ ಸೇವಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಈ ಬಿಕ್ಕಟ್ಟಿನಿಂದ ಶೀಘ್ರದಲ್ಲೇ ಸುಧಾರಿಸುತ್ತೇವೆಂದು ಭರವಸೆಯಿದೆ ಎಂದು ದೀಪಕ್ ಚಹರ್ ಟ್ವೀಟ್ ಮಾಡಿದ್ದಾರೆ.

  • Got my first dose of COVID vaccine 💉 today. I urge you all to get vaccinated as soon as possible. And a big thanks to our police, doctors and all the frontline staff for taking care of us. I hope we recover soon from this COVID pandemic 🙏🏼#COVID19Vaccination #CoronaVaccine pic.twitter.com/84pjS2UWh2

    — Deepak chahar 🇮🇳 (@deepak_chahar9) May 10, 2021 " class="align-text-top noRightClick twitterSection" data=" ">

ಪಂಜಾಬ್​ನ ಸಿದ್ಧಾರ್ಥ್ ಕೌಲ್ ಕೂಡ ವ್ಯಾಕ್ಸಿನ್​ ಪಡೆದುಕೊಂಡಿದ್ದು, ನಾವು ಕೊರೊನಾ ವಿರುದ್ಧ ಗೆಲ್ಲಲು ಲಸಿಕೆ ಪಡೆಯುವುದೊಂದೇ ಮಾರ್ಗ. ನಾನು ನನ್ನ ಮೊದಲ ಡೋಸ್ ಪಡೆದುಕೊಂಡಿದ್ದೇನೆ. ನೀವು ಕೂಡ ಬೇಗ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ನಮಗೆ ನಮ್ಮ ಸಾಮಾನ್ಯ ಜೀವನ ಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.