ವಡೋದರಾ: ಕಳೆದ ಅನೇಕ ವರ್ಷಗಳಿಂದ ಬರೋಡಾ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಆಲ್ರೌಂಡರ್ ದೀಪಕ್ ಹೂಡಾ ಇದೀಗ ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ. ಕಳೆದ ಜನವರಿ ತಿಂಗಳಲ್ಲಿ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿ ವೇಳೆ ಬರೋಡಾ ತಂಡದ ಕ್ಯಾಪ್ಟನ್ ಕೃನಾಲ್ ಪಾಂಡ್ಯಾ ಹಾಗೂ ದೀಪಕ್ ಹೂಡಾ ನಡುವೆ ಜಗಳವಾಗಿತ್ತು. ಹೀಗಾಗಿ ಟೂರ್ನಿಯಿಂದ ಅವರು ಹೊರಗುಳಿದಿದ್ದರು.
ಇದೇ ವಿಚಾರಕ್ಕಾಗಿ ದೀಪಕ್ ಹೂಡಾ ಅವರನ್ನ ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಅಮಾನತುಗೊಳಿಸಿ ಆದೇಶ ಹೊರಡಿಸಿತು. ಈಗಾಗಲೇ ಅವರಿಗೆ ಬರೋಡಾ ಕ್ರಿಕೆಟ್ ಸಂಸ್ಥೆ ನಿರಾಕ್ಷೇಪಣ ಪತ್ರ ನೀಡಿದ್ದು, ಇದರ ಬೆನ್ನಲ್ಲೇ ರಾಜಸ್ಥಾನ ತಂಡ ಸೇರಿಕೊಂಡಿದ್ದಾರೆ.
ಇದನ್ನೂ ಓದಿರಿ: ಮುಂದಿನ ಆರು ತಿಂಗಳಲ್ಲಿ ಮಾಧ್ಯಮದ ಮೇಲೆ ನಿಯಂತ್ರಣ: ಅಣ್ಣಾಮಲೈ ವಿವಾದಿತ ಹೇಳಿಕೆ
2014ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಹೂಡಾ 46 ಪಂದ್ಯಗಳನ್ನಾಡಿದ್ದು, 2908 ರನ್ಗಳಿಕೆ ಮಾಡಿದ್ದಾರೆ. ಇದರಲ್ಲಿ 9 ಶತಕ ಹಾಗೂ 15 ಅರ್ಧಶತಕಗಳಿವೆ. ಜೊತೆಗೆ 20 ವಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೂಡಾ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ.
ಬೇಸರ ವ್ಯಕ್ತಪಡಿಸಿರುವ ಇರ್ಪಾನ್ ಪಠಾಣ್
-
How many cricket association will loose out on a player who is in the Indian team probables list? Deepak Hooda leaving baroda cricket is a huge loss. He could have easily given his services for another ten years as he is still young. As a Barodian It’s utterly disappointing!
— Irfan Pathan (@IrfanPathan) July 15, 2021 " class="align-text-top noRightClick twitterSection" data="
">How many cricket association will loose out on a player who is in the Indian team probables list? Deepak Hooda leaving baroda cricket is a huge loss. He could have easily given his services for another ten years as he is still young. As a Barodian It’s utterly disappointing!
— Irfan Pathan (@IrfanPathan) July 15, 2021How many cricket association will loose out on a player who is in the Indian team probables list? Deepak Hooda leaving baroda cricket is a huge loss. He could have easily given his services for another ten years as he is still young. As a Barodian It’s utterly disappointing!
— Irfan Pathan (@IrfanPathan) July 15, 2021
ಟೀಂ ಇಂಡಿಯಾ ಪರ ಆಡುವ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿರುವ ಓರ್ವ ಆಟಗಾರರನ್ನ ಯಾವ ಕ್ರಿಕೆಟ್ ಸಂಸ್ಥೆ ಕೂಡ ಕಳೆದುಕೊಳ್ಳಲು ಇಷ್ಟಪಡಲ್ಲ. ಆದರೆ ಬರೋಡ ಈ ನಿರ್ಧಾರ ಕೈಗೊಂಡಿರುವುದು ನಿಜಕ್ಕೂ ಅದಕ್ಕಾಗಿರುವ ದೊಡ್ಡ ನಷ್ಟ. ಮುಂದಿನ 10 ವರ್ಷಗಳ ಕಾಲ ಅವರು ಬರೋಡ ಪರ ಆಡುವ ಸಾಮರ್ಥ್ಯ ಹೊಂದಿದ್ದರು ಎಂದಿದ್ದಾರೆ.