ETV Bharat / sports

ಭಾರತಕ್ಕೆ ಅದೃಷ್ಟ ತಂದ ದೀಪಕ್ ಹೂಡಾ.. ಈತ ಆಡಿದ ಪಂದ್ಯಗಳಲ್ಲಿ ಸೋತಿಲ್ಲ ಟೀಂ ಇಂಡಿಯಾ

ಐಪಿಎಲ್​ನಲ್ಲಿ ಮಿಂಚಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗಿನಿಂದಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ದೀಪಕ್ ಹೂಡಾ ಭಾರತದ ಅದೃಷ್ಟದ ಆಟಗಾರನಾಗಿ ಹೊರಹೊಮ್ಮಿದ್ದಾರೆ.

Deepak Hooda
Deepak Hooda
author img

By

Published : Aug 20, 2022, 10:56 PM IST

ಹರಾರೆ(ಜಿಂಬಾಬ್ವೆ): ಹರಾರೆ ಸ್ಪೋರ್ಟ್ಸ್‌ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್​​ಗಳ ಗೆಲುವು ದಾಖಲು ಮಾಡಿದೆ. ಈ ಮೂಲಕ ಭಾರತ ಒಂದು ಪಂದ್ಯ ಬಾಕಿ ಇರುವಾಗಲೇ ಜಿಂಬಾಬ್ವೆ ವಿರುದ್ಧ ಸರಣಿ ಕೈವಶ ಮಾಡಿಕೊಂಡಿದೆ. ಈ ಪಂದ್ಯ ಗೆಲ್ಲುವ ಮೂಲಕ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ದೀಪಕ್​ ಹೂಡಾ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ. ಜೊತೆಗೆ ಭಾರತದ ಪಾಲಿಗೆ ಅದೃಷ್ಟ ಎಂಬುದನ್ನ ಸಾಬೀತುಪಡಿಸಿದ್ದಾರೆ.

ಟೀಂ ಇಂಡಿಯಾ ಪರ ದೀಪಕ್ ಹೂಡಾ ಇಲ್ಲಿಯವರೆಗೆ 16 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯಗಳಲ್ಲಿ ಭಾರತ ಸೋಲು ಕಂಡಿಲ್ಲ. ಶನಿವಾರ ನಡೆದ ಪಂದ್ಯದಲ್ಲೂ ಇದು ಸಾಭೀತಾಗಿದೆ. ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ದೀಪಕ್​​​ ಒಟ್ಟು 16 ಪಂದ್ಯಗಳಲ್ಲಿ ಭಾರತದ ಪರ ಕಣಕ್ಕಿಳಿದಿದ್ದಾರೆ. ಇದರಲ್ಲಿ ಏಳು ಏಕದಿನ ಹಾಗೂ 9 ಟಿ20 ಪಂದ್ಯಗಳು ಸೇರಿವೆ. ಈ ಎಲ್ಲಾ ಪಂದ್ಯಗಳಲ್ಲೂ ಭಾರತ ಗೆಲುವಿನ ನಗೆ ಬೀರಿದೆ.

ರೊಮೆನಿಯಾದ ಸಾತ್ವಿಕ್​ ನದಿಗೋತ್ಲಾ ಕೂಡ ರೊಮೇನಿಯಾ ಪರ ಪದಾರ್ಪಣೆ ಮಾಡಿದ ಬಳಿಕ ಸತತ 15 ಪಂದ್ಯ ಗೆದ್ದ ದಾಖಲೆ ಹೊಂದಿದ್ದಾರೆ. ಆದರೆ, ಇಂದಿನ ಪಂದ್ಯದಲ್ಲಿ ದೀಪಕ್ ಹೂಡಾ ಈ ದಾಖಲೆ ಬ್ರೇಕ್ ಮಾಡಿದ್ದಾರೆ. ಟೀಂ ಇಂಡಿಯಾದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಜಾಗಕ್ಕೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ದೀಪಕ್​ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂದಿನ ಪಂದ್ಯದಲ್ಲಿ 1 ವಿಕೆಟ್ ಪಡೆದುಕೊಂಡ ಅವರು, 25ರನ್​​​​ಗಳಿಸಿದ್ದಾರೆ.

ಪದಾರ್ಪಣೆ ಬಳಿಕ ಸತತವಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ಪ್ಲೇಯರ್ಸ್​​​​

16* - ದೀಪಕ್ ಹೂಡಾ (ಟೀಮ್ ಇಂಡಿಯಾ)
15 - ಸಾತ್ವಿಕ್‌ ನದಿಗೊತ್ಲಾ (ರೊಮೇನಿಯಾ)
13 - ಡೇವಿಡ್‌ ಮಿಲ್ಲರ್‌ (ದಕ್ಷಿಣ ಆಫ್ರಿಕಾ)
13 - ಶಾಂತನು ವಸಿಷ್ಠ (ರೊಮೇನಿಯಾ)
12 - ಕಾಲಿಸ್‌ ಕಿಂಗ್‌ (ವೆಸ್ಟ್‌ ಇಂಡೀಸ್‌)

ಇದನ್ನೂ ಓದಿ: IND vs ZIM 2nd ODI: 2ನೇ ಏಕದಿನ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡ ರಾಹುಲ್​ ಪಡೆ

ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ಸತತ 7ನೇ ಗೆಲುವು ದಾಖಲು ಮಾಡಿದೆ. ಶನಿವಾರದ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ 3 ವಿಕೆಟ್ ಪಡೆದುಕೊಂಡಿದ್ದು, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅಕ್ಸರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಸಂಜು ಸ್ಯಾಮ್ಸನ್ ಅಜೇಯ 43 ರನ್ ಗಳಿಸಿದರೆ, ಶಿಖರ್ ಧವನ್ ಮತ್ತು ಶುಭಮನ್ ಗಿಲ್ ತಲಾ 33 ರನ್ ಗಳಿಸಿ ತಂಡದ ಗೆಲುವಿನಲ್ಲಿ ಕೂಡುಗೆ ನೀಡಿದರು. ಅದ್ಭುತ ಫಾರ್ಮ್​​ನಲ್ಲಿರುವ ದೀಪಕ್ ಹೂಡಾ ಇದೀಗ ಏಷ್ಯಾಕಪ್​​ನಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.