ಸೆಂಚುರಿಯನ್ (ದಕ್ಷಿಣ ಆಫ್ರಿಕಾ): ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರು ಗಾಯದಿಂದ ಚೇತರಿಕೊಳ್ಳದ ಹಿನ್ನೆಲೆಯಲ್ಲಿ ಭಾರತದ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಿಂದ ಹೊರಬಿದ್ದಿದ್ದಾರೆ. ಬವುಮಾ ಅನುಪಸ್ಥಿತಿಯಲ್ಲಿ ಹಿರಿಯ ಆಟಗಾರ ಡೀನ್ ಎಲ್ಗರ್ಗೆ ಮುಂದಾಳತ್ವದಲ್ಲಿ ಹರಣಿಗಳು ಮುಂದಿನ ಟೆಸ್ಟ್ ಆಡಲಿದ್ದಾರೆ. ಅಪರೂಪವೆಂಬಂತೆ ಕ್ರಿಕೆಟ್ಗೆ ವಿದಾಯದ ಘೋಷಿಸುತ್ತಿರುವ ಪಂದ್ಯದಲ್ಲಿ ಎಲ್ಗರ್ಗೆ ಮರಳಿ ದೇಶದ ತಂಡದ ನಾಯಕತ್ವ ವಹಿಸುವ ಸುವರ್ಣಾವಕಾಶ ಒಲಿದಿದೆ.
ಸೆಂಚುರಿಯನ್ ಟೆಸ್ಟ್ ಪಂದ್ಯದ ಮೊದಲ ದಿನದಂದು ಫೀಲ್ಡಿಂಗ್ ಮಾಡುವಾಗ ನಾಯಕ ಬವುಮಾ ಗಾಯಗೊಂಡಿದ್ದರು. ಬಳಿಕ ಅವರು ಮೈದಾನಕ್ಕೆ ಮರಳಲಿಲ್ಲ. ಸ್ಕ್ಯಾನ್ ವರದಿ ಪ್ರಕಾರ ಮಂಡಿರಜ್ಜು ಗಾಯಕ್ಕೀಡಾಗಿರುವುದು ದೃಢಪಟ್ಟಿದೆ. ಇದರಿಂದ ಡೀನ್ ಎಲ್ಗರ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಅಂತಿಮ ಪಂದ್ಯದಲ್ಲಿ ತಂಡದ ಮುಂದಾಳತ್ವ ವಹಿಸಲಿದ್ದಾರೆ. ಈ ಟೆಸ್ಟ್ ಸರಣಿಗೆ ಮುನ್ನವೇ ಎಲ್ಗರ್ ನಿವೃತ್ತಿ ಹೊಂದುವ ಬಗ್ಗೆ ಪ್ರಕಟಿಸಿದ್ದರು.
-
A fairytale farewell is on the cards with Dean Elgar being named South Africa's captain for the final Test against India.
— ICC (@ICC) December 28, 2023 " class="align-text-top noRightClick twitterSection" data="
Details 👇https://t.co/rMeeTYnpfD
">A fairytale farewell is on the cards with Dean Elgar being named South Africa's captain for the final Test against India.
— ICC (@ICC) December 28, 2023
Details 👇https://t.co/rMeeTYnpfDA fairytale farewell is on the cards with Dean Elgar being named South Africa's captain for the final Test against India.
— ICC (@ICC) December 28, 2023
Details 👇https://t.co/rMeeTYnpfD
ಮೊದಲ ಟೆಸ್ಟ್‌ನಲ್ಲೂ ಕೂಡ ಬವುಮಾ ಗಾಯಗೊಂಡು ಹೊರನಡೆದ ಬಳಿಕ ತಂಡವನ್ನು ಎಲ್ಗರ್ ಮುನ್ನಡೆಸಿದ್ದರು. ಅಲ್ಲದೆ, ಅದ್ಭುತ ಶತಕ ದಾಖಲಿಸಿ ಸೆಂಚುರಿಯನ್‌ನಲ್ಲಿ ಇನ್ನಿಂಗ್ಸ್ ಹಾಗೂ 32 ರನ್‌ಗಳ ವಿಜಯ ಸಾಧಿಸಿದ್ದಾರೆ. ಹೊಸ ವರ್ಷದ ಜನವರಿ 3 ರಿಂದ ಕೇಪ್‌ಟೌನ್‌ನಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ಗೆ ಬವುಮಾ ಬದಲಿಗೆ ಜುಬೇರ್ ಹಮ್ಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಡೀನ್ ಎಲ್ಗರ್ ಈ ಹಿಂದೆಯೂ ಕೂಡ ಹರಿಣಗಳ ತಂಡದ ನಾಯಕತ್ವ ವಹಿಸಿದ್ದರು. 2021 ರಲ್ಲಿ ತವರಿನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯಲ್ಲಿ ಅವರೇ ನಾಯಕರಾಗಿದ್ದರು. ಈ ಸರಣಿಯಲ್ಲಿ 0-1 ಹಿನ್ನಡೆಯ ಬಳಿಕ ದಕ್ಷಿಣ ಆಫ್ರಿಕಾ ತಂಡವು, 2-1ರ ವಿಜಯದೊಂದಿಗೆ ಸರಣಿ ಜಯಿಸಿತ್ತು. ಸುಮಾರು ಎರಡು ವರ್ಷಗಳ ಬಳಿಕವೂ ಗುರುವಾರ ಮುಗಿದ ಮೊದಲ ಪಂದ್ಯದಲ್ಲಿ ಎಲ್ಗರ್ ಮತ್ತೆ ಭಾರತ ತಂಡವನ್ನು ಕಾಡಿದರು.
ಭಾರತವನ್ನು 245 ರನ್‌ಗಳಿಗೆ ಆಲೌಟ್ ಮಾಡಿದ ನಂತರ, ಎಲ್ಗರ್ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ (185) ದಾಖಲಿಸಿದರು. ಇದು ಅವರ ಟೆಸ್ಟ್ ವೃತ್ತಿಜೀವನದ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ. ಬಳಿಕ ಅವರು ಪಂದ್ಯದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಲ್ಗರ್ ಇದುವರೆಗೆ 85 ಪಂದ್ಯಗಳಿಂದ 14 ಶತಕಗಳೊಂದಿಗೆ 5331 ರನ್ ಪೇರಿಸಿದ್ದಾರೆ. 23 ಅರ್ಧಶತಕ ಬಾರಿಸಿದ್ದು, 38ರ ಸರಾಸರಿಯುಲ್ಲಿ ಬ್ಯಾಟ್ ಬೀಸಿದ್ದಾರೆ. ಜನವರಿ 3 ರಂದು ಕೇಪ್ ಟೌನ್ನಲ್ಲಿ ಪ್ರಾರಂಭವಾಗುವ ಸರಣಿಯ ಅಂತಿಮ ಟೆಸ್ಟ್ನಲ್ಲಿ ಭಾರತ ಗೆದ್ದರೆ ಸರಣಿ ಸಮಬಲ ಆಗಲಿದೆ.
ಇದನ್ನೂ ಓದಿ: '400 ರನ್ ನೀಡುವ ಪಿಚ್ ಆಗಿರಲಿಲ್ಲ': ದ.ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ರೋಹಿತ್