ETV Bharat / sports

ಡೆಲ್ಲಿ ಕ್ಯಾಪಿಟಲ್ಸ್ ಬಿರುಗಾಳಿ ಬೌಲಿಂಗ್ ಪಂಜಾಬ್ ತತ್ತರ... ಕೇವಲ 116 ರನ್​ಗಳಿಸ ಸಾಧಾರಣ ಗುರಿ ನೀಡಿದ ಅಗರ್ವಾಲ್ ಪಡೆ

author img

By

Published : Apr 20, 2022, 7:16 PM IST

Updated : Apr 20, 2022, 9:14 PM IST

ಅಕ್ಷರ್ ಪಟೇಲ್ -ಕುಲ್ದೀಪ್ ಯಾದವ್​ ಹಾಗೂ ಲಲಿತ್ ಯಾದವ್​ ಸ್ಪಿನ್ ಮೋಡಿ ಮತ್ತು ಖಲೀಲ್ ಅಹ್ಮದ್ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್​ಗೆ ರನ್​ಗಳ 116 ಸವಾಲು ನೀಡಿದೆ.

Delhi Capitals vs Punjab Kings
Delhi Capitals vs Punjab Kings

ಮುಂಬೈ:ಬೌಲರ್​ಗಳ ಸಂಘಟಿತ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 115 ರನ್​ಗಳಿಗೆ ಪಂಜಾಬ್ ಕಿಂಗ್ಸ್ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಮುಂಬೈನ ಬ್ರಬೋರ್ನ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್​ ಗೆದ್ದ ರಿಷಭ್ ಪಂತ್ ಪಂಜಾಬ್ ಕಿಂಗ್ಸ್​ಗೆ ಬ್ಯಾಟಿಂಗ್ ಆಹ್ವಾನ ನೀಡಿದರು. ನಾಯಕನ ನಿರ್ಣಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿದ ಡೆಲ್ಲಿ ಬೌಲರ್​ಗಳು ಕೇವಲ 7 ಓವರ್​ಗಳ ಒಳಗೆ ತಂಡದ ಅಗ್ರಕ್ರಮಾಂಕದ ಸ್ಟಾರ್​ ಟ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದರು.

ನಾಯಕ ಮಯಾಂಕ್ ಅಗರ್​ವಾಲ್​ 24, ಶಿಖರ್ ಧವನ್​ 9, ಬೈರ್​ಸ್ಟೋವ್ 9 ಮತ್ತು ಲಿಯಾಮ್ ಲಿವಿಂಗ್​ಸ್ಟೋನ್​ ಕೇವಲ 2 ರನ್​ಗಳಸಿ ವಿಕೆಟ್ ಒಪ್ಪಿಸಿದರು. 54 ರನ್​ಗಳಾಗುವಷ್ಟರಲ್ಲಿ ತಂಡದ ಸ್ಟಾರ್​ ಬ್ಯಾಟರ್​ಗಳನ್ನು ಕಳೆದುಕೊಂಡ ಪಂಜಾಬ್ ತಂಡ100ರ ಗಡಿ ದಾಟುವುದು ಅನುಮಾನ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಜಿತೇಶ್ ಶರ್ಮಾ 32 ರನ್​ಗಳಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.

13ನೇ ಓವರ್​ನಲ್ಲಿ ಜಿತೇಶ್ ಶರ್ಮಾ ಅಕ್ಷರ್​ ಪಟೇಲ್ ಬೌಲಿಂಗ್​ನಲ್ಲಿ ವಿಕೆಟ್ ಒಪ್ಪಿಸಿದರು. ಇವರ ವಿಕೆಟ್​ ಬೀಳುತ್ತಿದ್ದಂತೆ ಪಂಜಾಬ್​ ಮತ್ತೊಮ್ಮೆ ಕುಸಿತ ಕಂಡು, ಕೇವಲ 7 ರನ್​ ಅಂತರದಲ್ಲಿ ರಬಾಡ(2), ನೇಥನ್ ಎಲ್ಲಿಸ್​(0)ಶಾರುಖ್​ ಖಾನ್ (12) ವಿಕೆಟ್ ಕಳೆದುಕೊಂಡಿತು. ಕೊನೆಯಲ್ಲಿ ರಾಹುಲ್ ಚಾಹರ್ 12 ರನ್ ಮತ್ತು ಅರ್ಶ್​ದೀಪ್ 9 ರನ್​ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಅಕ್ಷರ್ ಪಟೇಲ್ 10ಕ್ಕೆ2 , ಲಲಿತ್ ಯಾದವ್ 11ಕ್ಕೆ 2, ಕುಲ್ದೀಪ್ ಯಾದವ್ 24ಕ್ಕೆ2, ಖಲೀಲ್ ಅಹ್ಮದ್ 21ಕ್ಕೆ2 ​​ ಮತ್ತು ರೆಹಮಾನ್ 28ಕ್ಕೆ1 ವಿಕೆಟ್ ಪಡೆದು ಅದ್ಭುತ ಪ್ರದರ್ಶನ ತೋರಿದರು.

Last Updated : Apr 20, 2022, 9:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.