ETV Bharat / sports

ಪ್ಲೀಸ್ ಬೇಗ ಮನೆಗೆ ಬನ್ನಿ ಡ್ಯಾಡಿ.. ವಾರ್ನರ್​ಗೆ ಸಂದೇಶ ಕಳುಹಿಸಿದ ಮಗಳು - ಐಪಿಎಲ್ ರದ್ದು

ಎಲ್ಲ ಕ್ರಿಕೆಟಿಗರು ತವರಿಗೆ ಮರಳುವುದನ್ನೇ ಕಾಯುತ್ತಿದ್ದಾರೆ, ಹಾಗೆಯೇ ಅವರ ಕುಟುಂಬಸ್ಥರೂ ಕೂಡ ಕ್ರಿಕೆಟಿಗರನ್ನು ನೋಡುವ ತವಕದಲ್ಲಿದ್ದಾರೆ. ವಾರ್ನರ್​ ತಮ್ಮ ಎರಡನೇ ಮಗಳು ಇವಿ ಬರೆದಿರುವ ಒಂದು ಪತ್ರವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಫೋಟೋವೊಂದವನ್ನು ಶೇರ್​ ಮಾಡಿಕೊಂಡಿದ್ದಾರೆ.

ಡೇವಿಡ್ ವಾರ್ನರ್​
ಡೇವಿಡ್ ವಾರ್ನರ್​
author img

By

Published : May 4, 2021, 9:47 PM IST

ಹೈದರಾಬಾದ್​: ಐಪಿಎಲ್​ ಕೊರೊನಾಗೆ ಬಲಿಯಾಗಿದೆ, ವಿದೇಶಿ ಆಟಗಾರರು ತವರಿಗೆ ಮರಳುವುದು ಹೇಗೆ ಎನ್ನುವ ಆತಂಕದಲ್ಲಿದ್ದಾರೆ. ಈ ಮಧ್ಯೆ ಆಸ್ಟ್ರೇಲಿಯಾ ಸರ್ಕಾರ ಮೇ 15ರೊಳಗೆ ಬಂದರೆ ಜೈಲಿಗೆ ಕಳಿಸುತ್ತೇವೆಂದು ಘೋಷಿಸಿದೆ. ಇಂತಹ ಸಂದರ್ಭದಲ್ಲಿ ವಾರ್ನರ್​ ಮಗಳು ಇವಿ ಬರೆದಿರುವ ಪತ್ರವೊಂದು ನೆಟ್ಟಿಗರ ಮನ ಮುಟ್ಟಿದೆ.

ಇತ್ತ ಐಪಿಎಲ್ ನಡೆಯುತ್ತಿಲ್ಲ , ಭಾರತದಲ್ಲಿ ಕೊರೊನಾ ಏರುಗತಿ ನೋಡಿದ ಆಸ್ಟ್ರೇಲಿಯನ್ನರಿಗೆ ಇಲ್ಲಿರಲು ಆತಂಕವಿದೆ. ಮೇ 15ರ ತನಕ ಸ್ವದೇಶಕ್ಕೂ ಹೋಗುವ ಹಾಗಿಲ್ಲ. ಇದೀಗ ಬಾಯಿಗೆ ಬಿಸಿ ತುಪ್ಪ ಹಾಕಿಕೊಂಡು ನುಂಗಲೂ ಆಗದೆ, ಉಗಿಯಲೂ ಆಗದಿರುವಂತೆ ಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗರಿದ್ದಾರೆ.

ಎಲ್ಲ ಕ್ರಿಕೆಟಿಗರು ತವರಿಗೆ ಮರಳುವುದನ್ನೇ ಕಾಯುತ್ತಿದ್ದಾರೆ, ಹಾಗೆಯೇ ಅವರ ಕುಟುಂಬಸ್ಥರೂ ಕೂಡ ಕ್ರಿಕೆಟಿಗರನ್ನು ನೋಡುವ ತವಕದಲ್ಲಿದ್ದಾರೆ. ವಾರ್ನರ್​ ತಮ್ಮ ಎರಡನೇ ಮಗಳು ಇವಿ ಬರೆದಿರುವ ಒಂದು ಪತ್ರವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಫೋಟೋವೊಂದವನ್ನು ಶೇರ್​ ಮಾಡಿಕೊಂಡಿದ್ದಾರೆ.

ಅದರಲ್ಲಿ ಮೂರು ಮಕ್ಕಳು ಮತ್ತು ಅಪ್ಪ-ಅಮ್ಮ ಇರುವ ಗೊಂಬೆಗಳ ಚಿತ್ರಗಳನ್ನು ಇವಿ ಬಿಡಿಸಿದ್ದಾಳೆ. ಜೊತೆಗೆ "ಪ್ಲೀಸ್​ ಡ್ಯಾಡಿ ನೇರವಾಗಿ ಮನೆಗೆ ಬನ್ನಿ, ನಾವು ನಿಮ್ಮನ್ನು ತುಂಬಾ ಮಿಸ್​ ಮಾಡಿಕೊಳ್ತಿದ್ದೇವೆ, ಐ ಲವ್ ಯು, ಇಂತಿ ಇವಿ, ಇಂಡಿ, ಮತ್ತು ಇಸ್ಲಾ" ಎಂದು ಬರೆದಿದೆ.

ವಾರ್ನರ್ ಮಾಡಿರುವ ಈ ಪೋಸ್ಟ್​ಗೆ ಸುಮಾರು 7 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಸುಮಾರು 11ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

ಇದನ್ನು ಓದಿ:ಐಪಿಎಲ್ ರದ್ದಾಯ್ತು.. ಟಿ-20 ವಿಶ್ವಕಪ್​ ಆತಿಥ್ಯ ಉಳಿಸಿಕೊಳ್ಳಲು ಬಿಸಿಸಿಐ ಮುಂದಿರುವ ದಾರಿ ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.