ಸಿಡ್ನಿ(ಆಸ್ಟ್ರೇಲಿಯಾ): ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಸರಣಿಯ ನಂತರ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಅವರು ರೆಡ್ ಬಾಲ್ (ಟೆಸ್ಟ್) ಕ್ರಿಕೆಟ್‌ಗೆ ವಿದಾಯ ಹೇಳುತ್ತಾರೆ ಎಂಬುದು ಹಳೆಯ ವಿಷಯ. ಆದರೆ ಇದೀಗ ಹೊಸ ವರ್ಷದಂದು ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದು, ಏಕದಿನ ಕ್ರಿಕೆಟ್ಗೂ ನಿವೃತ್ತಿ ಪ್ರಕಟಿಸಿದ್ದಾರೆ.
-
🚨 Just In: Australian cricket maestro David Warner, a two-time World Cup victor, announces retirement from ODI cricket. An illustrious career marked by glory and records. ❤️ 🇦🇺
— ICC Asia Cricket (@ICCAsiaCricket) January 1, 2024 " class="align-text-top noRightClick twitterSection" data="
#DavidWarner #ODI #Cricket #AustraliaCricket pic.twitter.com/boskdS1DvS
">🚨 Just In: Australian cricket maestro David Warner, a two-time World Cup victor, announces retirement from ODI cricket. An illustrious career marked by glory and records. ❤️ 🇦🇺
— ICC Asia Cricket (@ICCAsiaCricket) January 1, 2024
#DavidWarner #ODI #Cricket #AustraliaCricket pic.twitter.com/boskdS1DvS🚨 Just In: Australian cricket maestro David Warner, a two-time World Cup victor, announces retirement from ODI cricket. An illustrious career marked by glory and records. ❤️ 🇦🇺
— ICC Asia Cricket (@ICCAsiaCricket) January 1, 2024
#DavidWarner #ODI #Cricket #AustraliaCricket pic.twitter.com/boskdS1DvS
2023ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದ ವಾರ್ನರ್, ಆಸೀಸ್ಗೆ ಉತ್ತಮ ಆರಂಭ ನೀಡಿದ್ದರು. ತಂಡವು ಭಾರತದೆದುರು ವಿಶ್ವಕಪ್ ಗೆದ್ದು ಬೀಗಿತ್ತು. ಈ ಸ್ಮರಣೀಯ ಸಾಧನೆಯ ನಂತರ ಒನ್ ಡೇ ಮಾದರಿಯಿಂದಲೂ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ. 2025ರಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯ ವೇಳೆ ಅಗತ್ಯಬಿದ್ದರೆ ತಂಡಕ್ಕಾಗಿ ಆಡುವೆ ಎಂದು ತಿಳಿಸಿದ್ದಾರೆ.
"ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿ ಹೊಂದುತ್ತಿದ್ದೇನೆ. ಭಾರತದಲ್ಲಿ ಏಕದಿನ ವಿಶ್ವಕಪ್ ಗೆಲುವು ದೊಡ್ಡ ಸಾಧನೆ. ಇದಾದ ನಂತರ ನಾನು ಈ ನಿರ್ಧಾರಕ್ಕೆ ಬಂದೆ. ಇಂದು ಏಕದಿನ ಮಾದರಿಯಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸುತ್ತಿದ್ದೇನೆ. ಇದರಿಂದ ನಾನು ಪ್ರಪಂಚಾದ್ಯಂತ ಲೀಗ್‌ಗಳಲ್ಲಿ ಆಡುವ ಅವಕಾಶ ಪಡೆಯುತ್ತೇನೆ. ಮುಂದೆ ಚಾಂಪಿಯನ್ಸ್ ಟ್ರೋಫಿ ಇರುವುದು ನನಗೆ ಅರಿವಿದೆ. ನಾನು ತಂಡದ ಜೊತೆಗಿರುತ್ತೇನೆ. ನನ್ನ ಅವಶ್ಯಕತೆ ಇದ್ದರೆ ತಂಡವನ್ನು ಸೇರಲು ಸದಾ ಲಭ್ಯವಿರುತ್ತೇನೆ"ಎಂದು ಸೋಮವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಹೇಳಿದರು.
ಕಳೆದೆರಡು ವರ್ಷಗಳಿಂದ ಅದ್ಭುತ ಫಾರ್ಮ್ನಲ್ಲಿರುವ ವಾರ್ನರ್ಗೆ ಅಹಮದಾಬಾದ್ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯವೇ ಕೊನೆಯದ್ದಾಗುತ್ತದೆ. ಏಕದಿನದಲ್ಲಿ 45.30 ಸರಾಸರಿಯಲ್ಲಿ 22 ಶತಕಗಳೊಂದಿಗೆ 6,932 ರನ್ ಗಳಿಸಿದ್ದಾರೆ. ಇವರು ಆಸ್ಟ್ರೇಲಿಯಾ ಪರ 6ನೇ ಅತಿ ಹೆಚ್ಚು ಏಕದಿನ ರನ್ ಗಳಿಸಿದ ಆಟಗಾರ. 205 ಏಕದಿನ ಇನ್ನಿಂಗ್ಸ್ ಆಡಿರುವ ವಾರ್ನರ್, ಅತಿ ಹೆಚ್ಚು ಏಕದಿನ ಇನ್ನಿಂಗ್ಸ್ ಆಡಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ರಿಕಿ ಪಾಂಟಿಂಗ್ ಮೊದಲಿಗರು.
ವಾರ್ನರ್ ದುಬೈ ಕ್ಯಾಪಿಟಲ್ಸ್‌ನೊಂದಿಗೆ ಐಎಲ್‌ಟಿ 20 ಒಪ್ಪಂದ ಮಾಡಿಕೊಂಡಿದ್ದಾರೆ. ಮುಂದಿನ ತಿಂಗಳು ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅವರು ಆಡುವುದಿಲ್ಲ ಎಂದು ಹೇಳಲಾಗಿತ್ತು. ಸದ್ಯ ಟಿ20 ಮಾದರಿಯಲ್ಲಿ ಮುಂದುವರೆದಿದ್ದು, ಈ ವರ್ಷ ಜೂನ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯುವ ವಿಶ್ವಕಪ್‌ವರೆಗೆ ಆಡುತ್ತಾರೆ ಎಂದು ಹೇಳಲಾಗುತ್ತಿದೆ. ನಂತರ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ಹೊರಬಂದು ಲೀಗ್ಗಳ ಕಡೆ ಹೆಚ್ಚು ಗಮನ ಹರಿಸುವ ಸಾಧ್ಯತೆ ಇದೆ.
ಡೇವಿಡ್ ವಾರ್ನರ್ ಜನವರಿ 3ರಿಂದ ಪಾಕಿಸ್ತಾನದ ವಿರುದ್ಧ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ (SCG) ತಮ್ಮ ಅಂತಿಮ ಟೆಸ್ಟ್ ಪಂದ್ಯ ಆಡಲಿದ್ದಾರೆ.
ಇದನ್ನೂ ಓದಿ: 023ರ "ವಿರಾಟ" ದಾಖಲೆ ಪುಟ: ರನ್ ಮಷಿನ್ ಕೊಹ್ಲಿಯ ಮೈಲಿಗಲ್ಲುಗಳಿವು