ಸಿಡ್ನಿ (ಆಸ್ಟ್ರೇಲಿಯಾ): ಬಿಗ್ ಬ್ಯಾಷ್ ಲೀಗ್ (ಬಿಬಿಎಲ್) ಪಂದ್ಯಕ್ಕಾಗಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಮೈದಾನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್ಗೆ ಬಂದಿಳಿರುವ ವಾರ್ನರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
-
Dave Warner.
— KFC Big Bash League (@BBL) January 12, 2024 " class="align-text-top noRightClick twitterSection" data="
In a Helicopter.
Arriving at the SCG.
Here's how it happened. @davidwarner31 @ThunderBBL @scg #BBL13 pic.twitter.com/v7QRCkauH5
">Dave Warner.
— KFC Big Bash League (@BBL) January 12, 2024
In a Helicopter.
Arriving at the SCG.
Here's how it happened. @davidwarner31 @ThunderBBL @scg #BBL13 pic.twitter.com/v7QRCkauH5Dave Warner.
— KFC Big Bash League (@BBL) January 12, 2024
In a Helicopter.
Arriving at the SCG.
Here's how it happened. @davidwarner31 @ThunderBBL @scg #BBL13 pic.twitter.com/v7QRCkauH5
ಇತ್ತೀಚಿಗೆ ಪಾಕಿಸ್ತಾನ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಬಳಿಕ ನ್ಯೂ ಸೌತ್ ವೇಲ್ಸ್‌ನ ಹಂಟರ್ ವ್ಯಾಲಿಯಲ್ಲಿ ತಮ್ಮ ಸಹೋದರನ ಮದುವೆಯಲ್ಲಿ ಅವರು ಭಾಗವಹಿಸಿದ್ದರು. ಶುಕ್ರವಾರ ಬಿಗ್ ಬ್ಯಾಷ್ ಲೀಗ್ನ ಸಿಡ್ನಿ ಥಂಡರ್ಸ್ ಮತ್ತು ಸಿಡ್ನಿ ಸಿಕ್ಸರ್ಸ್ ನಡುವೆ ಪಂದ್ಯಕ್ಕಾಗಿ ಹೆಲಿಕಾಪ್ಟರ್‌ನಲ್ಲಿ ತಮ್ಮ ತವರು ಸಿಡ್ನಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿ ಗಮನ ಸೆಳೆದಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಸ್ಟಾರ್ ಬ್ಯಾಟರ್ ಕ್ರಿಕೆಟ್ ಗ್ರೌಂಡ್ನಲ್ಲಿ ಬಂದಿಳಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
37 ವರ್ಷದ ಎಡಗೈ ಬ್ಯಾಟರ್ ವಾರ್ನರ್ ಏಕದಿನ, ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಟಿ-20 ಮತ್ತು ಫ್ರಾಂಚೈಸ್ ಲೀಗ್‌ಗಳಲ್ಲಿ ತಮ್ಮ ಆಟ ಮುಂದುವರಿಸುವ ನಿರ್ಧಾರ ಕೈಗೊಂಡಿದ್ದಾರೆ. ಆದಾಗ್ಯೂ, ಅವರು ಪಾಕಿಸ್ತಾನದಲ್ಲಿ ನಡೆಯಲಿರುವ ಏಕದಿನ ಚಾಂಪಿಯನ್ಸ್ ಟ್ರೋಫಿ - 2025ರ ಟೂರ್ನಿಯನ್ನೂ ಆಡಲಿದ್ದಾರೆ.
-
David Warner is in the building 😎#ThunderNation pic.twitter.com/utrkGtcGeu
— Sydney Thunder (@ThunderBBL) January 12, 2024 " class="align-text-top noRightClick twitterSection" data="
">David Warner is in the building 😎#ThunderNation pic.twitter.com/utrkGtcGeu
— Sydney Thunder (@ThunderBBL) January 12, 2024David Warner is in the building 😎#ThunderNation pic.twitter.com/utrkGtcGeu
— Sydney Thunder (@ThunderBBL) January 12, 2024
ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾ ಪರವಾಗಿ ಅತ್ಯಧಿಕ ರನ್ ಗಳಿಸಿದ ಐದನೇ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ. 112 ಟೆಸ್ಟ್ ಪಂದ್ಯಗಳನ್ನಾಗಿ 8,786 ರನ್ ಬಾರಿಸಿದ್ದಾರೆ. ವಾರ್ನರ್ ಟೆಸ್ಟ್ ವೃತ್ತಿಜೀವನದಲ್ಲಿ 26 ಶತಕ, 3 ದ್ವಿಶತಕ, 37 ಅರ್ಧಶತಕಗಳು ಒಳಗೊಂಡಿವೆ. ಇದೇ ವೇಳೆ, ಅಗತ್ಯವಿದ್ದಲ್ಲಿ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಡುವುದಾಗಿಯೂ ತಿಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸುವ ಮೂಲಕ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿತ್ತು. ಈ ಮೂಲಕ ಅಂತಿಮ ಟೆಸ್ಟ್ ಪಂದ್ಯ ಆಡುತ್ತಿದ್ದ ಡೇವಿಡ್ ವಾರ್ನರ್ ಅವರಿಗೆ ಭರ್ಜರಿ ಉಡುಗೊರೆ ನೀಡಿತ್ತು. ಅಲ್ಲದೇ, ಈ ಪಂದ್ಯದಲ್ಲಿ 75 ಎಸೆತಗಳಲ್ಲಿ 57 ರನ್ ಗಳಿಸಿ ವಾರ್ನರ್ ಸಹ ಮಿಂಚಿದ್ದರು. ಜೊತೆಗೆ ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳತ್ತ ಬ್ಯಾಟ್, ಹೆಲ್ಮೆಟ್ ಅನ್ನು ಎತ್ತುವ ಮೂಲಕ ವಾರ್ನರ್ ಧನ್ಯವಾದ ಹೇಳಿದ್ದರು. ಈ ವೇಳೆ, ಕ್ರೀಡಾಂಗಣದಲ್ಲಿದ್ದ ಸೇರಿದ್ದ ಅಭಿಮಾನಿಗಳು ಕರತಾಡನದೊಂದಿಗೆ ಗೌರವ ಸಲ್ಲಿಸಿದ್ದರು.
ಇದನ್ನೂ ಓದಿ: ಪಾಕ್ ವಿರುದ್ಧ ಆಸೀಸ್ 3-0 ಕ್ಲೀನ್ಸ್ವೀಪ್: ಗೆಲುವಿನೊಂದಿಗೆ ಟೆಸ್ಟ್ಗೆ ವಾರ್ನರ್ ವಿದಾಯ