ETV Bharat / sports

ಐಪಿಎಲ್​ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 1,000 ರನ್​ ಗಡಿದಾಟಿದ 2ನೇ ಬ್ಯಾಟರ್​ ವಾರ್ನರ್‌ - ವಿರಾಟ್ ಕೊಹ್ಲಿ

ಡೇವಿಡ್​ ವಾರ್ನರ್​ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 1000 ರನ್​ ಪೂರೈಸಿದ 2ನೇ ಬ್ಯಾಟರ್​ ಎನಿಸಿಕೊಂಡರು. ಆಸೀಸ್ ಬ್ಯಾಟರ್​ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ(1018) ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.

David Warner is the 2nd batsman with 1000+ runs against a team in IPL
ಡೇವಿಡ್ ವಾರ್ನರ್ ದಾಖಲೆ
author img

By

Published : Apr 21, 2022, 6:39 PM IST

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಸ್ಟ್ರೇಲಿಯಾ ಬ್ಯಾಟರ್​ ಡೇವಿಡ್ ವಾರ್ನರ್​ ಬುಧವಾರ ನಡೆದ ಪಂಜಾಬ್​ ಕಿಂಗ್ಸ್​ ವಿರುದ್ಧ ಅಜೇಯ 60 ರನ್​ಗಳಿಸುವ ಮೂಲಕ 9 ವಿಕೆಟ್​ಗಳ ಸುಲಭ ಜಯ ಸಾಧಿಸಲು ನೆರವಾಗಿದ್ದರು. ಪಂದ್ಯಾರಂಭಕ್ಕೆ ಕೆಲವೇ ಗಂಟೆಗಳಿರುವಾಗ ತಂಡದ ವಿಕೆಟ್ ಕೀಪರ್ ಬ್ಯಾಟರ್ ಟಿಮ್ ಸೀಫರ್ಟ್​ ಕೋವಿಡ್​ ಪಾಸಿಟಿವ್ ಪಡೆದಿದ್ದರಿಂದ ಕೇವಲ ನಿಮಿಷಗಳಿರುವಾಗ ಡೆಲ್ಲಿ ಕ್ಯಾಪಿಟಲ್ಸ್ ಮೈದಾನಕ್ಕೆ ಆಗಮಿಸಿತ್ತು. ಆದರೆ ಒಗ್ಗಟ್ಟಿನ ಪ್ರದರ್ಶನ ನೀಡುವ ಮೂಲಕ ಪಂಜಾಬ್ ತಂಡವನ್ನು 115ಕ್ಕೆ ಕಟ್ಟಿಹಾಕಿದ್ದಲ್ಲದೆ, ಕೇವಲ 10.3 ಓವರ್​ಗಳಲ್ಲಿ ಗುರಿ ತಲುಪಿತ್ತು.

ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್ ಕೇವಲ 30 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್​ ಸಹಿತ ಅಜೇಯ 60 ರನ್​ಗಳಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ಧ 1000 ರನ್​ ಪೂರೈಸಿದ ಮೊದಲ ಬ್ಯಾಟರ್​ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಡೇವಿಡ್​ ವಾರ್ನರ್​ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 1000ರನ್​ ಪೂರೈಸಿದ 2ನೇ ಬ್ಯಾಟರ್​ ಎನಿಸಿಕೊಂಡರು. ಆಸೀಸ್ ಬ್ಯಾಟರ್​ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ(1018) ಕೋಲ್ಕತಾ ನೈಟ್​ ರೈಡರ್ಸ್ ವಿರುದ್ಧ ಈ ಸಾಧನೆ ಮಾಡಿದ್ದಾರೆ.

ಇವರಿಬ್ಬರನ್ನು ಬಿಟ್ಟರೆ ಬೇರೆ ಯಾವುದೇ ಬ್ಯಾಟರ್​ ಒಂದೇ ತಂಡದ ವಿರುದ್ಧ 1000 ರನ್​ಗಳಿಸಿಲ್ಲ. ಆದರೆ ವಾರ್ನರ್​ ಕೆಕೆಆರ್ ವಿರುದ್ಧ 976, ವಿರಾಟ್​ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 949, ಶಿಖರ್ ಧವನ್​ ಸಿಎಸ್​ಕೆ ವಿರುದ್ಧ 941 , ವಿರಾಟ್​ ಕೊಹ್ಲಿ ಡೆಲ್ಲಿ ವಿರುದ್ಧ 925 ರನ್​ ಮತ್ತು ರೋಹಿತ್ ಶರ್ಮಾ ಡೆಲ್ಲಿ ವಿರುದ್ಧ 910ರನ್​ಗಳಿಸಿದ್ದಾರೆ.

ಇದನ್ನೂ ಓದಿ:16ರ ಹರೆಯದಲ್ಲೇ ನನ್ನ ಪ್ರತಿಭೆ ಗುರುತಿಸಿದ್ದ ರೈನಾ ನನಗೆ ದೇವರಿದ್ದಂತೆ: ಕಾರ್ತಿಕ್​ ತ್ಯಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.