ದುಬೈ(ಯುಎಇ): ರಾಜಕೀಯ ಅರಾಜಕತೆ, ಆರ್ಥಿಕ ಬಿಕ್ಕಟ್ಟಿನ ನಡುವೆ ಅಮೋಘ ಪ್ರದರ್ಶನ ನೀಡಿರುವ ಶ್ರೀಲಂಕಾ ಕ್ರಿಕೆಟ್ ತಂಡ ಏಷ್ಯಾ ಕಪ್ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ. ಫೈನಲ್ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನದ ವಿರುದ್ಧ 23 ರನ್ಗಳ ರೋಚಕ ಜಯ ಸಾಧಿಸಿ 6ನೇ ಸಲ ಪ್ರಶಸ್ತಿಗೆ ಮುತ್ತಿಕ್ಕಿತು.
-
Dasun Shanaka is a selfless captain, Sri Lankan cricket is in safe hands #AsiaCup2022 pic.twitter.com/RvlGByTkUC
— ESPNcricinfo (@ESPNcricinfo) September 10, 2022 " class="align-text-top noRightClick twitterSection" data="
">Dasun Shanaka is a selfless captain, Sri Lankan cricket is in safe hands #AsiaCup2022 pic.twitter.com/RvlGByTkUC
— ESPNcricinfo (@ESPNcricinfo) September 10, 2022Dasun Shanaka is a selfless captain, Sri Lankan cricket is in safe hands #AsiaCup2022 pic.twitter.com/RvlGByTkUC
— ESPNcricinfo (@ESPNcricinfo) September 10, 2022
ಪಂದ್ಯದ ಬಳಿಕ ಮಾತನಾಡಿರುವ ಕ್ಯಾಪ್ಟನ್ ದಾಸುನ್ ಶನಕ, ಏಷ್ಯಾ ಕಪ್ ಗೆಲುವನ್ನು ಆರ್ಥಿಕ ಬಿಕ್ಕಟ್ಟು ಪೀಡಿತ ನಮ್ಮ ದೇಶ ಶ್ರೀಲಂಕಾಗೆ ಅರ್ಪಿಸುತ್ತೇವೆ. ಈ ವಿಜಯೋತ್ಸವ ದೇಶದ ಕ್ರಿಕೆಟ್‌ಗೆ ನೈಜ ತಿರುವು. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಮುಂಚಿತವಾಗಿ ಈ ಜಯಭೇರಿ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದರು.
-
It's finally ours, again 🤗🏆
— Sri Lanka Cricket 🇱🇰 (@OfficialSLC) September 12, 2022 " class="align-text-top noRightClick twitterSection" data="
📸 It was a special moment Sri Lanka Captain Dasun Shanaka receiving the #AsiaCup from the President of Sri Lanka Cricket Shammi Silva.@SLCPresident#RoaringForGlory #AsiaCup2022 pic.twitter.com/EhYbZ3QXCh
">It's finally ours, again 🤗🏆
— Sri Lanka Cricket 🇱🇰 (@OfficialSLC) September 12, 2022
📸 It was a special moment Sri Lanka Captain Dasun Shanaka receiving the #AsiaCup from the President of Sri Lanka Cricket Shammi Silva.@SLCPresident#RoaringForGlory #AsiaCup2022 pic.twitter.com/EhYbZ3QXChIt's finally ours, again 🤗🏆
— Sri Lanka Cricket 🇱🇰 (@OfficialSLC) September 12, 2022
📸 It was a special moment Sri Lanka Captain Dasun Shanaka receiving the #AsiaCup from the President of Sri Lanka Cricket Shammi Silva.@SLCPresident#RoaringForGlory #AsiaCup2022 pic.twitter.com/EhYbZ3QXCh
ಕಳೆದ ಎರಡ್ಮೂರು ವರ್ಷಗಳಿಂದ ನಮ್ಮ ಆಟಗಾರರು ಉತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ, ಗೆಲ್ಲುವ ಅಂಕಿ-ಅಂಶಗಳನ್ನು ಮಾತ್ರ ಕಂಡಿರಲಿಲ್ಲ. ಎಲ್ಲದರ ಫಲಿತಾಂಶವೂ ಇದೀಗ ಹೊರಬಿದ್ದಿದೆ ಎಂದರು. ಮುಂದಿನ ಐದಾರು ವರ್ಷಗಳ ಕಾಲ ಇದೇ ರೀತಿಯ ಆಟ ಮುಂದುವರೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ಏಷ್ಯಾ ಕಪ್ ಚಾಂಪಿಯನ್ ಶ್ರೀಲಂಕಾ ರಾಷ್ಟ್ರಧ್ವಜದೊಂದಿಗೆ ಗೌತಮ್ ಗಂಭೀರ್ ಪೋಸ್
ಮುಂದಿನ ತಿಂಗಳ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾ ತಂಡ ಅರ್ಹತಾ ಸುತ್ತಿನಲ್ಲಿ ಆಡಿ ಲೀಗ್ ಹಂತಕ್ಕೆ ಪ್ರವೇಶ ಪಡೆದುಕೊಳ್ಳಬೇಕಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶನಕ, ಕಳೆದ ವರ್ಷವೂ ಸಹ ನಾವು ಅರ್ಹತಾ ಪಂದ್ಯ ಆಡಿದ್ದೇವೆ. ಉತ್ತಮ ಕ್ರಿಕೆಟ್ ಆಡುವುದು ಮಾತ್ರ ನಮ್ಮ ಗುರಿ. ಅರ್ಹತಾ ಪಂದ್ಯಗಳು ನಮ್ಮ ಕ್ರಿಕೆಟ್ ಮತ್ತಷ್ಟು ವೃದ್ಧಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.
ತಂಡದ ಕೋಚ್ ಕ್ರಿಸ್ ಸಿಲ್ವರ್ವುಡ್ ಯಾವಾಗಲೂ ನಮಗೆ ಉತ್ತಮ ಪ್ರೇರಕರಾಗಿದ್ದಾರೆ. ನಮ್ಮಿಂದ ಆಕ್ರಮಣಕಾರಿ ಕ್ರಿಕೆಟ್ ಹೊರಬರಬೇಕೆಂದು ಅವರು ಬಯಸುತ್ತಾರೆ. ಮೈದಾನದಲ್ಲಿ ನಾವು ಬಯಸಿದಂತೆ ಕ್ರಿಕೆಟ್ ಆಡುವ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಶನಕ ತಿಳಿಸಿದರು.