ಮೆಲ್ಬೋರ್ನ್ : ನ್ಯೂಜಿಲ್ಯಾಂಡ್ ತಂಡದ ಮಾಜಿ ಕ್ಯಾಪ್ಟನ್ ಡೇನಿಯಲ್ ವೆಟ್ಟೋರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ಮಣೆ ಹಾಕಿದ್ದು, ಪುರುಷರ ತಂಡದ ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಂಡಿದೆ. ಮುಂಬರುವ ಟಿ-20 ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಆಸ್ಟ್ರೇಲಿಯಾ ಈ ಮಹತ್ವದ ನಿರ್ಧಾರಕ್ಕೆ ಕೈ ಹಾಕಿದೆ. ಮುಖ್ಯ ಕೋಚ್ ಆಂಡ್ರ್ಯೂ ಮೆಕ್ಡೊನಾಲ್ಡ್ ಜೊತೆ ಸೇರಿಕೊಂಡು ವೆಟ್ಟೋರಿ ಕಾರ್ಯ ನಿರ್ವಹಿಸಲಿದ್ದಾರೆ.
-
🗣 Some high praise for our new men's national team assistant coaches. pic.twitter.com/Vk4tk1DL2a
— Cricket Australia (@CricketAus) May 24, 2022 " class="align-text-top noRightClick twitterSection" data="
">🗣 Some high praise for our new men's national team assistant coaches. pic.twitter.com/Vk4tk1DL2a
— Cricket Australia (@CricketAus) May 24, 2022🗣 Some high praise for our new men's national team assistant coaches. pic.twitter.com/Vk4tk1DL2a
— Cricket Australia (@CricketAus) May 24, 2022
ನ್ಯೂಜಿಲ್ಯಾಂಡ್ ತಂಡದ ಮಾಜಿ ಕ್ಯಾಪ್ಟನ್, ಆಲ್ರೌಂಡರ್ ಡೇನಿಯಲ್ ವೆಟ್ಟೋರಿ 18 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. ಈ ಸುದೀರ್ಘ ವೃತ್ತಿ ಜೀವನದಲ್ಲಿ 113 ಟೆಸ್ಟ್, 295 ಏಕದಿನ ಪಂದ್ಯಗಳನ್ನಾಡಿದ್ದು, ಅತಿ ಹೆಚ್ಚಿನ ಅನುಭವ ಹೊಂದಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ತಂಡದೊಂದಿಗೆ ವೆಟ್ಟೋರಿ ಕೆಲಸ ಮಾಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ತಂಡದೊಂದಿಗೆ ಇದ್ದರು.
ಇದನ್ನೂ ಓದಿ: ತುಂಬಿ ತುಳುಕುವ ಮೈದಾನದಲ್ಲಿ ಗುಜರಾತ್-ರಾಜಸ್ಥಾನ ಮಧ್ಯೆ ಬಿಗ್ ಫೈಟ್.. ಗೆದ್ದವ್ರು ಫೈನಲ್ಗೆ ಲಗ್ಗೆ!
ಈ ಹಿಂದೆ ವೆಟ್ಟೋರಿ ಆರ್ಸಿಬಿ ತಂಡದ ಕೋಚ್ ಆಗಿದ್ದ ಸಂದರ್ಭದಲ್ಲಿ ಮೆಕ್ ಡೊನಾಲ್ಡ್ ಸಹಾಯ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಇಬ್ಬರ ನಡುವೆ ಉತ್ತಮ ಹೊಂದಾಣಿಕೆ ಇದ್ದು, ಇದೀಗ ಆಸ್ಟ್ರೇಲಿಯಾ ತಂಡದ ಕೋಚ್ ಹಾಗೂ ಸಹಾಯಕ ಕೋಚ್ ಆಗಿ ಕೆಲಸ ನಿರ್ವಹಿಸಲಿದ್ದಾರೆ. ಆಸ್ಟ್ರೇಲಿಯಾ ತಂಡದ ಮುಖ್ಯ ಕೋಚ್ ಆಗಿದ್ದ ಜಸ್ಟಿನ್ ಲ್ಯಾಂಗರ್ ತಮ್ಮ ಸ್ಥಾನ ತೊರೆದ ಬಳಿಕ ಕಳೆದ ಏಪ್ರಿಲ್ ತಿಂಗಳಲ್ಲಿ ಮೆಕ್ಡೊನಾಲ್ಡ್ ಈ ಸ್ಥಾನಕ್ಕೆ ಭಡ್ತಿ ಪಡೆದುಕೊಂಡಿದ್ದರು. ಇದೀಗ ಅವರಿಗೆ ಸಹಾಯಕರಾಗಿ ವೆಟ್ಟೋರಿ ಇರಲಿದ್ದಾರೆ.