ಮೆಲ್ಬೋರ್ನ್ : ಮುಂಬರುವ ವಿಂಡೀಸ್ ಮತ್ತು ಬಾಂಗ್ಲಾದೇಶ ಪ್ರವಾಸಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. 38 ವರ್ಷದ ಡೇನಿಯಲ್ ಕ್ರಿಶ್ಚಿಯನ್, ಕ್ಯಾಮರೋನ್ ಗ್ರೀನ್, ಆಶ್ಟನ್ ಟರ್ನರ್, ವೆಸ್ ಅಗರ್ ಮತ್ತು ನಥನ್ ಎಲ್ಲಿಸ್ ಅವರಿಗೆ ಅವಕಾಶ ನೀಡಿದೆ.
ಪುರುಷರ ಪ್ರವಾಸಗಳು ಜೈವಿಕ ಭದ್ರತಾ ವ್ಯವಸ್ಥೆಗಳು(ಬಯೋ ಬಬಲ್) ಮತ್ತು ಸರ್ಕಾರದ ಸಂಬಂಧಿತ ಅನುಮೋದನೆಗಳ ಒಪ್ಪಂದಕ್ಕೆ ಒಳಪಟ್ಟಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ದೃಢಪಡಿಸಿದೆ. ಮೆಕ್ಡರ್ಮೊಟ್ ಮತ್ತು ಕ್ರಿಶ್ಚಿಯನ್ ಪ್ರಸ್ತುತ ಕ್ರಮವಾಗಿ ಡರ್ಬಿಶೈರ್ ಮತ್ತು ನಾಟಿಂಗ್ಹ್ಯಾಮ್ಶೈರ್ ಪರ ಕೌಂಟಿ ಕ್ರಿಕೆಟ್ ಆಡುತ್ತಿದ್ದಾರೆ. ಈ ವಾರ ತವರಿಗೆ ವಾಪಸಾಗಲಿದ್ದಾರೆ. ಅವರು ವಿದೇಶಿ ಪ್ರವಾಸ ಕೈಗೊಳ್ಳುವ ಮುನ್ನ 2 ವಾರಗಳ ಕಾಲ ಕ್ವಾರಂಟೈನ್ಗೆ ಒಳಗಾಗಬೇಕಿದೆ.
ಪ್ರಸ್ತುತ 29 ಸದಸ್ಯರ ತಂಡವನ್ನು ಘೋಷಿಸಲಾಗಿದೆ. ಮುಂದಿನ ವಾರ 23 ಸದಸ್ಯರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ರಾಷ್ಟ್ರೀಯ ಆಯ್ಕೆ ಸಮಿತಿ ಆಯ್ಕೆ ಮಾಡಲಿದೆ. ಜೂನ್ 28ರಂದು ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಳ್ಳಲಿದೆ.
ಆಸ್ಟ್ರೇಲಿಯಾ ತಂಡ : ಆರನ್ ಫಿಂಚ್ (ನಾಯಕ), ಆಶ್ಟನ್ ಅಗರ್, ವೆಸ್ ಅಗರ್, ಜೇಸನ್ ಬೆಹ್ರೆಂಡಾರ್ಫ್, ಅಲೆಕ್ಸ್ ಕ್ಯಾರಿ, ಡೇನಿಯಲ್ ಕ್ರಿಶ್ಚಿಯನ್, ಪ್ಯಾಟ್ ಕಮ್ಮಿನ್ಸ್, ನಥನ್ ಎಲ್ಲಿಸ್, ಕ್ಯಾಮರೋನ್ ಗ್ರೀನ್ ಗ್ರೀನ್, ಜೋಶ್ ಹೆಜಲ್ವುಡ್, ಮೊಯಿಸಸ್ ಹೆನ್ರಿಕ್ಸ್, ಮಿಚೆಲ್ ಮಾರ್ಷ್, ಗ್ಲೇನ್ ಮ್ಯಾಕ್ಸ್ವೆಲ್, ಬೆನ್ ಮೆಕ್ಡರ್ಮೊಟ್, ರಿಲೆ ಮೆರೆಡಿತ್ , ಜೋಶ್ ಫಿಲಿಪ್ಪೆ, ಜೇ ರಿಚರ್ಡ್ಸನ್, ಕೇನ್ ರಿಚರ್ಡ್ಸನ್, ತನ್ವೀರ್ ಸಂಘ, ಡಿ'ಆರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ವೆಪ್ಸನ್, ಆಶ್ಟನ್ ಟರ್ನರ್, ಆಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆಡಮ್ ಜಂಪಾ
ಇದನ್ನು ಓದಿ:ಮಂಜ್ರೇಕರ್ಗೆ 'ಅಪರಿಚಿತ' ಸಿನಿಮಾ ಡೈಲಾಗ್ ಮೂಲಕ ಟಾಂಗ್ ಕೊಟ್ಟ ಅಶ್ವಿನ್