ಬರ್ಮಿಂಗ್ಹ್ಯಾಮ್: ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ಮಹಿಳಾ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ಗಳಿಕೆ ಮಾಡಿದ್ದು, ಆಂಗ್ಲರ ಪಡೆಗೆ ಸ್ಪರ್ಧಾತ್ಮಕ ಟಾರ್ಗೆಟ್ ನೀಡಿದೆ. ಮಹತ್ವದ ಪಂದ್ಯದಲ್ಲಿ ಮಿಂಚಿರುವ ಉಪನಾಯಕಿ ಸ್ಮೃತಿ ಮಂದಾನ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಸ್ಫೋಟಕ ಆಟ ಪ್ರದರ್ಶಿಸಿದರು.
ಆರಂಭಿಕರಾಗಿ ಕಣಕ್ಕಿಳಿದ ಮಂದಾನ-ಶೆಫಾಲಿ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿತ್ತು. 7.5 ಓವರ್ಗಳಲ್ಲಿ 76ರನ್ಗಳಿಕೆ ಮಾಡಿತು. ತಾವು ಎದುರಿಸಿದ 32 ಎಸೆತಗಳಲ್ಲಿ ಸ್ಮೃತಿ ಮಂದಾನ 3 ಸಿಕ್ಸರ್, 8 ಬೌಂಡರಿ ಸಮೇತ 61ರನ್ಗಳಿಕೆ ಮಾಡಿದರು. ಈ ವೇಳೆ ಸ್ಕಿವರ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನ್ಲಲೇ ಶೆಫಾಲಿ(15) ಕೂಡ ಔಟಾದರು.
-
An unchanged Playing XI for #TeamIndia
— BCCI Women (@BCCIWomen) August 6, 2022 " class="align-text-top noRightClick twitterSection" data="
Live - https://t.co/ex8lGZRthz #INDvENG #B2022 pic.twitter.com/SNvBYp4GxH
">An unchanged Playing XI for #TeamIndia
— BCCI Women (@BCCIWomen) August 6, 2022
Live - https://t.co/ex8lGZRthz #INDvENG #B2022 pic.twitter.com/SNvBYp4GxHAn unchanged Playing XI for #TeamIndia
— BCCI Women (@BCCIWomen) August 6, 2022
Live - https://t.co/ex8lGZRthz #INDvENG #B2022 pic.twitter.com/SNvBYp4GxH
ತದನಂತರ ಬಂದ ರೋಡ್ರಿಗಸ್ ಅಜೇಯ(44ರನ್), ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್(20), ದೀಫ್ತಿ ಶರ್ಮಾ(22)ರನ್ಗಳಿಕೆ ಮಾಡಿ, ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 164ರನ್ಗಳಿಕೆ ಮಾಡುವಂತೆ ಮಾಡಿದರು. ಇಂಗ್ಲೆಂಡ್ ಪರ ಫ್ರೇಯಾ ಕೆಂಪ್ 2 ವಿಕೆಟ್,ಸ್ಕಿವರ್ ಹಾಗೂ ಬ್ರಂಟ್ ತಲಾ 1 ವಿಕೆಟ್ ಪಡೆದುಕೊಂಡರು.
ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ತಂಡ ಮುಖಾಮುಖಿಯಾಗಿವೆ. ಟಾಸ್ ಗೆದ್ದ ಹರ್ಮನ್ಪ್ರೀತ್ ಕೌರ್ ಬಳಗ ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ತಂಡ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿದೆ.
-
FIFTY for #TeamIndia vice-captain @mandhana_smriti off just 23 balls 👏👏
— BCCI Women (@BCCIWomen) August 6, 2022 " class="align-text-top noRightClick twitterSection" data="
Her 16th in T20Is.
Live - https://t.co/ex8lGZRthz #INDvENG #B2022 pic.twitter.com/9oufibcWtT
">FIFTY for #TeamIndia vice-captain @mandhana_smriti off just 23 balls 👏👏
— BCCI Women (@BCCIWomen) August 6, 2022
Her 16th in T20Is.
Live - https://t.co/ex8lGZRthz #INDvENG #B2022 pic.twitter.com/9oufibcWtTFIFTY for #TeamIndia vice-captain @mandhana_smriti off just 23 balls 👏👏
— BCCI Women (@BCCIWomen) August 6, 2022
Her 16th in T20Is.
Live - https://t.co/ex8lGZRthz #INDvENG #B2022 pic.twitter.com/9oufibcWtT
ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಭಾರತ ಆಡಿರುವ ಮೂರು ಪಂದ್ಯಗಳ ಪೈಕಿ ಎರಡಲ್ಲಿ ಗೆಲುವು ದಾಖಲು ಮಾಡಿ, ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ಟಿ-20 ಕ್ರಿಕೆಟ್ ಇತಿಹಾಸದಲ್ಲಿ ಭಾರತ-ಇಂಗ್ಲೆಂಡ್ ಒಟ್ಟು 22 ಸಲ ಮುಖಾಮುಖಿಯಾಗಿದ್ದು, ಆಂಗ್ಲರ ಪಡೆ 17 ಸಲ ಗೆದ್ದಿದೆ. ಹೀಗಾಗಿ, ಇಂದಿನ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ನೆಚ್ಚಿನ ತಂಡವಾಗಿದೆ. ಆದರೆ, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಬಲಿಷ್ಠವಾಗಿರುವ ಹರ್ಮನ್ ಬಳಗ ತಿರುಗೇಟು ನೀಡುವ ಇರಾದೆ ಅಲ್ಲಗಳೆಯುವಂತಿಲ್ಲ. ಇಂದಿನ ಪಂದ್ಯದಲ್ಲಿ ಭಾರತ ಮಹಿಳಾ ಪಡೆ ಆಡುವ 11ರ ಬಳಗದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿಲ್ಲ.
ಲೀಗ್ ಹಂತದಲ್ಲಿ ಅಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯ ಸೋತಿರುವ ಭಾರತ ನಂತರ ಪಾಕಿಸ್ತಾನ ಹಾಗೂ ಬಾರ್ಬಡೋಸ್ ವಿರುದ್ಧ ಭರ್ಜರಿ ಗೆಲುವು ದಾಖಲು ಮಾಡಿದೆ. ಎರಡನೇ ಸೆಮಿಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವೆ ನಡೆಯಲಿದೆ.
ಟೀಂ ಇಂಡಿಯಾ ಪ್ಲೇಯಿಂಗ್ XI: ಸ್ಮೃತಿ ಮಂದಾನ, ಶಫಾಲಿ ವರ್ಮಾ, ರೊಡ್ರಿಗೆಸ್, ಹರ್ಮನ್ಪ್ರೀತ್ ಕೌರ್(ಕ್ಯಾಪ್ಟನ್), ತಾನಿಯಾ ಭಾಟಿಯಾ(ವಿ.ಕೀ), ದೀಪ್ತಿ ಶರ್ಮಾ, ಪೂಜಾ ವಸ್ತ್ರಕರ್, ರಾಧಾ ಯಾದವ್, ಸ್ನೇಹಾ ರಾಣಾ, ಮೇಘನಾ ಸಿಂಗ್, ರೇಣುಕಾ ಸಿಂಗ್
ಇಂಗ್ಲೆಂಡ್ ಪ್ಲೇಯಿಂಗ್ XI: ಡೇನಿಯಲ್ ವ್ಯಾಟ್, ಸೋಫಿಯಾ ಡಂಕ್ಲಿ, ನಟಾಲಿ ಸ್ಕಿವರ್(ಕ್ಯಾಪ್ಟನ್) ಆಮಿ ಜೋನ್ಸ್(ವಿ.ಕೀ), ಮಾಯಾ ಚೌಚಿಯರ್, ಆಲಿಸ್ ಕ್ಯಾಪ್ಸೆ, ಕ್ಯಾಥರೀನ್ ಬ್ರಂಟ್, ಸೋಫಿ ಎಕ್ಲೆಸ್ಟೋನ್, ಫ್ರೇಯಾ ಕೆಂಪ್, ಇನ್ಸಿ ವಾಂಗ್, ಸಾರಾ ಗ್ಲೆನ್