ಹೈದರಾಬಾದ್: ಭಾರತದ ಕ್ರಿಕೆಟ್ ಅಭಿಮಾನಿಗಳು 10 ವರ್ಷದ ಐಸಿಸಿ ಟ್ರೋಫಿಯ ಬರ ಈ ಬಾರಿ ನೀಗುತ್ತದೆ ಎಂದು ಭಾವಿಸಿದ್ದರು. ಗೆಲುವಿನ ಕ್ಷಣವನ್ನು ಸಂಭ್ರಮಿಸಲು ಸಕಲ ಮಾನಸಿಕ ತಯಾರಿಯನ್ನು ಮಾಡಿಕೊಂಡಿದ್ದರು. ಆದರೆ ಕ್ರಿಕೆಟ್ ಪ್ರೇಮಿಗಳ ಆ ಕನಸು ನನಸಾಗಲಿಲ್ಲ. ಟ್ರೋಫಿ ಗೆಲುವಿನ ಸಂಭ್ರಮವನ್ನು ಮುಂದಿನ ಟೂರ್ನಿಗೆ ಮುಂದೂಡಬೇಕಾಗಿತು. ತವರಿನಲ್ಲೇ ನಡೆದ ವಿಶ್ವಕಪ್ನಲ್ಲಿ ತಂಡದ ಸೋಲು ಕಂಡಿದ್ದು ಕೋಟ್ಯಂತರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
2023ರ ವಿಶ್ವಕಪ್ ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಕ್ರಿಕೆಟ್ ವಿಶ್ಲೇಷಕರಿಂದ ಹಿಡಿದು ಅನೇಕರ ಅಭಿಪ್ರಾಯ ಆಗಿತ್ತು. ಇದಕ್ಕೆ ಕಾರಣ ತಂಡ ಸತತ 10 ಪಂದ್ಯಗಳನ್ನು ಟೂರ್ನಿಯಲ್ಲಿ ಗೆದ್ದಿರುವುದು. ಅಜೇಯವಾಗಿ ಫೈನಲ್ ತಲುಪಿದ್ದ ತಂಡ ವಿಶ್ವಕಪ್ ಉದ್ದಕ್ಕೂ ಸ್ಥಿರ ಪ್ರದರ್ಶನ ನೀಡಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ನಿರೀಕ್ಷಿತ ಪ್ರದರ್ಶನ ಬಾರದೆ 6 ವಿಕೆಟ್ಗಳ ಸೋಲನುಭವಿಸಬೇಕಾಯಿತು.
2013ರಲ್ಲಿ ಭಾರತ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಭಾರತ 5 ರನ್ನಿಂದ ಗೆದ್ದುಕೊಂಡಿತು. ನಂತರ ಭಾರತ ಆಡಿದ ಎಲ್ಲಾ ಐಸಿಸಿ ಟ್ರೋಫಿಗಳಲ್ಲಿ ಸೋಲನುಭವಿಸಿದೆ. ಅದರಲ್ಲೂ ಸೆಮೀಸ್ ಮತ್ತು ಫೈನಲ್ ಹಂತಕ್ಕೆ ಬಂದೇ ಎಲ್ಲಾ ಟ್ರೋಫಿಗಳನ್ನು ಕಳೆದುಕೊಂಡಿರುವುದು ವಿಪರ್ಯಾಸ.
-
India in ICC events since 2013:
— Mufaddal Vohra (@mufaddal_vohra) November 19, 2023 " class="align-text-top noRightClick twitterSection" data="
- Lost T20WC Final in 2014.
- Lost WC Semi in 2015.
- Lost T20 WC Semi in 2016.
- Lost CT Final in 2017.
- Lost WC Semi in 2019.
- Lost WTC Final in 2021.
- Lost T20WC Semi in 2022.
- Lost WTC Final in 2023.
- Lost WC Final in 2023.
Never ending… pic.twitter.com/2q8L8zJ9Pg
">India in ICC events since 2013:
— Mufaddal Vohra (@mufaddal_vohra) November 19, 2023
- Lost T20WC Final in 2014.
- Lost WC Semi in 2015.
- Lost T20 WC Semi in 2016.
- Lost CT Final in 2017.
- Lost WC Semi in 2019.
- Lost WTC Final in 2021.
- Lost T20WC Semi in 2022.
- Lost WTC Final in 2023.
- Lost WC Final in 2023.
Never ending… pic.twitter.com/2q8L8zJ9PgIndia in ICC events since 2013:
— Mufaddal Vohra (@mufaddal_vohra) November 19, 2023
- Lost T20WC Final in 2014.
- Lost WC Semi in 2015.
- Lost T20 WC Semi in 2016.
- Lost CT Final in 2017.
- Lost WC Semi in 2019.
- Lost WTC Final in 2021.
- Lost T20WC Semi in 2022.
- Lost WTC Final in 2023.
- Lost WC Final in 2023.
Never ending… pic.twitter.com/2q8L8zJ9Pg
10 ವರ್ಷಗಳಲ್ಲಿ 9 ಐಸಿಸಿ ಟ್ರೋಫಿ ಕಳೆದುಕೊಂಡ ಭಾರತ:
2014 ಟಿ20 ವಿಶ್ವಕಪ್: ಲೀಗ್ ಹಂತದಲ್ಲಿ 4 ಪಂದ್ಯಗಳನ್ನು ಗೆದ್ದಿದ್ದ ಟೀಮ್ ಇಂಡಿಯಾ ಸೆಮೀಸ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಫೈನಲ್ಗೆ ಪ್ರವೇಶಿಸಿತ್ತು. ಆದರೆ ಬಾಂಗ್ಲಾದಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವೆ ಫೈನಲ್ ಪಂದ್ಯ ನಡೆದಿತ್ತು. ಭಾರತ ನೀಡಿದ್ದ 130ರನ್ಗಳ ಗುರಿಯನ್ನು ಲಂಕನ್ನರು 2.1 ಓವರ್ ಮತ್ತು 6 ವಿಕೆಟ್ ಉಳಿಸಿಕೊಂಡು ಗೆದ್ದಿದ್ದರು.
2015ರ ಏಕದಿನ ವಿಶ್ವಕಪ್: ಈ ವಿಶ್ವಕಪ್ನಲ್ಲೂ ಭಾರತದ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದದ್ದು ಸೆಮೀಸ್ನಲ್ಲಿ. ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಉತ್ತಮವಾಗಿ ಆಡಿದ್ದ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಮೀಸ್ನಲ್ಲಿ ಎಡವಿ ಹೊರ ಬಿದ್ದಿತ್ತು. ಆಸ್ಟ್ರೇಲಿಯಾ ನೀಡಿದ್ದ 328 ರನ್ಗಳ ಗುರಿಯನ್ನು ಭೇದಿಸಲಾಗದೇ 46.5 ಓವರ್ಗೆ 233ಕ್ಕೆ ಆಲ್ಔಟ್ ಆಗಿ, 95ರನ್ಗಳ ಸೋಲನುಭವಿಸಿತ್ತು.
2016ರ ಟಿ20 ವಿಶ್ವಕಪ್: ಲೀಗ್ ಹಂತದಲ್ಲಿ ಒಂದೇ ಒಂದು ಸೋಲು ಕಂಡು ಸೆಮೀಸ್ ಪ್ರವೇಶಿಸಿದ್ದ ತಂಡ ವೆಸ್ಟ್ ಇಂಡೀಸ್ ವಿರುದ್ಧ ಪರಾಜಯ ಕಂಡಿತು. ಭಾರತ ನೀಡಿದ್ದ 192 ರನ್ಗಳ ಗುರಿಯನ್ನು ಕೆರಿಬಿಯನ್ನರು 2 ಬಾಲ್ ಉಳಿಸಿಕೊಂಡು 7 ವಿಕೆಟ್ಗಳಿಂದ ಗೆದ್ದುಕೊಂಡರು.
2017 ಚಾಂಪಿಯನ್ಸ್ ಟ್ರೋಫಿ: ಲೀಗ್ ಹಂತದಲ್ಲಿ ಲಂಕಾ ವಿರುದ್ಧ ಮಾತ್ರ ಸೋತ ಭಾರತ ಸೆಮೀಸ್ನಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ನಲ್ಲಿ ಕಳಪೆ ಬ್ಯಾಟಿಂಗ್ ಆಡಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲನುಭವಿಸಿತ್ತು. ಪಾಕ್ ನೀಡಿದ್ದ 338 ರನ್ ಗುರಿ ಬೆನ್ನತ್ತಿದ್ದ ಭಾರತ 30 ಓವರ್ಗೆ 158ಕ್ಕೆ ಆಲ್ಔಟ್ಗೆ ಶರಣಾಗಿ 180 ರನ್ಗಳ ಬೃಹತ್ ಹಿನ್ನಡೆಯಿಂದ ಸೋಲನುಭವಿಸಿತ್ತು.
2019 ಏಕದಿನ ವಿಶ್ವಕಪ್: ಈ ವಿಶ್ವಕಪ್ನಲ್ಲೂ ಭಾರತ ಒಂದೇ ಒಂದು ಸೋಲು ಕಂಡು ಸೆಮೀಸ್ ಪ್ರವೇಶ ಪಡೆದುಕೊಂಡಿತ್ತು. ಅಲ್ಲಿ ನ್ಯೂಜಿಲೆಂಡ್ ತಂಡ ಟೀಮ್ ಇಂಡಿಯಾವನ್ನು ಟೂರ್ನಿಯಿಂದ ಹೊರತಳ್ಳಿತ್ತು. ಕಿವೀಸ್ ಕೊಟ್ಟಿದ್ದ 239 ರನ್ಗಳ ಗುರಿ ಬೆನ್ನತ್ತಿದ್ದ ತಂಡ 221ಕ್ಕೆ ಆಲ್ಔಟ್ ಆಗಿ 18ರನ್ಗಳಿಂದ ಸೋಲನುಭವಿಸಿತ್ತು.
2021 ಚೊಚ್ಚಲ ಟೆಸ್ಟ್ ಚಾಂಪಿಯನ್ಶಿಪ್: ಐಸಿಸಿ ಹೊಸದಾಗಿ ಟೆಸ್ಟ್ ಚಾಂಪಿಯನ್ ಶಿಪ್ ಆರಂಭಿಸಿತ್ತು. ಭಾರತ ಎರಡು ವರ್ಷಗಳ ಕಾಲ ಎಲ್ಲಾ ಟೆಸ್ಟ್ ಸಿರೀಸ್ಗಳನ್ನು ಉತ್ತಮವಾಗಿ ಆಡಿದ ಹಿನ್ನೆಲೆಯಲ್ಲಿ ಮೊದಲ ತಂಡವಾಗಿ ಫೈನಲ್ ಪ್ರವೇಶ ಪಡೆದುಕೊಂಡಿತ್ತು. ಆದರೆ ಫೈನಲ್ನಲ್ಲಿ ಮುಖಾಮುಖಿ ಆದ ಕಿವೀಸ್ 8 ವಿಕೆಟ್ನಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
2022 ಟಿ20 ವಿಶ್ವಕಪ್: ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ ಸೋಲು ಕಂಡಿದ್ದ ಭಾರತ ಸೆಮೀಸ್ನಲ್ಲಿ ಸ್ಥಾನ ಪಡೆದುಕೊಂಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಸೆಮೀಸ್ನಲ್ಲಿ 10 ವಿಕೆಟ್ಗಳ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿತ್ತು.
2023 ಟೆಸ್ಟ್ ಚಾಂಪಿಯನ್ಶಿಪ್ ಮತ್ತು ವಿಶ್ವಕಪ್: ಈ ವರ್ಷ ನಡೆದ ಎರಡು ಐಸಿಸಿ ಟೂರ್ನಿಗಳಲ್ಲಿ ಫೈನಲ್ ಆಡಿದ ಭಾರತ ತಂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಟೆಸ್ಟ್ ಚಾಂಪಿಯನ್ ಶಿಪ್ ಮತ್ತು ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಭಾರತ ಸೋಲು ಕಂಡಿದೆ.
ಒಟ್ಟಾರೆ 9 ಐಸಿಸಿ ಟೂರ್ನಿಯಲ್ಲಿ ಭಾರತ 5 ಫೈನಲ್ ಪಂದ್ಯಗಳನ್ನು ಆಡಿ ರನ್ನರ್ ಅಪ್ ಆದರೆ, 4 ಸೆಮಿಫೈನಲ್ ಪಂದ್ಯವನ್ನು ಆಡಿ ಟೂರ್ನಿಯಿಂದ ಹೊರಬಿದ್ದಿದೆ. 9 ಪಂದ್ಯಗಳನ್ನು ಪ್ರಮುಖ ಹಂತದಲ್ಲೇ ಕಳೆದುಕೊಂಡಿರುವ ಭಾರತ ಐಸಿಸಿ ಟ್ರೋಫಿಯ ವಿಷಯದಲ್ಲಿ ಹೊಸ ಚೋಕರ್ಸ್ ಆಗುತ್ತಿದೆಯಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.
ಇದನ್ನೂ ಓದಿ: 'ನಿನ್ನೆ ನಮ್ಮ ದಿನವಲ್ಲ': ಪ್ರಧಾನಿ ಸಾಂತ್ವನ ಹೇಳುತ್ತಿರುವ ಭಾವುಕ ಫೋಟೋ ಹಂಚಿಕೊಂಡ ಶಮಿ