ಹೈದರಾಬಾದ್: 14ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ-ಆಫ್ಗೆ ಅಧಿಕೃತವಾಗಿ ಪ್ರವೇಶ ಪಡೆದುಕೊಂಡಿದೆ. ಈ ಮೂಲಕ ಈ ಆವೃತ್ತಿಯಲ್ಲಿ ಮೊದಲ ತಂಡವಾಗಿ ಮುಂದಿನ ಹಂತಕ್ಕೆ ಲಗ್ಗೆ ಹಾಕಿ ಹೊಸ ದಾಖಲೆ ಬರೆಯಿತು.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ 6 ವಿಕೆಟ್ಗಳ ಜಯ ಸಾಧಿಸಿರುವ ಸಿಎಸ್ಕೆ 18 ಪಾಯಿಂಟ್ ಪಡೆದುಕೊಂಡಿದೆ.
ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಸಿಎಸ್ಕೆ 2020ರ ಐಪಿಎಲ್ನಲ್ಲಿ ಅತಿ ಕಳಪೆ ಪ್ರದರ್ಶನ ನೀಡಿ ಪ್ರಥಮ ತಂಡವಾಗಿ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿತ್ತು. ಈ ಸಲ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ್ದು, ಎಲ್ಲ ತಂಡಗಳಿಗಿಂತಲೂ ಮೊದಲೇ ಪ್ಲೇ-ಆಫ್ಗೆ ಪ್ರವೇಶ ಪಡೆದಿದೆ. ಜೊತೆಗೆ, ಮಹೇಂದ್ರ ಸಿಂಗ್ ಧೋನಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.
ಕಳೆದ ವರ್ಷ ಧೋನಿ ಹೇಳಿದ್ದೇನು?
ಕಳೆದ ವರ್ಷದ ಐಪಿಎಲ್ನಲ್ಲಿ ಪ್ಲೇ-ಆಫ್ ಪ್ರವೇಶ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದ ವೇಳೆ ಧೋನಿ, ಲಕ್ಷಾಂತರ ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದ್ದರು. ಇದೇ ಸಂದರ್ಭದಲ್ಲಿ ಮುಂದಿನ ವರ್ಷ ನಾವು ಮತ್ತಷ್ಟು ಬಲಿಷ್ಠವಾಗಿ ಕಮ್ಬ್ಯಾಕ್ ಮಾಡಲಿದ್ದೇವೆ (We will come back stronger) ಎಂದು ಭರವಸೆ ಕೊಟ್ಟಿದ್ದರು. ಅದೇ ರೀತಿ ಈ ಸಲದ ಆವೃತ್ತಿಯಲ್ಲಿ ಆಡಿರುವ 11 ಪಂದ್ಯಗಳ ಪೈಕಿ 9ರಲ್ಲಿ ಗೆದ್ದಿದೆ. ಬ್ಯಾಟ್ಸ್ಮನ್ ಆಗಿ ರನ್ಗಳಿಕೆ ಮಾಡುವಲ್ಲಿ ಧೋನಿ ವಿಫಲಗೊಂಡಿದ್ದರೂ, ಓರ್ವ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಎಂಎಸ್ ಸಫಲರಾಗಿದ್ದಾರೆ.
ಹೈದರಾಬಾದ್ ವಿರುದ್ಧದ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿರುವ ಧೋನಿ, ಕಳೆದ ವರ್ಷವೇ ನಾನು ಈ ಮಾತು ಹೇಳಿದ್ದೆ. ಅದರಂತೆ ಇದೀಗ ಮತ್ತಷ್ಟು ಬಲಿಷ್ಠರಾಗಿ ಕಮ್ಬ್ಯಾಕ್ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ‘‘ಧೋನಿ ಮೆಂಟರ್ ಆಗಿ ಹಾಗೂ ರಾಹುಲ್ ಕೋಚ್ ಸ್ಥಾನದಲ್ಲಿ ನೋಡಲು ಬಯಸುತ್ತೇನೆ‘‘: ಹೀಗೆ ಹೇಳಿದ್ಯಾರು?
ದಾಖಲೆಯ 11ನೇ ಸಲ ಪ್ಲೇ-ಆಫ್ಗೆ ಲಗ್ಗೆ:
-
Thala Thala dhan 💛➡️💛#WhistlePodu #Yellove 🦁 pic.twitter.com/BrI0Ixbn33
— Chennai Super Kings - Mask P😷du Whistle P🥳du! (@ChennaiIPL) October 1, 2021 " class="align-text-top noRightClick twitterSection" data="
">Thala Thala dhan 💛➡️💛#WhistlePodu #Yellove 🦁 pic.twitter.com/BrI0Ixbn33
— Chennai Super Kings - Mask P😷du Whistle P🥳du! (@ChennaiIPL) October 1, 2021Thala Thala dhan 💛➡️💛#WhistlePodu #Yellove 🦁 pic.twitter.com/BrI0Ixbn33
— Chennai Super Kings - Mask P😷du Whistle P🥳du! (@ChennaiIPL) October 1, 2021
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಸಿಎಸ್ಕೆ ಹೊಸ ದಾಖಲೆ ಬರೆದಿದ್ದು, 12 ಆವೃತ್ತಿಗಳ ಪೈಕಿ ದಾಖಲೆಯ 11ನೇ ಸಲ ಪ್ಲೇ-ಆಫ್ಗೆ ಪ್ರವೇಶ ಪಡೆದಿದೆ. ಕಳೆದ ವರ್ಷ ಮಾತ್ರ ತಂಡ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಇದರ ಜೊತೆಗೆ 2016 ಹಾಗೂ 2017ರಲ್ಲಿ ಚೆನ್ನೈ ನಿಷೇಧಕ್ಕೊಳಗಾಗಿತ್ತು. ಐಪಿಎಲ್ನಲ್ಲಿ ಧೋನಿ ನೇತೃತ್ವದ ಸಿಎಸ್ಕೆ ಮೂರು ಸಲ ಚಾಂಪಿಯನ್ ಆಗಿ ಹೊರಹೊಮ್ಮಿದೆ.