ETV Bharat / sports

ಆರ್​ಸಿಬಿ ವಿರುದ್ಧ 69 ರನ್​ಗಳ ಭರ್ಜರಿ ಜಯ ಸಾಧಿಸಿ ಅಗ್ರಸ್ಥಾನಕ್ಕೇರಿದ ಚೆನ್ನೈ ಸೂಪರ್ ಕಿಂಗ್ಸ್​ - ಇಂದಿನ ಆರ್‌ಸಿಬಿ ತಂಡ

ಸಿಎಸ್​ಕೆ ನೀಡಿದ 192 ರನ್​ಗಳ ಗುರಿ ಪಡೆದ ಆರ್​ಸಿಬಿ ರವೀಂದ್ರ ಜಡೇಜಾ ಮತ್ತು ಇಮ್ರಾನ್ ತಾಹೀರ್ ದಾಳಿಗೆ ನಲುಗಿ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 122 ರನ್​ಗಳಿಸಿ 69 ರನ್​ಗಳ ಹೀನಾಯ ಸೋಲುಕಂಡಿತು.

ಸಿಎಸ್​ಕೆ ಚಾಂಪಿಯನ್ ಆಟಕ್ಕೆ ಮಣಿದ ಆರ್​ಸಿಬಿ
ಸಿಎಸ್​ಕೆ ಚಾಂಪಿಯನ್ ಆಟಕ್ಕೆ ಮಣಿದ ಆರ್​ಸಿಬಿ
author img

By

Published : Apr 25, 2021, 7:23 PM IST

ಮುಂಬೈ: ರವೀಂದ್ರ ಜಡೇಜಾ ಆಲ್​ರೌಂಡ್​ ಆಟದ ನೆರವಿನಿಂದ 3 ಬಾರಿಯ ಐಪಿಎಲ್ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ 69 ರನ್​ಗಳ ಅಂತರದಿಂದ ಆರ್​ಸಿಬಿಯನ್ನು ಮಣಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ರವೀಂದ್ರ ಜಡೇಜಾ ಮತ್ತು ಇಮ್ರಾನ್ ತಾಹೀರ್ ದಾಳಿಗೆ ನಲುಗಿದ ಆರ್​ಸಿಬಿ ಸಿಎಸ್​ಕೆ ನೀಡಿದ 192 ರನ್​ಗಳ ಗುರಿಗೆ ಪ್ರತಿಯಾಗಿ 9 ವಿಕೆಟ್​ ಕಳೆದುಕೊಂಡು 122 ರನ್​ಗಳಿಸಿ ಸೋಲು ಕಂಡಿತು.

ಆರಂಭಿಕ ಬ್ಯಾಟ್ಸ್​ಮನ್ ದೇವದತ್ ಪಡಿಕ್ಕಲ್ 34 ರನ್​ಗಳಿಸಿದ್ದೇ ತಂಡದ ಗರಿಷ್ಠ ಸ್ಕೋರ್​ ಆಯಿತು. ನಾಯಕ ವಿರಾಟ್ ಕೊಹ್ಲಿ 8 ರನ್​ಗಳಿಗೆ ಕರ್ರನ್​ಗೆ ವಿಕೆಟ್​ ಒಪ್ಪಿಸಿದರೆ, 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ವಾಷಿಂಗ್ಟನ್ ಸುಂದರ್ ಕೇವಲ​ 7 ರನ್​ಗಳಿಸಿ ಔಟಾದರು.

ಸ್ಫೋಟಕ ಬ್ಯಾಟ್ಸ್​ಮನ್​ಗಳಾದ ಗ್ಲೇನ್ ಮ್ಯಾಕ್ಸ್​ವೆಲ್ 22, ಎಬಿಡಿ 4 ಮತ್ತು ಕ್ರಿಸ್ಚಿಯನ್​ 1 ರನ್​ಗಳಿಸಿ ಔಟಾಗುವುದರೊಂದಿಗೆ ಆರ್​ಸಿಬಿ ಸೋಲು ಖಚಿತವಾಯಿತು. ಬಾಲಂಗೋಷಿಗಳಾದ ಕೈಲ್ ಜೆಮೀಸನ್​ 16 ರನ್​, ಹರ್ಷೆಲ್ ಪಟೇಲ್ ಡಕ್​ಔಟ್​, ಸೈನಿ 2 ರನ್​ಗಳಿಗೆ ವಿಕೆಟ್ ಒಪ್ಪಿಸಿದರು.

ಬ್ಯಾಟಿಂಗ್​ನಲ್ಲಿ ಅಬ್ಬರಿಸಿದ್ದ ಆಲ್​ರೌಂಡರ್​ ರವೀಂದ್ರ ಜಡೇಜಾ ಕೇವಲ 13 ರನ್​ ನೀಡಿ 3 ವಿಕೆಟ್ ಪಡೆದರೆ, ಇಮ್ರಾನ್ ತಾಹೀರ್ 16ಕ್ಕೆ 2, ಸ್ಯಾಮ್ ಕರ್ರನ್ 30ಕ್ಕೆ 1, ಶಾರ್ದುಲ್ ಠಾಕೂರ್ 1 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಫಾಫ್​ ಡು ಪ್ಲೆಸಿಸ್​(50) ಮತ್ತು ರವೀಂದ್ರ ಜಡೇಜಾ ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 191 ರನ್​ಗಳಿಸಿತ್ತು. ಜಡೇಜಾ ಕೊನೆಯ ಓವರ್​ನಲ್ಲಿ ಹರ್ಷಲ್​ ಪಟೇಲ್​ಗೆ 5 ಸಿಕ್ಸರ್​ ಸೇರಿದಂತೆ 37 ರನ್​ ಚಚ್ಚುವ ಮೂಲಕ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು. ಅರ್ಧಶತಕ ಮತ್ತು 3 ವಿಕೆಟ್​ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.