ETV Bharat / sports

ಅಭಿಮಾನಿಗಳ ತಲೆಗೆ ಹುಳಬಿಟ್ಟ ರೋಹಿತ್‌ ಶರ್ಮಾ ಖಾತೆಯಿಂದ ಪ್ರಕಟವಾದ ಟ್ವೀಟ್ಸ್!

author img

By

Published : Mar 1, 2022, 7:39 PM IST

ಕ್ರಿಕೆಟಿಗ ರೋಹಿತ್ ಶರ್ಮಾ ಖಾತೆಯಿಂದ ಏನೇನೋ ಟ್ವೀಟ್‌ಗಳು ಬರುತ್ತಿರುವುದರಿಂದ ಅವರ ಖಾತೆ ಹ್ಯಾಕ್ ಆಗಿರಬಹುದೇ ಎಂದು ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದೆ. ರೋಹಿತ್ ಸದಾ ಐಫೋನ್​ನಿಂದ ಟ್ವೀಟ್​ ಮಾಡುತ್ತಾರೆ, ಆದರೆ ಇಂದು ಟ್ವಿಟರ್​ ಡೆಕ್​ನಿಂದ ಟ್ವೀಟ್ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.

Cryptic Tweets from Rohit Sharma account
ರೋಹಿತ್ ಶರ್ಮಾ ಟ್ವಿಟರ್​

ಮುಂಬೈ: ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್ ಶರ್ಮಾ ಅವರು ಟ್ವಿಟರ್​ ಖಾತೆಯಿಂದ ಸಂಬಂಧವಿಲ್ಲದ ಕೆಲವು ಟ್ವೀಟ್​ಗಳು ಒಂದರ ಹಿಂದೊಂದರಂತೆ ಬರುತ್ತಿವೆ. ಇದರಿಂದ ಅವರ ಅಭಿಮಾನಿಗಳು, ಟ್ವಿಟರ್‌ ಖಾತೆಯನ್ನು ಯಾರಾದರೂ ಹ್ಯಾಕ್ ಮಾಡಿರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕೆಲವು ಸಮಯ ಅಂತರದಲ್ಲಿ ರೋಹಿತ್ ಖಾತೆಯಿಂದ ಏನೋನೋ ಟ್ವೀಟ್​ ಬರುತ್ತಿರುವುದೇ ಅಭಿಮಾನಿಗಳ ಅನುಮಾನಕ್ಕೆ ಕಾರಣ. ರೋಹಿತ್ ಸದಾ ಐಫೋನ್​ನಿಂದ ಟ್ವೀಟ್​ ಮಾಡುತ್ತಾರೆ, ಆದರೆ ಇಂದು ಟ್ವಿಟರ್​ ಡೆಕ್​ನಿಂದ ಟ್ವೀಟ್ ಮಾಡಿರುವುದು ವಿಶೇಷವಾಗಿದೆ.

ಆ ಟ್ವೀಟ್​ಗಳು ಇವೇ ನೋಡಿ...

  • ಕ್ರಿಕೆಟ್​ ಬಾಲ್​ಗಳನ್ನು ತಿನ್ನಬಹುದು, ನಿಜ ಅಲ್ಲವೇ?
  • ನಿಮಗೆ ಗೊತ್ತೆ? ನಮ್ಮ ಕುರಿತು ಬಂದಂತಹ ಊಹಾಪೋಹಾಗಳಿಂದ ಅತ್ಯುತ್ತಮವಾದ ಬಾಕ್ಸಿಂಗ್​ ಬ್ಯಾಗ್​ ಮಾಡಬಹುದು.
  • ನನಗೆ ಕಾಯಿನ್ ಟಾಸ್​ ಎಂದರೆ ಬಹಳ ಇಷ್ಟ, ಪ್ರತ್ಯೇಕವಾಗಿ ಅದು ನನಗೆ ಅನುಕೂಲವಾದಾಗ...

ಹೀಗೆ ಮಂಗಳವಾರ ಬೆಳಿಗ್ಗೆಯಿಂದ ರೋಹಿತ್ ಶರ್ಮಾ ಟ್ವಿಟರ್​ನಿಂದ ಕೆಲವು ಟ್ವೀಟ್​ಗಳು ಬರುತ್ತಿವೆ. ಇವನ್ನು ಗಮನಿಸಿದರೆ, ಖಂಡಿತವಾಗಿಯೂ ರೋಹಿತ್ ಈ ಟ್ವೀಟ್​ ಮಾಡಿದ್ದಾರೆ ಎನಿಸುವುದಿಲ್ಲ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಮತ್ತು ಖಾತೆ ಹ್ಯಾಕ್ ಆಗಿರಬಹುದು ಎನ್ನುತ್ತಿದ್ದಾರೆ.

ಇತ್ತೀಚೆಗೆ ಪ್ರಮುಖ ವ್ಯಕ್ತಿಗಳ ಟ್ವಿಟರ್​ ಖಾತೆಗಳು ಹ್ಯಾಕ್​ ಆಗುವುದು ಸಾಮಾನ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಟ್ವಿಟರ್​ ಖಾತೆಯನ್ನೇ ಕೆಲವು ದಿನಗಳ ಹಿಂದೆ ಯಾರೋ ಹ್ಯಾಕ್ ಮಾಡಿದ್ದರು. ನಂತರ ಕೆಲವೇ ನಿಮಿಷದಲ್ಲಿ ಖಾತೆಯನ್ನು ಮರುಸ್ಥಾಪಿಸಲಾಗಿತ್ತು. ಇನ್ನು ಕ್ರಿಕೆಟರ್​ಗಳ ಖಾತೆಗಳೂ ಕೂಡಾ ಹ್ಯಾಕ್ ಆಗುವುದು ತೀರಾ ಸಾಮಾನ್ಯ ಸಂಗತಿಯಾಗುತ್ತಿದೆ.

ಇದನ್ನೂ ಓದಿ:ಕೊಹ್ಲಿ 100ನೇ ಟೆಸ್ಟ್: ತಂದೆ ಸಾವಿನ ದಿನದಂದೂ ವಿರಾಟ್​ ಬದ್ಧತೆಯ ಆಟ ನೆನೆದ ಪಾರ್ಟ್ನರ್​ ಪುನೀತ್ ಬಿಶ್ತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.