ETV Bharat / sports

2028ರ ಒಲಿಂಪಿಕ್ಸ್​​ಗೆ ಕ್ರಿಕೆಟ್​ ಸೇರಿಸುವ ಪ್ರಸ್ತಾಪಕ್ಕೆ ಐಸಿಸಿ ಚಿಂತನೆ - ಉಪಖಂಡದ ಕ್ರಿಕೆಟ್ ಅಭಿಮಾನಿಗಳು

2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದಿದ್ದ ವಿಶ್ವಕಪ್​ ಪರಿಗಣನೆಗೆ ತೆಗೆದುಕೊಂಡರೆ, ವಿಶ್ವದಾದ್ಯಂತ ಸುಮಾರು 545 ಮಿಲಿಯನ್ ಅಭಿಮಾನಿಗಳನ್ನು ಆಕರ್ಷಿಸುವ ಮೂಲಕ ತನ್ನ ವ್ಯಾಪ್ತಿಯನ್ನು ತೋರಿಸಿದೆ.

2028ರ ಒಲಿಂಪಿಕ್ಸ್​​ಗೆ ಕ್ರಿಕೆಟ್​ ಸೇರಿಸುವ ಪ್ರಸ್ತಾಪಕ್ಕೆ ಐಸಿಸಿ ಚಿಂತನೆ...

author img

By

Published : May 23, 2021, 3:45 PM IST

ನವದೆಹಲಿ: ಕ್ರಿಕೆಟ್​ ಹೊಂದಿರುವ ಶತಕೋಟಿ ಅಭಿಮಾನಿಗಳಲ್ಲಿ ಶೇ 92ರಷ್ಟನ್ನು ಹೊಂದಿರುವ ಭಾರತ ಉಪಖಂಡವನ್ನು ಉಲ್ಲೇಖಿಸಿ 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಗೊಳಿಸುವಂತೆ ಒತ್ತಾಯಿಸಲು ಐಸಿಸಿ ನಿರ್ಧರಿಸಿದೆ.

"ಲಾಸ್​ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಅನ್ನು ಸ್ವೀಕರಿಸಿದರೆ, ಭಾರತದಲ್ಲಿನ ಅಭಿಮಾನಿಗಳಿಂದ ಒಲಿಂಪಿಕ್ಸ್​ ಹೆಚ್ಚು ಎಂಗೇಜ್​ಮೆಂಟ್​ ಗಳಿಸುವ ಅವಕಾಶ ದೊರೆಯುತ್ತದೆ" ಎಂದು ಐಸಿಸಿ ಒತ್ತಿ ಹೇಳಿದೆ. ಈ ಪ್ರದೇಶದಲ್ಲಿ ಬೇರೆ ಯಾವುದೇ ಕ್ರೀಡೆಗಳಿಗಿರುವುದಕ್ಕಿಂತ ಹೆಚ್ಚು ಅಭಿಮಾನಿಗಳನ್ನು ಕ್ರಿಕೆಟ್​ ಹೊಂದಿದೆ ಎಂದು ಐಸಿಸಿ ಉಲ್ಲೇಖಿಸಿದೆ.

2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದಿದ್ದ ವಿಶ್ವಕಪ್​ ಪರಿಗಣನೆಗೆ ತೆಗೆದುಕೊಂಡರೆ, ವಿಶ್ವದಾದ್ಯಂತ ಸುಮಾರು 545 ಮಿಲಿಯನ್ ಅಭಿಮಾನಿಗಳನ್ನು ಆಕರ್ಷಿಸುವ ಮೂಲಕ ತನ್ನ ವ್ಯಾಪ್ತಿಯನ್ನು ತೋರಿಸಿದೆ.

ಐಸಿಸಿ ತನ್ನ ವಿವಿಧ ಸಾಮಾಜಿಕ ಜಾಲತಾಣದಲ್ಲಿ 2019ರ ಏಕದಿನ ವಿಶ್ವಕಪ್​ನ ವಿಡಿಯೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಗಮನಾರ್ಹ ವೀಕ್ಷಕರ ಸಂಖ್ಯೆಯನ್ನು ಪಡೆದುಕೊಂಡಿದೆ. ಫೇಸ್​ಬುಕ್​ನಲ್ಲಿ ಹಂಚಿಕೊಂಡ ವಿಡಿಯೋಗಳು 4.6 ಬಿಲಿಯನ್ ವೀಕ್ಷಣೆಯಾಗಿದ್ದರೆ, ಯೂಟ್ಯೂಟ್​ನಲ್ಲಿ 3.5 ಬಿಲಿಯನ್ ವೀಕ್ಷಣೆಯಾಗಿದೆ. #CWC10 ಎಂಬ ಹ್ಯಾಶ್​ಟ್ಯಾಗ್​ನಲ್ಲಿ ಸುಮಾರು 31 ಮಿಲಿಯನ್ ಟ್ವೀಟ್ ಮಾಡಲಾಗಿದೆ. ಅಲ್ಲದೆ ಈ ಅವಧಿಯಲ್ಲಿ ​ಕ್ರಿಕೆಟ್​ 14 ಮಿಲಿಯನ್​ ಹೊಸ ಹಿಂಬಾಲಕರನ್ನು ಪಡೆದುಕೊಂಡಿದೆ. ಇದೆಲ್ಲಾ ಮಾಹಿತಿಯುಳ್ಳ ಒಂದು ದಾಖಲೆಯನ್ನು ಐಸಿಸಿ ತಯಾರಿಸಿದ್ದು, ಕ್ರಿಕೆಟ್ ಆಟವನ್ನು 2028ರ ಒಲಿಂಪಿಕ್ಸ್​ಗೆ ಸೇರ್ಪಡೆಗೊಳಿಸಲು ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಕ್ರಿಕೆಟ್​ ವಿಶ್ವಕಪ್​ನ ಈ ದಾಖಲೆಯನ್ನು 2016ರ ರಿಯೋ ಒಲಿಂಪಿಕ್ಸ್​ನೊಂದಿಗೆ ಹೋಲಿಕೆ ಮಾಡುವ ಮೂಲಕ ಕ್ರಿಕೆಟ್​ನ ವ್ಯಾಪ್ತಿಯನ್ನು ಒಲಿಂಪಿಕ್ಸ್ ಸಮಿತಿಗೆ ತೋರಿಸಲು ಪ್ರಯತ್ನಿಸಿದೆ. 2016ರ ರಿಯೋ ಒಲಿಂಪಿಕ್ಸ್​ ಭಾರತದಲ್ಲಿ 191 ಮಿಲಿಯನ್​ ವೀಕ್ಷಕರನ್ನು ಆಕರ್ಷಿಸಿದ್ದರೆ, 2019ರ ಕ್ರಿಕೆಟ್ ವಿಶ್ವಕಪ್​ 545 ಮಿಲಿಯನ್​ ವೀಕ್ಷಕರನ್ನು ಆಕರ್ಷಿಸಿದೆ.

ಹಾಗಾಗಿ 2028ರ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​ ಸೇರ್ಪಡೆಯಾಗಿ, ಭಾರತೀಯ ಕ್ರಿಕೆಟ್​ ಮಂಡಳಿ ತನ್ನ ಪುರುಷ ಮತ್ತು ಮಹಿಳಾ ಕ್ರಿಕೆಟ್​ ತಂಡವನ್ನು ಕಳುಹಿಸಲು ಒಪ್ಪಿಗೆ ಸೂಚಿಸಿದರೆ, ಒಲಿಂಪಿಕ್ಸ್​ಗೆ​ ಅತ್ಯಂತ ಹೆಚ್ಚು ಬೆಂಬಲ ಸಿಗಲಿದೆ ಎಂದು ಐಸಿಸಿ ತಿಳಿಸಿದೆ. ವಿಶ್ವ ಕ್ರಿಕೆಟ್ ಮಂಡಳಿಯ ಈ ಪ್ರಸ್ತಾಪಕ್ಕೆ ಕ್ರಿಕೆಟ್​ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್​ ಮತ್ತು ರಿಕಿ ಪಾಂಟಿಂಗ್ ಕೂಡ ಬೆಂಬಲ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.