ETV Bharat / sports

Praveen Kumar: ಕಾರು ಅಪಘಾತ.. ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಕ್ರಿಕೆಟಿಗ ಪ್ರವೀಣ್​ ಕುಮಾರ್​​ - ETV Bharath Kannada news

ಮಂಗಳವಾರ ರಾತ್ರಿ ಕ್ರಿಕೆಟಿಗ ಪ್ರವೀಣ್​ ಕುಮಾರ್​ ಅವರ ಕಾರಿಗೆ ಅಪಘಾತವಾಗಿದೆ. ಈ ವೇಳೆ ಕಾರಿನಲ್ಲಿದ್ದ ಪ್ರವೀಣ್​ ಹಾಗೂ ಅವರ ಮಗನಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

Praveen Kumar
Praveen Kumar
author img

By

Published : Jul 5, 2023, 12:13 PM IST

Updated : Jul 5, 2023, 12:50 PM IST

ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಕ್ರಿಕೆಟಿಗ ಪ್ರವೀಣ್​ ಕುಮಾರ್​​

ಮೀರತ್(ಉತ್ತರ ಪ್ರದೇಶ): ವೇಗವಾಗಿ ಬಂದ ಕಂಟೈನರ್​​ ಮಂಗಳವಾರ ತಡರಾತ್ರಿ ಮಾಜಿ ಕ್ರಿಕೆಟಿಗ ಪ್ರವೀಣ್​ ಕುಮಾರ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರವೀಣ್​ ಕುಮಾರ್​ ಮತ್ತು ಅವರ ಮಗ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೆ ಡಿಕ್ಕಿಯ ರಭಸಕ್ಕೆ ಪ್ರವೀಣ್​ ಕುಮಾರ್ ಅವರ ಕಾರು ಜಖಂಗೊಂಡಿದೆ. ಮುಲ್ತಾನ್ ನಗರದಲ್ಲಿರುವ ತಮ್ಮ ನಿವಾಸದಿಂದ ಪ್ರವೀಣ್ ಅವರು ಪಾಂಡವ್ ನಗರಕ್ಕೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಮಂಗಳವಾರ ತಡರಾತ್ರಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಿಷರಿ ಇಂಟರ್‌ಸೆಕ್ಷನ್ ಬಳಿ ಅವರ ಕಾರಿಗೆ ಕಂಟೈನರ್​ ಡಿಕ್ಕಿ ಹೊಡೆದಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಜನ ಲಾರಿಯ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಿಒ ಅರವಿಂದ್ ಚೌರಾಸಿಯಾ ಅವರು ಮಾಹಿತಿ ಪಡೆದ ತಕ್ಷಣ ತಾವೇ ತಕ್ಷಣ ಸ್ಥಳಕ್ಕೆ ಬಂದಿದ್ದರು. ಈ ಅವಘಡದಲ್ಲಿ ಪ್ರವೀಣ್ ಕುಮಾರ್ ಹಾಗೂ ಅವರ ಪುತ್ರ ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ. ಘಟನೆಯ ನಂತರ ಪ್ರವೀಣ್ ಕುಮಾರ್ ಮತ್ತು ಅವರ ಮಗನನ್ನು ಸುರಕ್ಷಿತವಾಗಿ ಅವರ ಮನೆಗೆ ಕರೆದೊಯ್ಯಲಾಯಿತು. ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮೀರತ್‌ನ ಬಾಗ್‌ಪತ್ ರಸ್ತೆಯಲ್ಲಿರುವ ಮುಲ್ತಾನ್ ನಗರದಲ್ಲಿ ಪ್ರವೀಣ್ ವಾಸಿಸುತ್ತಿದ್ದಾರೆ.

ಪ್ರವೀಣ್​ ಅವರು ಲ್ಯಾಂಡ್​​ರೋವರ್​ನ ಡಿಫೆಂಡರ್ ಕಾರಿನಲ್ಲಿ ಆಯುಕ್ತರ ನಿವಾಸದ ಬಳಿ ತಲುಪುತ್ತಿದ್ದಂತೆಯೇ ಎದುರಿನಿಂದ ವೇಗವಾಗಿ ಬಂದ ಕಂಟೈನರ್​ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂಭಾಗ ಜಖಂ ಆಗಿದೆ. ಪ್ರವೀಣ್ ಕುಮಾರ್ ಮತ್ತು ಅವರ ಪುತ್ರ ಸುರಕ್ಷಿತವಾಗಿದ್ದಾರೆ.

ಪ್ರವೀಣ್ ಕುಮಾರ್ ಅವರು ಟೆಸ್ಟ್, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಏಕದದಿನ ಸ್ವರೂಪದಲ್ಲಿ ಅವರು ಭಾರತಕ್ಕಾಗಿ ಆಡಿದ 68 ಪಂದ್ಯಗಳಲ್ಲಿ 5.13ರ ಎಕಾನಮಿ ದರದಲ್ಲಿ 36.03 ರ ಸ್ಟ್ರೈಕ್ ರೇಟ್‌ನಿಂದ 78 ವಿಕೆಟ್‌ ಪಡೆದಿದ್ದಾರೆ 31 ರನ್​ ಬಿಟ್ಟುಕೊಟ್ಟು 4 ವಿಕೆಟ್​ ಕಬಳಿಸಿದ್ದು, ಅವರ ಅತ್ಯುತ್ತಮ ಸ್ಪೆಲ್​ ಆಗಿದೆ. ಭಾರತಕ್ಕಾಗಿ 6 ಟೆಸ್ಟ್​ ಮತ್ತು 10 ಟಿ 20 ಪಂದ್ಯಗಳನ್ನು ಆಡಿದ್ದಾರೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅವರು 119 ಪಂದ್ಯಗಳನ್ನು ಪ್ರತಿನಿಧಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್​ 30 ರಂದು ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ರಿಷಭ್​ ಪಂತ್​ ಗಂಭೀರ ಅಪಘಾತಕ್ಕೆ ಒಳಗಾಗಿದ್ದರು. ಅವರ ಕಾರು ಅಪಘಾತದ ಪರಿಣಾಮ ಬೆಂಕಿ ತಗುಲಿ ಸ್ಥಳದಲ್ಲೇ ಸುಟ್ಟು ಕರಕಲಾಗಿತ್ತು. ಪಂತ್​ ಅವರ ಸಮಯ ಪ್ರಜ್ಞೆಯಿಂದ ಅವರು ಘಟನೆ ನಡೆದ ಕೂಡಲೇ ಕಾರಿನಿಂದ ಹೊರ ಬಂದು ಬದುಕುಳಿದಿದ್ದರು. ಅವರಿಗೆ ಅಲ್ಲಿ ಸಂಚರಿಸುತ್ತಿದ್ದ ಬಸ್​ ಚಾಲಕರು ಸಹಾಯ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು. ಈಗ ರಿಷಭ್​​ ಪಂತ್​ ಗಾಯದಿಂದ ಗುಣಮುಖರಾಗಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅಪಘಾತದಿಂದಾಗಿ ಪಂತ್​ ಭಾರತದ ತಂಡದಿಂದ ಸುಮಾರು ಒಂದು ವರ್ಷ ಹೊರಗುಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: Watch.. ಸ್ಕಿಡ್ ಆಗಿ ವೇಗದಲ್ಲಿ ಬಂದು ಗುದ್ದಿದ ಕಾರು: ತಾಯಿ, ಮಗಳು ಸೇರಿ ಮೂವರ ದುರ್ಮರಣ.. ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

Last Updated : Jul 5, 2023, 12:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.