ಐರ್ಲೆಂಡ್: ಐರ್ಲೆಂಡ್ ಕ್ರಿಕೆಟ್ ಬೋರ್ಡ್ ಕಂಡಿರುವ ಅಪ್ರತಿಮ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಕೆವಿನ್ ಒಬ್ರೇನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ಗುಡ್‌ಬೈ ಹೇಳಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದ ಇವರು ಇದೀಗ ಟೆಸ್ಟ್ ಹಾಗು ಟಿ20 ಕ್ರಿಕೆಟ್ನಿಂದಲೂ ನಿವೃತ್ತಿ ಹೊಂದಿದ್ದಾರೆ.
-
Thanks ☘️ pic.twitter.com/E4335nE8ls
— Kevin O'Brien (@KevinOBrien113) August 16, 2022 " class="align-text-top noRightClick twitterSection" data="
">Thanks ☘️ pic.twitter.com/E4335nE8ls
— Kevin O'Brien (@KevinOBrien113) August 16, 2022Thanks ☘️ pic.twitter.com/E4335nE8ls
— Kevin O'Brien (@KevinOBrien113) August 16, 2022
2006ರಲ್ಲಿ ಐರ್ಲೆಂಡ್ ತಂಡದ ಪರ ಪದಾರ್ಪಣೆ ಮಾಡಿದ್ದ ಆಟಗಾರ 2021ರ ವಿಶ್ವಕಪ್ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. 2007ರಲ್ಲಿ ವೆಸ್ಟ್ ಇಂಡೀಸ್ನಲ್ಲಿ ಆಯೋಜನೆಗೊಂಡಿದ್ದ ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಅಬ್ಬರಿಸಿದ್ದ ಒಬ್ರೇನ್ ಬಲಿಷ್ಠ ತಂಡಕ್ಕೆ ಸೋಲಿನ ರುಚಿ ತೋರಿಸಿ ವಿಶ್ವ ಕ್ರಿಕೆಟ್ ಗಮನವನ್ನು ತನ್ನತ್ತ ಸೆಳೆದಿದ್ದರು.
ಇದನ್ನೂ ಓದಿ: 2025ರ ಮಹಿಳಾ ವಿಶ್ವಕಪ್‌ಗೆ ಭಾರತ ಆತಿಥ್ಯ: 301 ಪಂದ್ಯಗಳ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ
2011ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿಯೂ ಒಬ್ರೇನ್ ಆರ್ಭಟಿಸಿದ್ದರು. ಇಂಗ್ಲೆಂಡ್ ನೀಡಿದ್ದ 328 ರನ್ಗಳ ಗುರಿ ಬೆನ್ನತ್ತಿದ ಐರ್ಲೆಂಡ್ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಕಣಕ್ಕಿಳಿದಿದ್ದ ಇವರು ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿ, ವಿಶ್ವದಾಖಲೆಯ ಆಟವಾಡಿದ್ದರು. ಇದರ ಜೊತೆಗೆ, ತಂಡಕ್ಕೆ ಗೆಲುವು ದಕ್ಕಿಸಿಕೊಟ್ಟಿದ್ದರು. ಈ ಪಂದ್ಯದಲ್ಲಿ ಒಬ್ರೇನ್ 63 ಎಸೆತಗಳನ್ನೆದುರಿಸಿ 113ರನ್ ಗಳಿಸಿದ್ದರು.
ಕೆವಿನ್ ಒಬ್ರೇನ್ 153 ಏಕದಿನ ಪಂದ್ಯಗಳನ್ನಾಡಿದ್ದು 3,619 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಶತಕ, 18 ಅರ್ಧಶತಕ ಸೇರಿವೆ. 114 ವಿಕೆಟ್‌ಗಳನ್ನೂ ಇವರು ಕಬಳಿಸಿದ್ದಾರೆ. 110 ಟಿ20 ಪಂದ್ಯಗಳಳಲ್ಲಿ 1,973 ರನ್ಗಳಿಸಿದ್ದಾರೆ. ಐರ್ಲೆಂಡ್ ಪರ ಅತಿ ಹೆಚ್ಚು ರನ್ಗಳಿಸಿರುವ ಪೈಕಿ ಕೆವಿನ್ ಮೂರನೇ ಸ್ಥಾನದಲ್ಲಿದ್ದಾರೆ.