ಇಸ್ಲಾಮಾಬಾದ್(ಪಾಕಿಸ್ತಾನ): ವಿಶ್ವಕಪ್ನಲ್ಲಿ ನಾವು ಭಾರತ ತಂಡದ ವಿರುದ್ಧ ಆಡುತ್ತಿದ್ದೇವೆ ಎಂದುಕೊಂಡೇ ಪ್ರತಿಯೊಂದು ತಂಡದ ವಿರುದ್ಧ ಆಟವಾಡುತ್ತೇವೆ ಎಂದು ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಹೇಳಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಸರ್ಫರಾಜ್ ನಾವು ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಒಂದು ಪಂದ್ಯ ಆಡುತ್ತೇವೆ. ಆದ್ರೆ ಇನ್ನುಳಿದ ತಂಡಗಳನ್ನೂ ನಾವು ಭಾರತ ಎಂದೇ ಪರಿಗಣಿಸಿ ಆಟವಾಡುತ್ತೇವೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ 11 ಏಕದಿನ ವಿಶ್ವಕಪ್ ಟೂರ್ನಮೆಂಟ್ಗಳು ನಡೆದಿದ್ದು, ಪಾಕಿಸ್ತಾನ ತಂಡ ಭಾರತದ ವಿರುದ್ಧ ಒಂದು ಪಂದ್ಯವನ್ನೂ ಗೆದ್ದಿಲ್ಲ.
ಈಗಾಗಲೆ 2019ರ ವಿಶ್ವಕಪ್ ಟೂರ್ನಮೆಂಟ್ಗೆ ಪಾಕಿಸ್ತಾನ ತಂಡವನ್ನ ಆಯ್ಕೆ ಮಾಡಲಾಗಿದ್ದು, ಯುವ ಆಟಗಾರರೊಂದಿಗೆ ಹಿರಿಯ ಆಟಗಾರ ಶೋಯಬ್ ಮಲ್ಲಿಕ್ ಹಾಗೂ ಮೊಹಮ್ಮದ್ ಹಫೀಜ್ ಕೂಡಾ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.